‘ಚಿತ್ರೋದ್ಯಮಕ್ಕೆ ಬುನಾದಿ ಹಾಕಿದ ಭಕ್ತವತ್ಸಲ’

7

‘ಚಿತ್ರೋದ್ಯಮಕ್ಕೆ ಬುನಾದಿ ಹಾಕಿದ ಭಕ್ತವತ್ಸಲ’

Published:
Updated:
Deccan Herald

ಬೆಂಗಳೂರು: ‘ವಿಶಾಲ ಮೈಸೂರು ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನಾಗಿ ರೂಪಿಸಿ, ಭದ್ರ ಬುನಾದಿ ಹಾಕಿದ ಶ್ರೇಯಸ್ಸು ಎಂ.ಭಕ್ತವತ್ಸಲ ಅವರಿಗೆ ಸಲ್ಲುತ್ತದೆ’ ಎಂದು ಚಿತ್ರ ನಿರ್ದೇಶಕ ಬಿ.ಸುರೇಶ್‌ ಸ್ಮರಿಸಿದರು.

ನಗರದ ಸಾಹಿತಿ ಮತ್ತು ಕಲಾವಿದರ ವೇದಿಕೆ ಮಂಗಳವಾರ ಆಯೋಜಿಸಿದ್ದ ‘ಎಂ.ಭಕ್ತವತ್ಸಲ ತಮಗೆ ಗೌರವ ಪ್ರಣಾಮಗಳು‌’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಕ್ತ ಅವರು ಅಸ್ಖಲಿತ ಭಾಷಾ ಜ್ಞಾನ ಹಾಗೂ ಬಹುಮುಖ ಪ್ರತಿಭೆಯನ್ನು ಹೊಂದಿದ್ದರು. ಚಿತ್ರ ರಂಗಕ್ಕೆ ಶಬಾನಾ ಆಜ್ಮಿಯಂತಹ ನೂರಾರು ‌ಕಲಾವಿದರನ್ನು ಪರಿಚ ಯಿಸಿದ ಹೆಗ್ಗಳಿಗೆ ಅವರದ್ದು’ ಎಂದರು.

‘ಸಂಗೀತ, ಸಾಂಸ್ಕೃತಿಕರಂಗ, ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಭಕ್ತವತ್ಸಲ ಅವರ ಅಂತಿಮ ಸಂಸ್ಕಾರದಲ್ಲಿ ಚಿತ್ರರಂಗದ ಒಬ್ಬ ಗಣ್ಯರನ್ನೂ ನಾನು ಕಾಣಲಿಲ್ಲ’ ಎಂದು ಪತ್ರಕರ್ತ ಎಂ.ಕೆ.ಭಾಸ್ಕರರಾವ್ ವಿಷಾದಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೇಗೌಡ, ನಿವೃತ್ತ ಐಎಎಸ್‌ ಅಧಿಕಾರಿಗಳಾದ ಚಿರಂಜೀವಿ ಸಿಂಗ್, ಐ.ಎಂ.ವಿಠಲಮೂರ್ತಿ ಭಕ್ತವತ್ಸಲ ಅವರ ನೆನಪುಗಳನ್ನು ಸ್ಮರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !