ಜನಮಾನಸದಲ್ಲಿ ವಿಷ್ಣು ಅಮರ: ಎನ್‌.ಮಹೇಶ್‌

7
ವಿಷ್ಣುವರ್ಧನ್‌ ಸ್ಮಾರಕ ನಿರ್ಮಿಸಿ: ಸರ್ಕಾರಕ್ಕೆ ಅಭಿಮಾನಿಗಳ ಒತ್ತಾಯ

ಜನಮಾನಸದಲ್ಲಿ ವಿಷ್ಣು ಅಮರ: ಎನ್‌.ಮಹೇಶ್‌

Published:
Updated:
Prajavani

ಚಾಮರಾಜನಗರ: 'ಖ್ಯಾತ ನಟ ದಿವಂಗತ ಡಾ.ವಿಷ್ಣುವರ್ಧನ್‌ ಅವರು ತಮ್ಮ ನಟನೆಯಿಂದ ಜನಮಾನಸದಲ್ಲಿ ಅಮರರಾಗಿದ್ದಾರೆ’ ಎಂದು ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅಭಿಪ್ರಾಯಪಟ್ಟರು.

ನಗರದ ನ್ಯಾಯಾಲಯ ರಸ್ತೆಯಲ್ಲಿರುವ ವಿಶ್ವ ಹಿಂದೂ ಪರಿಷತ್ ಶಾಲೆಯ ಸಮೀಪದ ಆವರಣದಲ್ಲಿ ಕನ್ನಡ ನೆಲ, ಜಲ, ಸಾಂಸ್ಕೃತಿಕ ಯುವ ವೇದಿಕೆ ವತಿಯಿಂದ ಬುಧವಾರ ರಾತ್ರಿ ನಡೆದ ವಿಷ್ಣು ನೆನಪಿನೋತ್ಸವ, ವಿಷ್ಣು ರಸಸಂಜೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಾಗರಹಾವು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟರು. ಡಾ. ರಾಜ್‌ಕುಮಾರ್, ಅಂಬರೀಷ್‌ ಅವರಂತೆ ವಿಷ್ಣವರ್ಧನ್‌ ಕೂಡ ಅಪ್ರತಿಮ ನಟ. ಅಂತಹ ನಟರನ್ನು ಸ್ಮರಿಸುವ ಕೆಲಸವನ್ನು ಕನ್ನಡ ನೆಲ, ಜಲ, ಸಾಂಸ್ಕೃತಿಕ ಯುವ ವೇದಿಕೆ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

ನಟ ಬಸವಟ್ಟಿ ಲೋಕೇಶ್ ಮಾತನಾಡಿ, ‘ಸರ್ಕಾರ ವಿಷ್ಣುವರ್ಧನ್ ಸ್ಮಾರಕವನ್ನು ಶೀಘ್ರದಲ್ಲೇ ಮಾಡಬೇಕು. ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಬಾರದು’ ಎಂದರು.

ಡಿವೈಎಸ್‌ಪಿ ಸಿ.ಟಿ.ಜಯಕುಮಾರ್ ಮಾತನಾಡಿ, ‘ಕುಟುಂಬ ಸಮೇತರಾಗಿ ಕುಳಿತು ವೀಕ್ಷಿಸುವಂತಹ ಅಭಿರುಚಿ ಇರುವ ಸಿನಿಮಾಗಳಲ್ಲಿ ವಿಷ್ಣುವರ್ಧನ್‌ ಅವರು ನಟಿಸುತ್ತಿದ್ದರು. ಅವರೊಬ್ಬ ಮೇರುನಟ’ ಎಂದರು.

ಕನ್ನಡ ನೆಲ, ಜಲ, ಸಾಂಸ್ಕೃತಿಕ ಯುವ ವೇದಿಕೆ ಜಿಲ್ಲಾಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತನಾಡಿ, ‘ವಿಷ್ಣುವರ್ಧನ್‌ ಅವರು ನಿಧನರಾಗಿ 9 ವರ್ಷಗಳೇ ಉರುಳಿದೆ. ಈವರೆಗೆ ಆಡಳಿತ ನಡೆಸಿದ ಸರ್ಕಾರಗಳು ಅವರ ಸ್ಮಾರಕ ನಿರ್ಮಾಣ ಮಾಡದೇ ಇರುವುದು ದುರಂತದ ಸಂಗತಿ. ಕೂಡಲೇ, ರಾಜ್ಯ ಸರ್ಕಾರ ವಿಷ್ಣು ಸ್ಮಾರಕ ನಿರ್ಮಾಣ ಮಾಡದಿದ್ದರೆ ಅಭಿಮಾನಿಗಳು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಸಾಧಕರಿಗೆ ಸನ್ಮಾನ: ಡಾ.ಮಹೇಶ್, ಪರಿಸರಪ್ರೇಮಿ ಸಿ.ಎಂ.ವೆಂಕಟೇಶ್, ರೈತ ಮುಖಂಡ ಎ.ಎಸ್‌. ಚೆನ್ನಬಸಪ್ಪ, ನಿವೃತ್ತ ಸೈನಿಕ ಇಸ್ಮಾಯಿಲ್‌ ಅತ್ತಾರ್, ಡಾ.ಬಿ.ಆರ್.ಅಂಬೇಡ್ಕರ್ ನ್ಯಾಷನಲ್ ಫೆಲೋಶಿಫ್ ಪ್ರಶಸ್ತಿ ಪುರಸ್ಕೃತ ನಂಜುಂಡಸ್ವಾಮಿ (ಪಾಪು), ಅವತಾರ್ ಡ್ಯಾನ್ಸ್ ಸಂಸ್ಥೆಯ ಪ್ರವೀಣ್ ಅವರನ್ನು ಸನ್ಮಾನಿಸಲಾಯಿತು.

ನಗರಸಭಾ ಆಯುಕ್ತ ಎನ್‌.ರಾಜಣ್ಣ ವಿಷ್ಣು ಭಾವಚಿತ್ರ ಅನಾವರಣಗೊಳಿಸಿದರು. ಚಿತ್ರ ನಟಿ ಅನೂಷ, ಪಟ್ಟಣ ಠಾಣೆಯ ಇನ್‌ಸ್ಪೆಕ್ಟರ್‌ ನಾಗೇಗೌಡ, ಬಿಎಸ್‌ವಿ ಪ್ರತಿಷ್ಠಾನ ವೆಂಕಟನಾಗಪ್ಪಶೆಟ್ಟಿ, ಮುಖಂಡರಾದ ಉಮೇಶ್, ಸುರೇಶ್‌ ಎನ್‌.ಋಗ್ವೇದಿ, ನಗರಸಭಾ ಸದಸ್ಯರಾದ ಆರ್.ಪಿ.ನಂಜುಂಡಸ್ವಾಮಿ, ಮನೋಜ್‌ ಪಟೇಲ್, ಕೊಳ್ಳೇಗಾಲ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಎನ್.ನಟರಾಜು, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಅರುಣ್‌ಕುಮಾರ್, ಬಿಎಸ್‌ಪಿ ಮುಖಂಡ ಆಲೂರು ಮಲ್ಲು ಸಾಧನ ಸಂಸ್ಥೆ ಟಿ.ಜೆ.ಸುರೇಶ್, ಡಾ.ಸುಗಂದರಾಜು, ಸುರೇಶ್‌ನಾಗ್‌, ಜಿ.ಎಂ.ಶಂಕರ್, ಕೂಸಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !