ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಆಟೊ ಕೊಡಿ, ಎಲೆಕ್ಟ್ರಿಕ್‌ ಆಟೊ ಹತ್ತಿ

Last Updated 10 ಮಾರ್ಚ್ 2020, 14:45 IST
ಅಕ್ಷರ ಗಾತ್ರ

ಬೆಂಗಳೂರಿನ ಸುಮಾರು ಎರಡು ಲಕ್ಷ ಆಟೊಗಳನ್ನು ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ಆಟೊಗಳನ್ನಾಗಿ ಪರಿವರ್ತಿಸಿದರೆಬೆಂಗಳೂರಿನ ಅರ್ಧದಷ್ಟು ಸಂಚಾರ ದಟ್ಟನೆ ಮತ್ತು ವಾಯುಮಾಲಿನ್ಯ ಸಮಸ್ಯೆಗೆ ಪರಿಹಾರ ಕಂಡು ಹಿಡಿದಂತೆ. ಹಳೆಯ ಆಟೊಗಳ ಬದಲು ಎಲೆಕ್ಟ್ರಿಕ್‌ ಆಟೊಗಳು ಬಂದರೆ ನಗರದ ಪರಿಸರದಲ್ಲಿಯ ಅಂದಾಜು 7.4 ಲಕ್ಷ ಟನ್‌ ಇಂಗಾಲ ಡೈಆಕ್ಸೈಡ್‌ ತಡೆಗಟ್ಟಬಹುದು ಎನ್ನುತ್ತದೆ ಯುರೋಪ್‌ ಒಕ್ಕೂಟದ ಅಧ್ಯಯನ ವರದಿ.

ಇದಕ್ಕೆ ಪೂರಕವಾಗಿ ನಗರದ ಥ್ರೀ ವೀಲ್ಸ್ ಯುನೈಟೆಡ್‍ ಕಂಪನಿ ಹಳೆಯ ಆಟೊ ಖರೀದಿಸಿ,ಇಲೆಕ್ಟ್ರಿಕ್‌ ಆಟೊ ನೀಡಲು ಮುಂದಾಗಿದೆ. ಇದಕ್ಕಾಗಿ ಆಟೊರಿಕ್ಷಾ ಮರುಖರೀದಿ ಯೋಜನೆಗೆ ಚಾಲನೆ ನೀಡಿದೆ. ಚಾಲಕರು ತಮ್ಮ ಹಳೆಯ ಆಟೊಗೆ ಗುಡ್‌ ಬೈ ಹೇಳಿ, ಹೊಸ ಎಲೆಕ್ಟ್ರಿಕ್‌ ಆಟೊ ಖರೀದಿಸಬಹುದು.ಹೊಸ ವಾಹನ ಖರೀದಿಗೆ ಬೇಕಾದ ಹಣ ಹೊಂದಿಸಲು ಚಾಲಕರು ಪರದಾಡಬೇಕಿಲ್ಲ.

ಈ ಯೋಜನೆ ಅಡಿ 10 ವರ್ಷಕ್ಕಿಂತ ಹಳೆಯ ರಿಕ್ಷಾಗಳನ್ನು ಸಂಸ್ಥೆಯೇ₹15 ಸಾವಿರಕ್ಕೆ ಖರೀದಿಸುತ್ತದೆ ಮತ್ತು ಹೊಸ ಎಲೆಕ್ಟ್ರಿಕ್ ಆಟೊ ರಿಕ್ಷಾ ಖರೀದಿಸಲು ವಾಹನ ಸಾಲ ಸೌಲಭ್ಯ ಒದಗಿಸುತ್ತದೆ.

ಹಳೆಯ ಆಟೊ ಮಾರಾಟ ಮಾಡಿ ಬಂದ ಹಣವನ್ನು ಹೊಸ ವಾಹನ ಸಾಲದ ಡೌನ್‌ ಪೇಮೆಂಟ್‌ ಆಗಿ ಬಳಸಬಹುದು ಎನ್ನುತ್ತದೆ ಥ್ರೀ ವೀಲ್ಸ್ ಯುನೈಟೆಡ್ ಸಂಸ್ಥೆ.

ಈ ಮರು ಖರೀದಿ ಯೋಜನೆಯು ಆಟೊ ರಿಕ್ಷಾ ಚಾಲಕರಿಗೆ ಆದಾಯ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ವಿದ್ಯುತ್‍ ಚಾಲಿತ ವಾಹನಗಳ ಬಳಕೆಯ ಮೂಲಕ ವಾಯು ಮಾಲಿನ್ಯ ತಡೆಯಬಹುದು ಎನ್ನುವಸಂಸ್ಥೆಯು ನಗರದಲ್ಲಿ ಈಗಾಗಲೇ 40 ಆಟೊ ಎಕ್ಸಚೇಂಜ್‌ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಈ ಸೇವೆ ವಿಸ್ತರಿಸುವ ಯೋಚನೆ ಇದೆ ಎನ್ನುತ್ತದೆ ಸಂಸ್ಥೆ.

ಸಂಪರ್ಕ: ಮೊಬೈಲ್‌ 9071421574

ಹಳೆ ಆಟೊ ಏಕೆ ಅಪಾಯಕಾರಿ?
ಹಳೆಯ ಆಟೊ ರಿಕ್ಷಾಗಳು ದ್ರವೀಕೃತ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಸಂಚರಿಸುವ ಕಂಬಷನ್ ಎಂಜಿನ್‍ ಹೊಂದಿವೆ. ಇವು ಇಂಗಾಲದ ಡೈಆಕ್ಸೈಡ್, ನೈಟ್ರೊಜನ್‌ ಡೈ ಆಕ್ಸೈಡ್ ಮತ್ತು ಪಿಎಂ10ನಂಥ ಅಪಾಯಕಾರಿ ರಾಸಾಯನಿಕಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ. ಇದರಿಂದ ವಾಯುಮಾಲಿನ್ಯ ಹೆಚ್ಚುತ್ತಿದೆ. ಅಲ್ಲದೇ, ಜನರ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿವೆ.

ಸುಸ್ಥಿರ ಆಟೊ ರಿಕ್ಷಾ ವ್ಯವಸ್ಥೆ ಜಾರಿಗೊಳಿಸುವ ಉದ್ದೇಶದೊಂದಿಗೆ ಯುರೋಪ್ ಒಕ್ಕೂಟದ ‘ಸ್ವಿಚ್ ಏಷ್ಯಾ’ ಯೋಜನೆಯನ್ನು 2016ರಲ್ಲಿ ನಗರದಲ್ಲಿ ಅನುಷ್ಠಾನಗೊಳಿಸಲಾಯಿತು.‘ನಮ್ಮ ಆಟೊ’ ಯೋಜನೆ ಅಡಿ ಮೂರು ವರ್ಷ ಅಧ್ಯಯನ ನಡೆಸಿದ ತಜ್ಞರ ತಂಡ ಪರಿಸರಸ್ನೇಹಿ ಎಲೆಕ್ಟ್ರಿಕ್ ರಿಕ್ಷಾಗಳನ್ನು ಪರಿಚಯಿಸಲು ಸೂಚಿಸಿತ್ತು.

ನಗರದಲ್ಲಿವೆ 2 ಲಕ್ಷ ಆಟೊ!
ಬೆಂಗಳೂರು ನಗರವೊಂದರಲ್ಲಿಯೇ 2 ಲಕ್ಷ ಆಟೊರಿಕ್ಷಾಗಳಿವೆ ಎಂದು ಅಂದಾಜಿಸಲಾಗಿದೆ. ನಗರದ ಒಟ್ಟು ವಾಹನಗಳ ಸಂಖ್ಯೆಯಲ್ಲಿ ಇವುಗಳ ಪಾಲು ಶೇ 2.5 ರಷ್ಟಾದರೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಶೇ 10ರಷ್ಟು ಸಾರಿಗೆ ಸೇವೆಯನ್ನು ಈ ರಿಕ್ಷಾಗಳು ನಿರ್ವಹಿಸುತ್ತವೆ. ನಗರದ ಅನಿವಾರ್ಯ ಸಂಚಾರ ಸಾಧನಗಳಾಗಿರುವ ಆಟೊಗಳು ಸಂಚಾರ ದಟ್ಟಣೆಯಲ್ಲೂ ಪ್ರಮುಖ ಪಾತ್ರವಹಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT