ಗುರುವಾರ , ಡಿಸೆಂಬರ್ 5, 2019
24 °C

ಕೋರಮಂಗಲದಲ್ಲೊಂದು ಸ್ಲೀಪ್‌ ಲ್ಯಾಬ್‌!

Published:
Updated:

ಮ್ಯಾಟ್ರೆಸ್‌ ಖರೀದಿಯಲ್ಲಿ ವಿಶಿಷ್ಟ ಅನುಭವ ನೀಡುವ ದೇಶದ ಮೊದಲ ಅತಿದೊಡ್ಡ ಸ್ಲೀಪ್‌ ಎಕ್ಸ್‌ಪಿರಿಯನ್ಸ್‌ ಸೆಂಟರ್‌ ಕೋರಮಂಗಲದಲ್ಲಿ ಕಾರ್ಯಾರಂಭ ಮಾಡಿದೆ. ಮ್ಯಾಟ್ರೆಸ್‌ಗಳ ವಹಿವಾಟಿನಲ್ಲಿ ಐದು ದಶಕಗಳಿಗೂ ಹೆಚ್ಚಿನ  ಅನುಭವ ಹೊಂದಿರುವ ಡ್ಯುರೊಫ್ಲೆಕ್ಸ್‌ ಪ್ರೈವೇಟ್‌ ಲಿಮಿಟೆಡ್‌ (Duroflex) ಈ ಮಳಿಗೆ ಆರಂಭಿಸಿದೆ. 

ಆರಾಮದಾಯಕ, ಸುಖ ನಿದ್ದೆಯೂ ದೈಹಿಕ ಕಸರತ್ತಿಗಿಂತ ಹೆಚ್ಚು ಮುಖ್ಯ. ನೆಮ್ಮದಿಯ ನಿದ್ದೆಗೆ ಬಳಸುವ ಹಾಸಿಗೆಗಳೂ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಮ್ಯಾಟ್ರೆಸ್‌ಗಳನ್ನು ಖರೀದಿಸುವ ಮುನ್ನ ಹಾಸಿಗೆ ನೀಡುವ ಅನುಭವನ್ನು ಪ್ರಾಯೋಗಿಕವಾಗಿ ಪಡೆದುಕೊಳ್ಳಲು ಇಲ್ಲಿ ಅವಕಾಶ ಕಲ್ಪಿಸಿರುವುದು ಈ ಸ್ಲೀಪ್‌ ಲ್ಯಾಬ್‌ನ ವಿಶೇಷತೆಯಾಗಿದೆ.

’ನಗರದ ಧಾವಂತದ ಮತ್ತು ತೀವ್ರ ಒತ್ತಡದ ಬದುಕಿನಲ್ಲಿ ಸದಾಕಾಲ ಚಟುವಟಿಕೆಯಿಂದ ಇರುವುದಕ್ಕೆ ಒಳ್ಳೆಯ ನಿದ್ದೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅನೇಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದೈಹಿಕ ಕಸರತ್ತಿಗೆ ಆದ್ಯತೆ ನೀಡುತ್ತಾರೆಯೇ ಹೊರತು ನಿದ್ದೆಗೆ ಅಲ್ಲ. ಇಂತಹ ಆದ್ಯತೆಯೇ ತಪ್ಪು‘ ಎಂದು ಡ್ಯುರೊಫ್ಲೆಕ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮ್ಯಾಥ್ಯೂ ಚಾಂಡಿ ಹೇಳುತ್ತಾರೆ.

ಸಾಕಷ್ಟು ಸ್ಥಳಾವಕಾಶ ಇರುವ ಮಳಿಗೆಯಲ್ಲಿ  ವಿವಿಧ ಬಗೆಯ / ಗುಣಮಟ್ಟದ ಹಾಸಿಗೆಗಳಿವೆ. ಅವುಗಳ  ಪೈಕಿ ಗ್ರಾಹಕರು ತಮಗಿಷ್ಟದ, ತಮ್ಮ ದೇಹಕ್ಕೆ ಒಪ್ಪುವ ಹಾಸಿಗೆ ಸುತ್ತ ಕರ್ಟನ್‌ಗಳನ್ನು ಎಳೆದುಕೊಂಡು ಒಂದೆರಡು ಗಂಟೆಗಳ ಕಾಲ ಏಕಾಂತದಲ್ಲಿ ಮಲಗಬಹುದು. ತಾವು ಖರೀದಿಸಲಿರುವ ಹಾಸಿಗೆ ತಮ್ಮ ದೇಹಕ್ಕೆ ಒಗ್ಗಿಕೊಳ್ಳುವುದೇ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಬಹುದು. ಈ ಬಗೆಯಲ್ಲಿ ಸ್ಲೀಪ್‌ ಲ್ಯಾಬ್‌ ಪ್ರಯೋಜನ ಪಡೆದವರು  ಉತ್ಪನ್ನಗಳನ್ನು ಖರೀದಿಸಲೇಬೇಕು ಎನ್ನುವ ಒತ್ತಾಯವೇನೂ ಇರುವುದಿಲ್ಲ.

ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣುವ ಹಾಸಿಗೆ, ಬೆಡ್‌ಶೀಟ್‌ಗಳ ವಿನ್ಯಾಸ ನೋಡಿ ಖರೀದಿಸುವ ಬದಲಿಗೆ ಮ್ಯಾಟ್ರೆಸ್‌ಗಳಲ್ಲಿ ಬಳಸಿರುವ ಪೋಮ್‌ನ ಗುಣಮಟ್ಟ, ಅದರ ಬಾಳಿಕೆ ಮತ್ತಿತರ ಸಂಗತಿಗಳನ್ನೂ ಗ್ರಾಹಕರು ಇಲ್ಲಿ ವಿವರವಾಗಿ ಪಡೆದುಕೊಳ್ಳಬಹುದು.

ಮ್ಯಾಟ್ರೆಸ್‌ಗಳು ನೀಡುವ ಕಂಫರ್ಟ್‌ ಗ್ರಾಹಕರಿಂದ ಗ್ರಾಹಕರಿಗೆ ಭಿನ್ನವಾಗಿರುತ್ತದೆ. ಇದೇ ಕಾರಣಕ್ಕೆ ಡ್ಯುರೊಫ್ಲೆಕ್ಸ್‌ ವಿಭಿನ್ನ ಗುಣಮಟ್ಟದ ಹಾಸಿಗೆಗಳನ್ನು ಒದಗಿಸುತ್ತಿದೆ.  ದೆಹಲಿಯ ನ್ಯಾಷನಲ್‌ ಹೆಲ್ತ್‌ ಅಕಾಡೆಮಿ ಪ್ರಮಾಣಿಕರಿಸಿದ ಉತ್ಪನ್ನಗಳು ಇಲ್ಲಿ ಲಭ್ಯ ಇರುವುದು ಇದರ ವಿಶೇಷತೆಯಾಗಿದೆ.

’ಬೆಲ್ಜಿಯಂನಿಂದ ತರಿಸಿದ ಫ್ಯಾಬ್ರಿಕ್ಸ್ ಬಳಸಿರುವುದು ಇವುಗಳನ್ನು ತಯಾರಿಸಲಾಗಿದೆ. ವಯಸ್ಸಾದವರಿಗೆ ಕೀಲು ನೋವು, ಬೆನ್ನು ನೋವಿನ ತೀವ್ರತೆ ತಗ್ಗಿಸಲೂ ಕಂಪನಿ ತಯಾರಿಸಿರುವ ಹಾಸಿಗೆಗಳು ನೆರವಾಗಲಿವೆ‘ ಎಂದೂ ಮ್ಯಾಥ್ಯೂ ಹೇಳುತ್ತಾರೆ. ಕೋರಮಂಗಲದ ಮಹಾರಾಜ ಸಿಗ್ಮಲ್‌ ಹತ್ತಿರ ಡ್ಯುರೊಫ್ಲೆಕ್ಸ್‌ ಎಕ್ಸಪಿರಿಯನ್ಸ್‌ ಸೆಂಟರ್‌ ಈ ಮಳಿಗೆ ಇದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು