ಫ್ಯಾಷನ್ ಲೋಕದಲ್ಲಿ ಪ್ರತಿವರ್ಷವೂ ಉಡುಗೆ ತೊಡುಗೆಗಳ ಟ್ರೆಂಡ್ನಲ್ಲಿ ಗಮನಾರ್ಹವಾದ, ಕೆಲವೊಮ್ಮೆ ದಾಖಲಾರ್ಹ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಪ್ರಮುಖ ಸಮಾರಂಭಗಳಿಗೆ ಭಾರತೀಯ ಸೆಲೆಬ್ರಿಟಿಗಳು ಸೀರೆ ಉಟ್ಟುಕೊಂಡು ಹೋದರೆ ಆ ಸೀರೆಯ ವಿನ್ಯಾಸ, ಕಸೂತಿಯಿಂದ ಹಿಡಿದು ಬಣ್ಣಗಳ ಆಯ್ಕೆ, ಅಂಚು ಹೀಗೆ ಪ್ರತಿಯೊಂದು ಸೂಕ್ಷ್ಮ ಅಂಶಗಳು ಚರ್ಚೆಯ ವಸ್ತುಗಳಾಗುತ್ತವೆ.

ಆ ಸೀರೆಯೇ ಆ ವರ್ಷದ ಟ್ರೆಂಡ್ ಸೆಟ್ಟರ್ ಆಗುವ ಸಾಧ್ಯತೆಯೂ ಇರುತ್ತದೆ. 2013ರಲ್ಲಿ ಹಾಗೆ ಗಮನ ಸೆಳೆದದ್ದು ತುಂಬುತೋಳಿನ ರವಿಕೆ ಹಾಗೂ ತುಂಬು ತೋಳು ಮತ್ತು ತುಂಬು ಕತ್ತಿನ ರವಿಕೆಯ ಶೈಲಿ.

ಕಳೆದ ವರ್ಷ ನಡೆದ 66ನೇ ಕಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸೀರೆಯುಟ್ಟು ಬಂದಿದ್ದ ಬಾಲಿವುಡ್ ಸುಂದರಿಯರಾದ ವಿದ್ಯಾ ಬಾಲನ್ ಹಾಗೂ ಸೋನಂ ಕಪೂರ್ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದರು. ಸೀರೆಗಿಂತಲೂ ದೇಶಿ–ವಿದೇಶಿಯರ ಗಮನ ಸೆಳೆದದ್ದು ಅವರ ರವಿಕೆ. ಇಬ್ಬರೂ ತುಂಬು ತೋಳಿನ ರವಿಕೆ ಧರಿಸುವ ಮೂಲಕ ಅಜ್ಜಿ ಕಾಲದಲ್ಲೇ ಮುಗಿದುಹೋಗಿದ್ದ ಫ್ಯಾಷನ್ ಮತ್ತೆ ಬೆಳಕಿಗೆ ಬರುವಂತೆ ಮಾಡಿದ್ದರು.

ನಿನ್ನೆಯದು ಹಳತು, ಇಂದಿನದಷ್ಟೇ ಹೊಸತು. ಇವರೆಡರ ಸಮ್ಮಿಶ್ರಣ ನಾಳೆಗೆ ಪ್ರಸ್ತುತ ಎಂಬುದು ಫ್ಯಾಷನ್ ಜಗತ್ತಿನ ಮಂತ್ರ. ನಮ್ಮ ಅಜ್ಜಿ ಕಾಲದಲ್ಲಿ ಚಲಾವಣೆಯಲ್ಲಿದ್ದ ಉದ್ದ ತೋಳಿನ ರವಿಕೆ, ಅಮ್ಮನ ಯೌವ್ವನದಲ್ಲಿ ಮರುಕಳಿಸಿತು. ಈಗ ಮಗಳು ಅಮ್ಮನಾದಾಗ ಮಗದೊಮ್ಮೆ ಬಂದಿದೆ.

ವಸ್ತ್ರ ವಿನ್ಯಾಸಕರು ರವಿಕೆಯ ಟ್ರೆಂಡನ್ನು ಹೇಗೆ ವಿಶ್ಲೇಷಿಸುತ್ತಾರೆ ಗೊತ್ತೇ? ಪ್ರಸ್ತುತ ದಿನಗಳಲ್ಲಿ ಸೀರೆಗಿಂತ ರವಿಕೆಯೇ ‘ಹೀರೋಯಿನ್’ ಆಗಿಬಿಟ್ಟಿದೆ. ರವಿಕೆಗೆ ಬೆಂಬಲ ನೀಡುವ ಪಾತ್ರ ಸೀರೆಯದ್ದು. ರವಿಕೆಗಳ ವಿನ್ಯಾಸಗಳನ್ನು ಪ್ರದರ್ಶಿಸಲೆಂದೇ ಫ್ಯಾಷನ್ ಷೋಗಳು ಏರ್ಪಾಡಾಗುತ್ತಿರುವುದು ವಿನ್ಯಾಸಕರ ಈ ಮಾತಿಗೆ ಪುಷ್ಟಿ ಕೊಡುವಂತಿದೆ. ರವಿಕೆಯನ್ನು ಒಂದು ‘ಆಭರಣ’ ಎಂದು ಪರಿಗಣಿಸುತ್ತಿದೆ ವಿನ್ಯಾಸ ಕ್ಷೇತ್ರ.

ಮದುವೆ ನಿಶ್ಚಿತಾರ್ಥ, ಆಮಂತ್ರಣಪತ್ರ ಶಾಸ್ತ್ರ, ಮೆಹೆಂದಿ, ಆರತಕ್ಷತೆ, ಮದುವೆ, ಸೀಮಂತ, ಮಗುವಿನ ನಾಮಕರಣ, ಹುಟ್ಟುಹಬ್ಬ ಸಮಾರಂಭ, ಗೃಹಪ್ರವೇಶ... ಪೂರ್ಣ ಪ್ರಮಾಣದಲ್ಲಿ ಉಡುಗೆ ತೊಡುಗೆಗಳನ್ನು ಧರಿಸಿ ಶೋಭಾಯಮಾನವಾಗಿ ಮಿಂಚಲು ಹೆಣ್ಣು ಮಕ್ಕಳಿಗೆ ಎಷ್ಟೊಂದು ಅವಕಾಶಗಳು, ಆಯ್ಕೆಗಳು!

ಆ ಸಮಾರಂಭಕ್ಕೆ ಧರಿಸಿದ್ದನ್ನು ಈ ಸಂದರ್ಭದಲ್ಲಿ ಮತ್ತೆ ತೊಡುವುದು ಪ್ರತಿಷ್ಠೆಗೆ ಕುಂದು. ಒಂದೊಂದು ಸಂದರ್ಭಕ್ಕೂ ಹೊಸತು ಹೊಲಿಸಿಕೊಳ್ಳುವುದೆಂದರೆ ಕನಿಷ್ಠ 1,500ರಿಂದ 3 ಸಾವಿರ ರೂಪಾಯಿವರೆಗಿನ ಬಾಬತ್ತು. ಆದರೆ ಒಂದೇ ನೋಟದಲ್ಲಿ ಸೀರೆಯ ಜಾತಕ ಜಾಲಾಡುವ ನಿಷ್ಣಾತರೂ ಕಣ್ಣಿಟ್ಟು ನೋಡುವುದು ರವಿಕೆಯ ವಿನ್ಯಾಸವನ್ನು ಎಂಬುದು ಗಮನಾರ್ಹ.

ಧಾರಾವಾಹಿಯಲ್ಲಿ...
ಹೊಸ ಟ್ರೆಂಡುಗಳನ್ನು ತಕ್ಷಣ ಬಾಚಿಕೊಳ್ಳುವಲ್ಲಿ ಸಿನಿಮಾ ಕ್ಷೇತ್ರಕ್ಕಿಂತಲೂ ಕಿರುತೆರೆ ಸದಾ ಮುಂದು. ಉದ್ದ ತೋಳಿನ ರವಿಕೆ ಫ್ಯಾಷನ್ ಲೋಕದಲ್ಲಿ ಕಾಣಿಸಿಕೊಳ್ಳುತ್ತಲೇ ಹಿಂದಿ ಧಾರಾವಾಹಿಗಳಲ್ಲಿ ಕಂಡುಬಂದವು. ಇದೀಗ ಕನ್ನಡದಲ್ಲಿಯೂ ಕೆಲವು ಕಲಾವಿದೆಯರು ತುಂಬುತೋಳಿನ ರವಿಕೆ ಧರಿಸಿ ಕನ್ನಡ ಕಿರುತೆರೆಯೂ ಎಷ್ಟು ಅಪ್ಡೇಟ್ ಆಗಿದೆ ಎನ್ನುವುದನ್ನು ತೋರಿಸುತ್ತಿದೆ. ಈ–ಟೀವಿಯಲ್ಲಿ ಪ್ರಸಾರವಾಗುತ್ತಿರುವ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಈ ವಿನ್ಯಾಸದ ರವಿಕೆ ಪ್ರೇಕ್ಷಕಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಟೈಲರಿಂಗ್ ಅಂಗಡಿಗಳಲ್ಲಿಯೂ ಮಾದರಿ ವಿನ್ಯಾಸಗಳನ್ನು ಪ್ರದರ್ಶಿಸುವ ಶೋಕೇಸ್ನಲ್ಲಿ ತುಂಬು ತೋಳಿನ ರವಿಕೆಯೂ ಜಾಗ ಗಿಟ್ಟಿಸಿಕೊಳ್ಳುತ್ತಿದೆ.

ಮಿಕ್ಸ್ ಅಂಡ್ ಮ್ಯಾಚ್ ಮಾಡಲು ಕಪ್ಪು ಅಥವಾ ಮರೂನ್ ಬಣ್ಣದ ರವಿಕೆಯಿದ್ದರಾಯಿತು. ಪಾರ್ಟಿ ಅಥವಾ ಯಾವುದೇ ಮುಖ್ಯವಾದ ಸಮಾರಂಭಕ್ಕೆ ಹೋಗುವುದಾದರೆ ಕಾಂಜೀವರಂ, ಸೆಮಿ ಕಾಂಜೀವರಂ ಅಥವಾ ಜರಿ ಬಣ್ಣ ಮತ್ತು ವಿನ್ಯಾಸದ ಅಂಚುಳ್ಳ ರವಿಕೆಯನ್ನು ತೊಟ್ಟರೆ ಸೀರೆಗೂ, ನಿಮಗೂ ಹೊಸ ಗೆಟಪ್. ಕಾಟನ್ ಸೀರೆಗೆ ತುಂಬು ತೋಳಿನ ರವಿಕೆ ಬಹಳ ಒಪ್ಪುತ್ತದೆ. ಬಣ್ಣ ತಿಳಿಯಾಗಿದ್ದರೂ, ಗಾಢವಾಗಿದ್ದರೂ ತೊಟ್ಟವಳ ವ್ಯಕ್ತಿತ್ವಕ್ಕೇ ಹೊಸ ಭಾಷ್ಯ ಬರೆದಂತೆ ಭಾಸವಾಗುವುದು ಸುಳ್ಳಲ್ಲ.

ತುಂಬು ತೋಳಿನ ರವಿಕೆಯ ಮತ್ತೊಂದು ಲಾಭವೆಂದರೆ, ಅದು ಕತ್ತು ಹಾಗೂ ಭುಜವನ್ನು ಮುಚ್ಚುವುದರಿಂದ ಯಾವುದೇ ಆಭರಣದ ಅಗತ್ಯವಿರುವುದಿಲ್ಲ. ಮಾಂಗಲ್ಯಸರವೊಂದೇ ಸಾಕಾಗುತ್ತದೆ. ಫ್ಯಾಷನ್ ದೃಷ್ಟಿಯಿಂದ ಅದನ್ನೂ ಎತ್ತಿಟ್ಟು ಸೀರೆ/ರವಿಕೆಗೆ ಹೊಂದುವ ಬಣ್ಣದ್ದೋ, ವಿರುದ್ಧ ಬಣ್ಣದ್ದೋ ಒಂದು ಲಾಕೆಟ್ ಧರಿಸಿದರೂ ಓಕೆ. ತುಂಬು ತೋಳಿನ ರವಿಕೆ ಧರಿಸಿದಾಗ ಸೀರೆಯ ಸೆರಗನ್ನು ಪಟ್ಟಿ ಹಿಡಿದು ಪಿನ್ ಮಾಡಬೇಕೇ ಬೇಡವೇ ಎಂದು ಕೆಲವರಿಗೆ ಗೊಂದಲ ಮೂಡುವುದಿದೆ. ಎರಡೂ ಓಕೆ. ಭುಜದಿಂದಾಚೆ ಚಾಚಿಕೊಳ್ಳದಂತೆ ಸಣ್ಣ ಪಟ್ಟಿ ಹಾಕಬಹುದು. ಇಲ್ಲವೇ ಸೆರಗನ್ನು ಭುಜದ ಬಳಿ ಪಿನ್ ಮಾಡಿ ಹಾಗೆಯೇ ಬಿಟ್ಟರೂ ಚೆಂದ.

ಇನ್ನು ಕತ್ತಿನ ವಿನ್ಯಾಸದ ವಿಚಾರ. ಹೈನೆಕ್ನಂತೆ ಕಾಲರ್ ಇಲ್ಲದೆ ಕತ್ತನ್ನು ವೃತ್ತಾಕಾರದಲ್ಲಿ ನೆಕ್ಲೇಸ್ನಂತೆ ಬಳಸುವ ವಿನ್ಯಾಸ ಇತ್ತೀಚಿನ ಟ್ರೆಂಡ್. ಇದು ತುಂಬು ತೋಳಿನ ರವಿಕೆಗೆ ಒಪ್ಪುತ್ತದೆ. ಸ್ಕ್ವೇರ್, ಬಕೆಟ್, ಯೂ, ವಿ, ಆರ್ಡಿನರಿ ವಿನ್ಯಾಸಗಳಲ್ಲಿಯೂ ಇದು ಮಿಂಚುತ್ತದೆ.

‘ಝಲಕ್ ದಿಖ್ಲಾಜಾ’ ಸರಣಿಯ ತೀರ್ಪುಗಾರರಾಗಿದ್ದ ಬಾಲಿವುಡ್ ಸುಂದರಿ ಮಾಧುರಿ ದೀಕ್ಷಿತ್ ಮುತ್ತಿನ ಬಣ್ಣದ ಸೀರೆಯಲ್ಲಿ ಗಮನ ಸೆಳೆದಿದ್ದರು. ಅಂದು ಅವರು ಧರಿಸಿದ್ದುದು ಶೀಲಾ ವಿನ್ಯಾಸದ ಫುಲ್ ಸ್ಲೀವ್ಸ್ ಡಿಸೈನರ್ ಬ್ಲೌಸ್. ಸ್ಕ್ವೇರ್ ನೆಕ್, ಕೈ ಮಣಿಗಂಟಿನ ಬಳಿ ಅದೇ ಪಾರದರ್ಶಕ ಬಟ್ಟೆಯಿಂದ ಫ್ರಿಲ್ ಕೊಡಲಾಗಿತ್ತು. ಹೀಗೆ ಒಂದು ವಿನ್ಯಾಸ ಮರುಕಳಿಸಿದಾಗ ಪ್ರಸಕ್ತ ಕಾಲಘಟ್ಟಕ್ಕೆ ತಕ್ಕುದಾಗಿ ಬದಲಾವಣೆ ಮಾಡಿ ಕಂಟೆಂಪರರಿ ಸ್ಪರ್ಶ ಕೊಡುವುದು ಸಾಮಾನ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.