ಚಿಕ್ಕಪೇಟೆಯಲ್ಲಿ (ಶಾಪ್ ನಂ 200) ಕಲಾನಿಕೇತನ್‌ನ ಅತಿ ದೊಡ್ಡ ಫ್ಯಾಮಿಲಿ ಶಾಪಿಂಗ್ ಮಾಲ್ ಅದ್ಧೂರಿಯಿಂದ ಆರಂಭಗೊಂಡಿದೆ. ಉದ್ಘಾಟನಾ ಸಮಾರಂಭದಲ್ಲಿ ಸಿನಿತಾರೆಯರಾದ ಸುದೀಪ್ ಮತ್ತು ರಾಧಿಕಾ ಪಂಡಿತ್ ಹಾಜರಿದ್ದು ಗ್ಲಾಮರ್ ತುಂಬಿದರು.

ಇದು ನಗರದಲ್ಲಿ ಕಲಾನಿಕೇತನ್‌ನ ಮೂರನೇ ಶಾಪಿಂಗ್ ಮಾಲ್. 12,000 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಇಡೀ ಕುಟುಂಬಕ್ಕೆ ಬೇಕಾದ ಜವಳಿ, ಅಲಂಕರಣ ಆ್ಯಕ್ಸೆಸರಿಗಳನ್ನು ಒಂದೇ ಸೂರಿನಡಿ ಖರೀದಿಸುವ ಸಮಗ್ರ ಶಾಪಿಂಗ್ ಅನುಭವ ದೊರೆಯಲಿದೆ.

ಸಾಂಪ್ರದಾಯಿಕ ಕಾಂಜೀವರಂ ಸೀರೆಗಳಿಂದ ಹಿಡಿದು ಮನಸೆಳೆಯುವ ಫ್ಯಾನ್ಸಿ ತನಕ ಅಗಾಧ ವಸ್ತ್ರ ಸಂಗ್ರಹವನ್ನು ಮಹಿಳೆಯರು ಇಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಜಮದಾನಿ, ಲೆಹೆಂಗಾ ಸೀರೆ, ಜರಿ ಕೋಟಾ, ಪೈಥಾನೀಸ್, ಡಿಸೈನರ್ ಸೀರೆಗಳು, ಗಾಗ್ರಾ, ಲಂಗ ದಾವಣಿ, ಸಿದ್ಧ ಉಡುಪುಗಳೆಲ್ಲ ಇಲ್ಲಿವೆ.

ಅಲ್ಲದೆ ಪುರುಷರು ಹಾಗೂ ಮಕ್ಕಳಿಗಾಗಿ ಪ್ರಖ್ಯಾತ ಬ್ರಾಂಡ್‌ಗಳ, ಫ್ಯಾಶನ್, ಸಾಂಪ್ರದಾಯಿಕ ಉಡುಗೆಗಳನ್ನು ಸಂಗ್ರಹಿಸಲಾಗಿದೆ. ಇಲ್ಲಿ ಖರೀದಿಸುವುದೇ ಅವಿಸ್ಮರಣೀಯ ಅನುಭವ ನೀಡುತ್ತದೆ ಎನ್ನುತ್ತಾರೆ ಕಲಾನಿಕೇತನ್ ಮುಖ್ಯಸ್ಥ ಪ್ರಭಾಕರ್ ಸುಂಕೊ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.