ಬದುಕಿನಲ್ಲಿ ಕಷ್ಟ ಸುಖಗಳನ್ನು ಸಮಾನವಾಗಿ ತೆಗೆದುಕೊಂಡಾಗ ಮಾತ್ರ ಮುನ್ನಡೆಯಲು ಸಾಧ್ಯ. ಮನೆ ನಿರ್ಮಾಣದ ಜಾಗದಲ್ಲೇ ಸಣ್ಣ ಗುಡಿಸಲು ನಿರ್ಮಿಸಿ ಕುಟುಂಬದ ಜತೆ ಇರುತ್ತೇನೆ. ಕೆಲವೊಮ್ಮೆ ಈ ಊರೂ ಬೇಡ, ಈ ಕೆಲಸವೂ ಬೇಡವೆಂದು ಅನಿಸಿದೆ. ಅದರೆ ಅವುಗಳನ್ನು ಮನಸ್ಸಿನಿಂದ ತೆಗೆದುಹಾಕದೇ ಇದ್ದರೆ ಜೀವನ ಸಾಗಿಸಲು ಕಷ್ಟಪಡಬೇಕಾಗುತ್ತದೆ ಎಂಬ ಕಾರಣಕ್ಕೆ ಈ ಕೆಲಸ ಮಾಡುತ್ತಿದ್ದೇವೆ.