ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸ್ಕವರಿಯಲ್ಲಿ ಜಾಬ್ಸ್ ಕಥನ

Last Updated 4 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಇತ್ತೀಚೆಗಷ್ಟೇ ಕ್ಯಾನ್ಸರ್‌ನಿಂದ ಮೃತಪಟ್ಟ ಆ್ಯಪಲ್ ಕಂಪ್ಯೂಟರ್ ಸಂಸ್ಥಾಪಕ ಸ್ಟೀವ್ ಜಾಬ್ಸ್ 20ನೇ ಶತಮಾನ ಕಂಡ ಅದ್ಭುತ ಕನಸುಗಾರ, ನಿಪುಣ ತಂತ್ರಜ್ಞ ಎಂದೇ ಹೆಸರಾದವರು.

ಆ್ಯಪಲ್‌ನ ಐಫೋನ್, ಐಪಾಡ್‌ನಿಂದ ಸಂಗೀತ ಕೇಳುವ, ಸಿನಿಮಾ ನೋಡುವ ಪರಿಯನ್ನೇ ಬದಲಾಯಿಸಿದವರು. ಸ್ಟೀವ್ ಇನ್ನಿಲ್ಲವಾದರೂ ಸದಾ ಹೊಸತನಕ್ಕೆ ತುಡಿಯುತ್ತಿದ್ದ ಅವರ ವ್ಯಕ್ತಿತ್ವ ಇಂದಿನ ಯುವಪೀಳಿಗೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಡಿಸ್ಕವರಿ ಚಾನೆಲ್ ಈಗ ಸ್ಟೀವ್ ಜಾಬ್ಸ್‌ನ ಬದುಕು, ಸಾಧನೆಯ ಕಥೆಯನ್ನು ಪ್ರಸಾರ ಮಾಡಲಿದೆ.

ಸ್ಟೀವ್ ಜತೆ ಕೆಲಸ ಮಾಡಿದ ತಂತ್ರಜ್ಞರು, ಆತನ ಕುರಿತು, ಆತನ ಸಂಸ್ಥೆಯ ಕುರಿತು ವರದಿ ಮಾಡಿ ಪತ್ರಕರ್ತರು, ಆ್ಯಪಲ್ ಉಪಕರಣಗಳಿಂದ ಪ್ರಯೋಜನ ಪಡೆದ ಸಂಗೀತಗಾರರು, ಚಿತ್ರ ನಿರ್ದೇಶಕರು, ವಿನ್ಯಾಸಗಾರರು ಎಲ್ಲರೂ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.

`ಐಜೀನಿಯಸ್: ಹೌ ಸ್ಟೀವ್ ಜಾಬ್ಸ್ ಛೇಂಜ್ಡ್ ದಿ ವರ್ಲ್ಡ್~ ಕಾರ್ಯಕ್ರಮ ಭಾನುವಾರ ನವೆಂಬರ್ 6ರಂದು ರಾತ್ರಿ 10 ಗಂಟೆಗೆ  ಈ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದೆ.

ಮ್ಯೋನ್ ವರ್ಸಸ್ ವೈಲ್ಡ್
ಡಿಸ್ಕವರಿ ಚಾನಲ್ ಪ್ರತಿ ರಾತ್ರಿ 9ಕ್ಕೆ ಮ್ಯೋನ್ ವರ್ಸಸ್ ವೈಲ್ಡ್ ಎಂಬ ರೋಮಾಂಚಕಾರಿ ಹೊಸ ಟಿವಿ ಸರಣಿ ಪ್ರಸಾರ ಮಾಡುತ್ತಿದೆ.

ಇದರಲ್ಲಿ ಬೇರ್ ಗ್ರಿಲ್ಸ್ ಅವರು ನೀರಿನ ಪ್ರವಾಹ, ಅತಿಯಾದ ಮೈಕೊರೆಯುವ ಚಳಿ, ಭೂಕುಸಿತ, ಮರುಭೂಮಿಗಳಲ್ಲಿ ನಿಸರ್ಗದ ರೌದ್ರ ಶಕ್ತಿಯನ್ನು ಯಶಸ್ವಿಯಾಗಿ ಎದುರಿಸಿ ಬದುಕುವುದನ್ನು ನೋಡಬಹುದು.

ಅವರೊಂದಿಗೆ ಈ ಸಾಹಸದಲ್ಲಿ ಹಾಲಿವುಡ್ ನಟ ಜೇಕ್ ಗಿಲೆನ್ ಹಾಲ್ (ಪ್ರೊಫೆಸರ್ ಜಾರ್‌ಹೆಡ್ ಮತ್ತು ಬ್ರೋಕ್‌ಬ್ಯಾಕ್ ಮೌಂಟೇನ್ ಖ್ಯಾತಿ) ಸೇರಿಕೊಳ್ಳಲಿದ್ದಾರೆ. ಇಬ್ಬರೂ ಐಸ್‌ಲ್ಯಾಂಡ್‌ನ ಬೆಟ್ಟಗಳು, ಬೃಹತ್ ಹಿಮನದಿಗಳು ಹಾಗೂ ಯುರೋಪ್‌ನ ಅತ್ಯಂತ ಕ್ರಿಯಾಶೀಲ ಜ್ವಾಲಾಮುಖಿಗಳ ಪ್ರದೇಶದಲ್ಲಿ ನಿಸರ್ಗದೊಂದಿಗೆ ಹೋರಾಡಲಿದ್ದಾರೆ.

ಲೈಫ್ ಮೆ ಏಕ್ ಬಾರ್
ಖ್ಯಾತ ನಟ ವಿ.ಜೆ.ಪುರಬ್ ಕೊಯ್ಲಿ ಅವರು ತಮ್ಮ ಮೂವರು ಸ್ನೇಹಿತರ ಜತೆಗೂಡಿ ಕೈಗೊಂಡಿರುವ ರೋಚಕ ಸಾಹಸಯಾನ `ಲೈಫ್ ಮೆ ಏಕ್ ಬಾರ್~ ಫಾಕ್ಸ್ ಟ್ರಾವೆಲರ್ ವಾಹಿನಿಯಲ್ಲಿ ನಾಳೆಯಿಂದ ಪ್ರತಿ ಭಾನುವಾರ ರಾತ್ರಿ 10ಕ್ಕೆ ಪ್ರಸಾರಗೊಳ್ಳಲಿದೆ.

ಪುರಬ್ ಕೊಯ್ಲಿ, ಜುಪಿಟರ್, ಬೆಂಗಳೂರು ಹುಡುಗ ಅರುಣ್ ಕೋಲಗಡ ಹಾಗೂ ಭಾಸ್ಕರ್ ಸೇಟ್ ಈ ನಾಲ್ವರು ಅಪ್ರತಿಮ ಸಾಹಸ ಮನೋಭಾವುಳ್ಳ ಯುವಕರು. ಪ್ರವಾಸದ ಬಗ್ಗೆ ವಿಪರೀತ ಮೋಹ. ಈ ನಾಲ್ವರು ಒಂದೆಡೆ ಸೇರಿ ಯೋಜಿಸಿದ ಪರಿಣಾಮ ರೂಪುಗೊಂಡಿದ್ದೇ `ಲೈಫ್ ಮೆ ಏಕ್ ಬಾರ್~.

ಇವರು ಸಾಹಸಗಳು ವೀಕ್ಷಕರ ಮೈನವಿರೇಳಿಸುವಂತಿವೆ. ದಟ್ಟ ಅರಣ್ಯದ ನಡುವೆ ಎದುರಾಗುವ ಅಡ್ಡಿ ಆತಂಕಗಳು, ವಿಶೇಷ ಅನುಭವಗಳು ಹಾಗೂ ವಿನೋದ ಇವೆಲ್ಲವೂ ಯಾನದ ಸೊಬಗನ್ನು ರೋಚಕಗೊಳಿಸಿದೆ.
 
ಕ್ಷಣ ಕ್ಷಣಕ್ಕೂ ಪ್ರೇಕ್ಷಕರ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವಂತೆ ಸಿದ್ಧಗೊಂಡಿರುವ ಈ ಕಾರ್ಯಕ್ರಮ  ನೋಡುಗರಲ್ಲಿ ವಿಭಿನ್ನ ಅನುಭವ ನೀಡುತ್ತದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT