ಫ್ರಾನ್ಸ್ನ ಕಾನ್ನಲ್ಲಿ ನಡೆದಿರುವ 70ನೇ ಚಿತ್ರೋತ್ಸದಲ್ಲಿ ನಮ್ಮ ಬಾಲಿವುಡ್ ಸುಂದರಿಯರು ತಮ್ಮ ಚಿತ್ರ ವಿಚಿತ್ರ ಉಡುಗೆ ತೊಡುಗೆಗಳಿಂದ ಸುದ್ದಿಯಾಗುತ್ತಿದ್ದಾರೆ.
ನವರತ್ನಗಳಲ್ಲಿ ಒಂದಾದ ಪಚ್ಚೆಯನ್ನೇ ಹೋಲುವ ಕಡು ಪಚ್ಚೆ ಬಣ್ಣದ ಗೌನು ಧರಿಸಿ ಕೆಂಪು ಹಾಸಿನಲ್ಲಿ ನಡೆದು ಬಂದ ದೀಪಿಕಾ ಪಡುಕೋಣೆ ಅವರ ಉಡುಗೆಯಷ್ಟೇ ಚರ್ಚೆ ಅವರ ಮೇಕಪ್ ಬಗ್ಗೆಯೂ ನಡೆದಿದೆ.ಕಣ್ಣಿನ ಮೇಕಪ್ ವಿವರವನ್ನು ತಮ್ಮ ಫೇಸ್ಬುಕ್ ಪುಟದಲ್ಲಿ ಖುದ್ದಾಗಿ ದೀಪಿಕಾ ಹಂಚಿಕೊಂಡಿದ್ದಾರೆ.
ಗ್ಲಾಮರ್ನಿಂದ ತುಂಬಿರುವ ಕಾನ್ ಫ್ಯಾಷನ್ ವೀಕ್ನ ಅಂಗಳದಲ್ಲಿ ದೀಪಿಕಾ ಕಾಲಿಡುತ್ತಿದ್ದಂತೆ ಪ್ರತಿಯೊಬ್ಬರೂ ನಿಬ್ಬೆರಗಾಗಿ ದಿಟ್ಟಿಸಿದರು. ಕಾರಣ ಇಷ್ಟೇ... ಮೇಕಪ್ನಿಂದಾಗಿ ದೀಪಿಕಾ ಕಣ್ಣು, ನರ್ತಿಸುತ್ತಿರುವ ನವಿಲಿನಂತೆ ಕಾಣುತ್ತಿತ್ತು. ‘ನನ್ನ ಕಣ್ಣಿನ ಮೇಕಪ್ ನರ್ತಿಸುತ್ತಿರುವ ನವಿಲಿನ ಬಾಲದಂತೆ ಕಾಣುತ್ತಿತ್ತು’ ಎಂದು ಅವರು ಬರೆದುಕೊಂಡಿದ್ದಾರೆ.
ಅವರು ಧರಿಸಿದ ಗೌನ್ಗೆ ಹೊಂದುವಂತೆ ಎಮರಾಲ್ಡ್ (ಪಚ್ಚೆ) ಬಣ್ಣ ಮತ್ತು ನೀಲಿ, ನೇರಳೆ ಮಿಶ್ರಿತ ಶೇಡ್ ನೀಡಿರುವುದು ಈ ಲುಕ್ ಬರಲು ಕಾರಣವಾಗಿದೆ. ಅವರೇ ಒಂದು ಆಭರಣದಂತೆ ಹೊಳೆಯುತ್ತಿದ್ದರು’ ಎಂದು ಕಾನ್ ಕೆಂಪು ಹಾಸಿನಲ್ಲಿ ಮೆಚ್ಚುಗೆಯ ಸುರಿಮಳೆಯಾಗಿದೆ.
ಮೇಕಪ್ ತಜ್ಞೆ ವಾಲ್ ಗಾರ್ಲೆಂಡ್ ದೀಪಿಕಾ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
‘ಬಾಲಿವುಡ್ನಲ್ಲಿ ಅತಿ ಬೇಡಿಕೆಯ ನಟಿಯಾಗಿರುವ ಕಾರಣ ದೀಪಿಕಾ ಅವರ ಮೇಕಪ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದೆ’ ಎಂದು ಅವರು ಹೇಳಿಕೊಂಡಿದ್ದಾರೆ.
ಮತ್ತೆ ಮಿಂಚಿದ ಸೋನಂ: ಸೋಮವಾರ ಕಾನ್ ಅಂಗಳದಲ್ಲಿ ಸೋನಂ ಕಪೂರ್ ಮತ್ತೊಮ್ಮೆ ಹೆಜ್ಜೆ ಹಾಕಿದರು. ‘ದ ಕಿಲ್ಲಿಂಗ್ ಆಫ್ ಎ ಸೇಕ್ರೆಡ್ ಡೀರ್’ ಚಿತ್ರದ ಪ್ರದರ್ಶನಕ್ಕೆ ಆಹ್ವಾನಿತರಾಗಿದ್ದ ಸೋನಂ ಧರಿಸಿದ್ದ ಬಂಗಾರದ ಬಣ್ಣದ ಉಡುಗೆ ಪೌಚ್ ಮತ್ತು ಬೆಲ್ಟ್, ವಜ್ರದ ಉಂಗುರ ಎಲ್ಲರ ಮೆಚ್ಚುಗೆ ಗಳಿಸಿದವು.
‘ಲೋರಿಯಲ್ ಪ್ಯಾರಿಸ್’ ಬ್ರ್ಯಾಂಡ್ನ ರಾಯಭಾರಿಯಾಗಿರುವ ಸೋನಂ ಅವರ ಈ ಉಡುಪನ್ನು ಎಲಿ ಸಾಬ್ ವಿನ್ಯಾಸ ಮಾಡಿದ್ದು, ‘ಕೊಪಾರ್ಡ್’ ಬ್ರ್ಯಾಂಡ್ನ ತೊಡುಗೆಗಳು ಅವರಿಗೆ ವಿಶಿಷ್ಟ ನೋಟ ನೀಡಿದ್ದವು.
(ಬಂಗಾರದ ಬಣ್ಣದ ಉಡುಗೆಯಲ್ಲಿ ಮಿಂಚಿದ ಸೋನಂ)
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.