ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು ಮತ್ತು ನಾಳೆ

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಗುಡಿಯ ಸಂಭ್ರಮದಲ್ಲಿ: ಶನಿವಾರ  ಶ್ರೀಕುಮಾರ್ ಅವರಿಂದ ರಾಮಾಯಾಣದ ಕಥೆಗಳು. ಶ್ರೀರಂಜಿನಿ ಅವರಿಂದ ಸಾಂಪ್ರದಾಯಿಕ ಆಟಗಳು, ಎಂ.ಎಸ್.ಶೀಲಾ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ; ಪ್ರಕಾಶ್ ಬೆಳವಾಡಿ ನಿರ್ದೇಶನದ `ದಾನಶೂರ ಕರ್ಣ~.ಸ್ಥಳ: ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನ.

ಭಾನುವಾರ ಶ್ರೀಕುಮಾರ್ ರಾಮಾಯಣದ ಕಥೆಗಳು, ಶ್ರೀರಂಜಿನಿ ಕವಡೆ ಅವರಿಂದ ಸಾಂಪ್ರದಾಯಿಕ ಆಟಗಳು, ವೃಕ್ಷ ಕಥಾ, ನಟರಾಜನ್ ಮೇಳ ಅವರಿಂದ ಭಗವದ್ಗೀತಾ. ಸ್ಥಳ: ಹರಿಹರೇಶ್ವರ ಸ್ವಾಮಿ ದೇವಸ್ಥಾನ. ನಿತ್ಯ ಸಂಜೆ 4ರಿಂದ.

ನಾದರಂಜಿನಿ ಸಂಗೀತ ಸಭಾ: ಪುರಂದರದಾಸರ ಪುಣ್ಯದಿನ ಮತ್ತು ತ್ಯಾಗರಾಜ ಸ್ವಾಮಿಗಳ ಆರಾಧನೆಯಲ್ಲಿ ಶನಿವಾರ ಸಂಜೆ 5.30ಕ್ಕೆ ಎಸ್. ರಾಮಚಂದ್ರನ್ ಅವರಿಂದ ಗಾಯನ. ಪಕಾಲ ಶ್ರೀರಾಮದಾಸ್ (ಪಿಟೀಲು), ಚೆಲುವರಾಜು (ಮೃದಂಗ), ಶ್ರೀಶೈಲನ್ (ಘಟ). ಭಾನುವಾರ ಬೆಳಿಗ್ಗೆ 9ಕ್ಕೆ ರೂಪಾ ಮತ್ತು ದೀಪಾ ಅವರಿಂದ ಗಾಯನ. ಮೀರಾ ರಾಜ್‌ಕುಮಾರ್ (ಪಿಟೀಲು), ರಾಜ್‌ಕುಮಾರ್ (ಮೃದಂಗ), ಭಾನುಪ್ರಕಾಶ್ (ಮೋರ್ಚಿಂಗ್). ಸ್ಥಳ: ಧರಣಿ ಮಹಿಳಾ ಸಂಘ, ಪೋಸ್ಟ್ ಆಫೀಸ್ ಹಿಂಭಾಗ, ಬಸವೇಶ್ವರ ನಗರ.

ಶ್ರೀ ನಗರೇಶ್ವರ ಕನ್ಯಕಾ ಪರಮೇಶ್ವರಿ ದೇವಸ್ಥಾನ:
ಶನಿವಾರ ಮತ್ತು ಭಾನುವಾರ ಮಹಾಕುಂಭಾಭಿಷೇಕದಲ್ಲಿ ಬೆಳಿಗ್ಗೆ ವಿಶೇಷ ಪೂಜೆ. 11.30ಕ್ಕೆ ತಮಿಳುನಾಡಿನ ರಾಜ್ಯಪಾಲ ಡಾ.ಕೆ.ರೋಸಯ್ಯ ಅವರಿಂದ ನೂತನ ದೇವಾಲಯ ಉದ್ಘಾಟನೆ. ಸ್ಥಳ: ನಂ.27, ಜ್ಯೂಯಲರ್ಸ್‌ ಬೀದಿ, ಶಿವಾಜಿನಗರ.

ಸಿದ್ಧಿ ಗಣಪತಿ ದೇವಸ್ಥಾನ: ಆರಾಧನಾ ಮಹೋತ್ಸವದಲ್ಲಿ ಗಾನಕಲಾವಿಭೂಷಣ್ ಹುಸೇನ್ ಸಾಬ್ ಕನಕಗಿರಿಯವರಿಗೆ ಮನೋರಂಜಿನಿ ಪ್ರಶಸ್ತಿ ಪ್ರದಾನ. ಸಂಜೆ 6.30ಕ್ಕೆ ಸುಮುಖ್ ಅವರಿಂದ ಶಾಸ್ತ್ರೀಯ ಗಾಯನ. ಭಾನುವಾರ ಬೆಳಿಗ್ಗೆ 8.30ಕ್ಕೆ `ಊಂಛವೃತ್ತಿ~. ಸಂಜೆ 6.30ಕ್ಕೆ ಅನುಪಮಾ ಶ್ರೀಮಾಲಿ ಅವರಿಂದ ಶಾಸ್ತ್ರೀಯ ಸಂಗೀತ. ಪ್ರವೀಣ್ (ಮೃದಂಗ), ರಾಜೀವ ಲೋಚನ (ಪಿಟೀಲು), ಶಶಿ ಶೇಖರ್ (ಘಟ), ಜಮ್ಮಟಿಗೆ ನಾಗರಾಜರಾವ್ (ಮೋರ್ಚಿಂಗ್).
ಉದ್ಘಾಟನೆ: ಸಾರಿಗೆ ಮತ್ತು ಗೃಹಸಚಿವ ಆರ್.ಅಶೋಕ್.
ಸ್ಥಳ: ಕೆ.ಎಸ್.ಆರ್.ಟಿ.ಸಿ. ಬಡಾವಣೆ, ಚಿಕ್ಕಲಸಂದ್ರ, ಉತ್ತರಹಳ್ಳಿ ರಸ್ತೆ.

ಶಂಕರ ಜಯಂತಿ ಮಂಡಲಿ: ಶನಿವಾರ ಡಾ.ಹೇಮಲತಾ ಅವರಿಂದ `ಡಿಂಡಿಮ~ ವಿಷಯ ಕುರಿತು ಉಪನ್ಯಾಸ. ಸ್ಥಳ: ಶಂಕರ ಕೃಪಾ ರಸ್ತೆ, 16ನೇ ಅಡ್ಡ ರಸ್ತೆ, 3ನೇ ಬಡಾವಣೆ. ಸಂಜೆ 6.30.

ಗುರ್ಜಾಲಾರ‌್ಯರ  ತತ್ವಜ್ಞಾನ ಪ್ರತಿಷ್ಠಾನ: ಶನಿವಾರ ಮತ್ತು ಭಾನುವಾರ ಗುರ್ಜಾಲಾರ‌್ಯರ 258ನೇ ಪುಣ್ಯದಿನೋತ್ಸವ ಅಂಗವಾಗಿ ಮದ್ಭಾಗವತೋತ್ಸವ, ದುರ್ಗಾಸಪ್ತಶತಿ ಯಾಗ ಮತ್ತು ಪವಮಾನಾದಿ ಹೋಮೋತ್ಸವ. ಸ್ಥಳ: ಪೂರ್ಣಪ್ರಜ್ಞ ಪ್ರವಚನ ಸಭಾಗೃಹ, ಪಿಪಿನಗರ ಕತ್ರರಿಗುಪ್ಪೆ. ಸಂಜೆ 6.

ರಾಮಲಲಿತಾ ಕಲಾ ಅಕಾಡೆಮಿ: ಶನಿವಾರ ಸಂಜಯ್ ಸುಬ್ರಹ್ಮಣ್ಯ ಅವರಿಂದ ಗಾಯನ. ನಾಗೈ ಮುರಳಿಧರನ್ (ವಯಲಿನ್), ಮನ್ನಾರ್‌ಗುಡಿ  ಎ.ಈಶ್ವರನ್ (ಮೃದಂಗ), ಜಿ.ಎಸ್.ರಾಮಾನುಜಂ (ಘಟ), ಬಿ.ರಾಜಶೇಖರ್ (ಮೋರ್ಚಿಂಗ್). ರಂಜಿನಿ ಮತ್ತು ಗಾಯತ್ರಿ ಅವರಿಂದ  ಗಾಯನ. ಚಾರುಮತಿ ರಾಮಾನುಜಂ (ವಯಲಿನ್), ಮನೋಜ್ ಶಿವಾ (ಮೃದಂಗ), ಜಿ.ಎಸ್.ರಾಮಾನುಜಂ (ಘಟ). ಗಾಯನ ಸಮಾಜ, ಕೆ.ಆರ್.ರಸ್ತೆ. ಸಂಜೆ 5.45.

ಕಬೀರನಾಥ್ ಸ್ವಾಮೀಜಿ ಬ್ರಹ್ಮವಿದ್ಯಾಶ್ರಮ ಟ್ರಸ್ಟ್: ಕಬೀರನಾಥ ಸ್ವಾಮೀಜಿಯವರ ಪುಣ್ಯಾರಾಧನೆ. ಸ್ಥಳ: ನಂ.5, 3ನೇ ಕ್ರಾಸ್, ಕೆಂಪೇಗೌಡ ಎಕ್ಸ್‌ಟೆನ್ಷನ್. ಸಂಜೆ 6.

ರಂಗಶಂಕರ: ಶನಿವಾರ ಮತ್ತು ಭಾನುವಾರ ಪರ್ಚ್ ತಂಡದಿಂದ `ಮಿಸ್ ಮೀನಾ~ ಇಂಗ್ಲಿಷ್ ನಾಟಕ. (ರಚನೆ: ರಶ್ಮಿ ರುತ್ ದೇವದಾಸನ್. ನಿರ್ದೇಶನ: ರಾಜೀವ್ ಕೃಷ್ಣನ್). ಸ್ಥಳ: ಜೆ.ಪಿ.ನಗರ. 2ನೇ ಹಂತ. ನಿತ್ಯ ಸಂಜೆ 7.30. (ಭಾನುವಾರ ಮಧ್ಯಾಹ್ನ 3.30ಕ್ಕೂ ಇದೆ)

ತಿರಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್: ಶನಿವಾರ ಚಂದ್ರಿಕಾ ಗುಟ್ಟಹಳ್ಳಿ ಅವರಿಂದ ಸಂಗೀತ. ಸ್ಥಳ: ತಿರಮಲ ತಿರುಪತಿ ದೇವಸ್ಥಾನ, ವಾರ್ತಾ ಕೇಂದ್ರ, ಜಯನಗರ.

ಜೈವಿಕ ಕೃಷಿಕ್ ಸೊಸೈಟಿ: ಡಾ. ಮರಿಗೌಡ ಸಭಾಂಗಣ, ಲಾಲ್‌ಬಾಗ್, ಎರಡು ದಿನಗಳ ಸಾವಯವ ಸಂತೆ, ಉದ್ಘಾಟನೆ- ತೋಟಗಾರಿಕೆ ಇಲಾಖೆಯ ಪ್ರದಾನ ಕಾರ್ಯದರ್ಶಿ ವನಿತಾ ಶರ್ಮ, ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 10.30.
 
ವನಶ್ರೀ: ಗೋಲ್ಡನ್ ಬೆಡ್ ಸ್ಕೂಲ್, 157, ರಿಚ್‌ಮಂಡ್  ರಸ್ತೆ, ಬಿಗ್ ಕಡ್ಸ್‌ಕೆಂಪ್ ಹಿಂಬಾಗ, ಎಂ.ಜಿ.ರಸ್ತೆ,  ಮಲ್ನಾಡ್ ಮೇಳ.  ಶನಿವಾರ ಮತ್ತು ಭಾನುವಾರ  ಬೆಳಿಗ್ಗೆ 10.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT