ರೇಸ್‌ಕೋಸ್ ರಸ್ತೆಯ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಇಂಡಿಯಾ ಸೆಮಿಕಂಡಕ್ಟರ್ ಸಂಸ್ಥೆಯ ಸಮಾವೇಶದ ಅಂಗವಾಗಿ ವಿಶಿಷ್ಟ ತಾಂತ್ರಿಕ ಪ್ರದರ್ಶನವೊಂದು ನಡೆಯುತ್ತಿದೆ. ಬಿಇಎಲ್, ಮಣಿಪಾಲ್ ಯುನಿವರ್ಸಲ್ ಲರ್ನಿಂಗ್ ಸೇರಿದಂತೆ ಅನೇಕ ಸಂಸ್ಥೆಗಳು ಇದರಲ್ಲಿ ಪಾಲ್ಗೊಂಡಿವೆ.

ಆದರೆ ಇಲ್ಲಿ ವಿಶೇಷವಾಗಿ ಗಮನ ಸೆಳೆಯುವುದು ಬೆಂಗಳೂರು ಮೂಲದ ಸುಫಲಾಂ ಟೆಕ್ನಾಲಜೀಸ್‌ನ ಸ್ಮಾರ್ಟ್ ಬಾಕ್ಸ್. ಟಚ್‌ಪ್ಯಾಡ್, ಸ್ಟೈಲಸ್‌ಯುಕ್ತ ಮೊಬೈಲ್ ಹೋಲುವ ಈ ಉಪಕರಣ ಒಂದರ್ಥದಲ್ಲಿ ಪಾಠಕ್ಕೊಂದು ಪುಠಾಣಿ ಸಾಧನ. ಶಾಲೆ, ಕಾಲೇಜಿನಲ್ಲಿ ಓದುವಾಗ ನೋಟ್ಸ್ ಮಾಡಿಕೊಳ್ಳಲು ಇದರಲ್ಲಿ ಸುಲಭದ ವ್ಯವಸ್ಥೆಯಿದೆ.

ತಂತ್ರಜ್ಞಾನ ಅಳವಡಿಸಿಕೊಂಡ ಆಧುನಿಕ ಶಿಕ್ಷಣ ಪದ್ಧತಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ಸಾಧನ ಅಭಿವೃದ್ಧಿಪಡಿಸಲಾಗಿದೆ. ಶಾಲೆಗಳು ಬಯಸಿದರೆ ಇಡಿ ಪಠ್ಯಕ್ರಮವನ್ನೇ ಇದರಲ್ಲಿ ಅಳವಡಿಸಬಹುದು. ಇಂಗ್ಲಿಷ್ ಮಾತ್ರವಲ್ಲದೆ ಕನ್ನಡ ಮತ್ತಿತರ ಭಾರತೀಯ ಭಾಷೆಗಳಿಗೂ ಇದು ಹೊಂದಿಕೊಳ್ಳುತ್ತದೆ. ವೈಫೈ ಸೌಕರ್ಯದಲ್ಲೂ ದೊರೆಯುತ್ತದೆ. ಬೆಲೆ ಕೂಡ ಕೈಗೆಟಕುವಂತಿದೆ (3 ಸಾವಿರ ರೂ) ಎನ್ನುತ್ತದೆ ಕಂಪೆನಿ.

ಇದಲ್ಲದೆ ಪ್ರಸೂತಿ ಮತ್ತು ನವಜಾತ ಶಿಶುಗಳ ಆರೈಕೆಯಲ್ಲಿ ಸಹಾಯ ಮಾಡುವ ಫೀನಿಕ್ಸ್ ಮೆಡಿಕಲ್ ಸಿಸ್ಟಮ್, ಡಯಾಬೆಟಿಕ್ ನ್ಯೂರೋಪತಿ ಮತ್ತು ಕಾಲಿನ ಅಲ್ಸರ್ ತಡೆಯುವ ಡಯಾ ಸೆನ್ಸ್ ಉಪಕರಣಗಳೂ ಪ್ರದರ್ಶನದ ವಿಶೇಷ ಆಕರ್ಷಣೆ. ಅಂದ ಹಾಗೆ ಪ್ರದರ್ಶನ ಇಂದು ಮುಕ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.