ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಾಮಣಿಯ ಕ್ಷೇತ್ರಪ್ರೇಮ

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ಕೆ.ಆರ್.ಸರ್ಕಲ್‌ನಲ್ಲಿ ಮನೆ ಇದ್ದರೂ ಪ್ರಿಯಾಮಣಿ ಮನಸ್ಸು ಈಗಲೂ ಪದೇಪದೇ ತೆಲುಗು ಧ್ಯಾನ ಮಾಡಲು ಕಾರಣವಿದೆ. ಕನ್ನಡದಲ್ಲಿ ಅವರು ಅಭಿನಯಿಸಿರುವ `ಕೋ... ಕೋ...~ ಸಿದ್ಧವಾಗಿದೆ. `ಅಣ್ಣಾ ಬಾಂಡ್~ ಚಿತ್ರೀಕರಣಕ್ಕೆ ಈಗ ಸಣ್ಣ ವಿರಾಮ.

ಈ ಚಿತ್ರಗಳಿಗೆ ಬಣ್ಣಹಚ್ಚಿದ ಯಾವ ಅನುಭವವನ್ನು ಪ್ರಿಯಾಮಣಿ ಹಂಚಿಕೊಳ್ಳುತ್ತಿಲ್ಲ. ಅವರ ತಲೆತುಂಬಾ ಕಾಡುತ್ತಿರುವುದು `ಕ್ಷೇತ್ರಂ~ ತೆಲುಗು ಚಿತ್ರ. ಯಾರೇ ಅವರಿಗೆ ಫೋನಾಯಿಸಿದರೂ ಪಟಪಟನೆ ಹೊಮ್ಮುವ ಮಾತುಗಳಲ್ಲಿ ಅದೇ ಚಿತ್ರದ ಜಪ.

`ಕ್ಷೇತ್ರಂ~ನಲ್ಲಿ ಪ್ರಿಯಾಮಣಿ ಮೂರು ರೀತಿಯ ಧೋರಣೆ ಇರುವ ಒಂದೇ ಪಾತ್ರವನ್ನು ನಿರ್ವಹಿಸಿದ್ದಾರೆ. ಮೊದಲರ್ಧದಲ್ಲಿ ಸಾಂಪ್ರದಾಯಿಕ ಹುಡುಗಿ. ಎರಡನೇ ಅರ್ಧದಲ್ಲಿ ಕಡ್ಡಿ ಹಿಡಿದು ಹೊಡೆದಾಡುವ ಇನ್ನೊಂದು ಮುಖ. ಹೀಗೆ ಪಾತ್ರದಲ್ಲಿ ವಿಚಿತ್ರ ಏರಿಳಿತಗಳಿರುವುದರಿಂದ ಪ್ರಿಯಾಮಣಿ ಆಪ್ತೇಷ್ಟರಲ್ಲಿ `ಕ್ಷೇತ್ರಂ~ ಬಗ್ಗೆ ಪ್ರಸ್ತಾಪ ಮಾಡುತ್ತಿರುವುದು.

ಹಿಂದೊಮ್ಮೆ ಕನ್ನಡದಲ್ಲೇ ಅವಕಾಶಕ್ಕೆ ಯತ್ನಿಸಿ, ಅದು ಸಿಗದೇಹೋದಾಗ ಮಲಯಾಳಂ ಚಿತ್ರರಂಗದಲ್ಲಿ ನಟನಾಕೌಶಲ್ಯ ತೋರಿ, ಅಲ್ಲಿಂದ ಟಾಲಿವುಡ್‌ನಲ್ಲಿ ಛಾಪು ಮೂಡಿಸಿದ ಪ್ರಿಯಾಮಣಿಗೆ ಈಗ ಕನ್ನಡದಲ್ಲೂ ಸಾಕಷ್ಟು ಬೇಡಿಕೆ ಇದೆ. `ಸ್ಕ್ರಿಪ್ಟ್‌ನಲ್ಲಿ ಧಮ್ ಇರಬೇಕು.

ನನ್ನ ಪಾತ್ರಕ್ಕೆ ತೂಕವಿರಬೇಕು. ನನ್ನ ಜೊತೆ ಯಾರ‌್ಯಾರು ಅಭಿನಯಿಸುತ್ತಾರೆ ಎಂಬುದೂ ತುಂಬಾ ಮುಖ್ಯ. ಅವನ್ನೆಲ್ಲಾ ಅಳೆದು ತೂಗಿದ ನಂತರವಷ್ಟೆ ನಾನು ಸಿನಿಮಾಗಳನ್ನು ಒಪ್ಪಿಕೊಳ್ಳುವುದು~ ಎನ್ನುವ ಪ್ರಿಯಾಮಣಿ `ದಿ ಡರ್ಟಿ ಪಿಕ್ಚರ್~ ಚಿತ್ರದಲ್ಲಿ ವಿದ್ಯಾ ಬಾಲನ್ ಮಾಡಿರುವ ಪಾತ್ರ ನೋಡಿ ದಂಗಾಗಿದ್ದಾರಂತೆ. ನಟಿಯೊಬ್ಬಳಿಗೆ ಅಷ್ಟರ ಮಟ್ಟಿಗೆ ಕಮಿಟ್‌ಮೆಂಟ್ ಇರಬೇಕು ಎನ್ನುವುದು ಅವರ ಕಾಮೆಂಟು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT