ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದ ಲೋಕದಿ ತೇಲುವ ಕನಸು

Last Updated 20 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮಾಡೆಲಿಂಗ್‌ಗೆ ನಿಮ್ಮ ಆಯ್ಕೆಯಾಗಿದ್ದು ಹೇಗೆ?

ಮಾಡೆಲ್‌ ಆಗಬೇಕೆಂಬುದು ನನ್ನ ಉದ್ದೇಶವಾಗಿರಲಿಲ್ಲ. ನಟನಾಗಬೇಕು ಎಂಬುದು ನನ್ನ ಬಹು ದಿನದ ಕನಸು. ಆ ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿ ಮಾಡೆಲಿಂಗ್‌ ಕ್ಷೇತ್ರ ಪ್ರವೇಶಿಸಿದೆ. 5.11 ಅಡಿ ಎತ್ತರ ಇರುವುದರಿಂದ ರೂಪದರ್ಶಿಯಾಗು ಎಂದು ಹಲವರು ಸಲಹೆ ನೀಡಿದರು. ಪ್ರಯತ್ನಿಸೋಣ ಎಂದು ಈ ಕ್ಷೇತ್ರಕ್ಕೆ ಬಂದೆ. ಇದರಲ್ಲಿ ನಮ್ಮ ಹಾವಭಾವವೂ ಮುಖ್ಯವಾಗುತ್ತದೆ. ಹಾಗಾಗಿ ಸಿಲ್ವರ್‌ ಸ್ಟಾರ್‌ ಮಾಡೆಲಿಂಗ್‌ ಏಜೆನ್ಸಿಯಲ್ಲಿ ಗ್ರೂಮಿಂಗ್‌ ತರಬೇತಿ ಪಡೆದೆ.

ನಿಮ್ಮ ಊರು, ಉದ್ಯೋಗ...

ಸ್ವಂತ ಊರು ತುಮಕೂರು. ಪಿಯುಸಿ ನಂತರ ನಗರಕ್ಕೆ ಬಂದೆ. ಬಿ.ಕಾಂ. ಪದವಿ ಓದಿದ್ದೇನೆ.

'ಮಿಸ್ಟರ್‌ ಕರ್ನಾಟಕ' ಆದ ಅನುಭವ...

ಸ್ಪರ್ಧೆಯಲ್ಲಿ 25 ಮಂದಿ ಅಂತಿಮ ಘಟ್ಟ ಮುಟ್ಟಿದ್ದೆವು. ಇದು ಕೇವಲ ಸೌಂದರ್ಯಕ್ಕಷ್ಟೆ ಸೀಮಿತವಾದ ಸ್ಪರ್ಧೆಯಲ್ಲ. ವಿವಿಧ ಹಂತದ ಸ್ಪರ್ಧೆಗಳೊಂದಿಗೆ ಫಿಟ್‌ನೆಸ್ ಮತ್ತು ಪ್ರತಿಭೆಗೆ ಹೆಚ್ಚು ಮಹತ್ವ ಇತ್ತು. ನನಗೇನೋ ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸವಿತ್ತು. ನನ್ನ ನಂಬಿಕೆ ಸುಳ್ಳಾಗಲಿಲ್ಲ.

ಹವ್ಯಾಸಗಳು...

ಸಾಹಸ ಪ್ರವಾಸ ಇಷ್ಟ. ಪರ್ವತಾರೋಹಣ ಮಾಡುತ್ತಿರುತ್ತೇನೆ. ಬಿಡುವು ಸಿಕ್ಕಾಗಲೆಲ್ಲ ಗೆಳೆಯರೊಂದಿಗೆ ಚಾರಣ ಹೋಗುತ್ತೇನೆ.

ಎಂತಹ ಪಾತ್ರಗಳಲ್ಲಿ ನಟಿಸುವಾಸೆ?

ಒಳ್ಳೆಯ ಕಥೆಯಿರಬೇಕು. ನನಗೆ ನಟ ಉಪೇಂದ್ರ ಎಂದರೆ ತುಂಬಾ ಇಷ್ಟ. ಅವರ ನಿರ್ದೇಶನದಿಂದ ಪ್ರಭಾವಿತನಾಗಿದ್ದೇನೆ. ಸಾಕಷ್ಟು ಸಲ ಆಡಿಷನ್‌ ಕೊಟ್ಟಿದ್ದೇನೆ. ಉತ್ತಮ ಅವಕಾಶ ಸಿಕ್ಕರೆ ಖಂಡಿತಾ ನಟಿಸುತ್ತೇನೆ.

ಮಾಡೆಲಿಂಗ್‌ ಕ್ಷೇತ್ರದಿಂದ ನೀವು ಕಲಿತಿದ್ದು...

ಸೌಂದರ್ಯಕ್ಕಷ್ಟೇ ಫ್ಯಾಷನ್ ಶೋಗಳು ಸೀಮಿತವಾಗಿಲ್ಲ. ಆತ್ಮವಿಶ್ವಾಸ, ವ್ಯಕ್ತಿತ್ವ ಮತ್ತು ಪ್ರತಿಭೆಯೂ ವೇದಿಕೆಯಲ್ಲಿ ಪ್ರತಿಫಲಿತವಾಗುತ್ತದೆ. ಬೇರೆಯವರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಈ ಕ್ಷೇತ್ರ ಕಲಿಸುತ್ತದೆ. ನಮ್ಮ ಸಾಮಥ್ಯವನ್ನು ಅರಿಯುವಂತೆ ಮಾಡುತ್ತದೆ.

ಫಿಟ್‌ನೆಸ್‌...

ಬಣ್ಣದ ಕ್ಷೇತ್ರದಲ್ಲಿ ಫಿಟ್‌ ಆಗಿರುವುದು ಮುಖ್ಯ. ಡಯಟ್ ಅನ್ನು ಜೀವನದ ಭಾಗ ಮಾಡಿಕೊಂಡರೆ ಮಾತ್ರ ಉತ್ತಮ ಮಾಡೆಲ್‌ ಆಗಲು ಸಾಧ್ಯ. ಅದಕ್ಕಾಗಿ ಎಂಟು ವರ್ಷಗಳಿಂದ ಜಿಮ್‌ನಲ್ಲಿ ದೇಹ ದಂಡಿಸುತ್ತಿದ್ದೇನೆ. ಒಂದು ದಿನ ಜಿಮ್‌ ಮಾಡದಿದ್ದರೂ ಏನೋ ಕಳೆದುಕೊಂಡಂತೆ ಆಗುತ್ತದೆ. ಪ್ರತಿದಿನ ಮುಕ್ಕಾಲು ಗಂಟೆ ತಪ್ಪದೆ ವ್ಯಾಯಾಮ ಮಾಡುತ್ತೇನೆ.

ಡಯೆಟ್‌ ಅನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ. ಪೌಷ್ಟಿಕ ಆಹಾರ ತಜ್ಞರ ಸಲಹೆ ಪಡೆದು ಆಹಾರ ಸೇವನೆಯ ಚಾರ್ಟ್ ರೂಪಿಸಿಕೊಳ್ಳುವುದು ಉತ್ತಮ ಡಯೆಟಿಂಗ್‌ಗೆ ಅನಿವಾರ್ಯ. ನಾನು ಅನ್ನ ತಿನ್ನುವುದು ಬಹಳ ಕಡಿಮೆ. ತರಕಾರಿ, ಮೊಟ್ಟೆಯ ಬಿಳಿ ಭಾಗ, ಹಣ್ಣು ತಿನ್ನುತ್ತೇನೆ. ವಿವಿಧ ಹಣ್ಣುಗಳ ಜ್ಯೂಸ್‌ ಸಹ ನನ್ನ ಡಯಟ್‌ನ ಭಾಗ. ವ್ಯಾಯಾಮ ಮಾಡುವುದರಿಂದ ಚೆನ್ನಾಗಿ ಬೆವರು ಬರುತ್ತದೆ. ಹೀಗಾಗಿ ಚರ್ಮವೂ ಸುಂದರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT