ಯುವಜನತೆಗೆ ಕಾಫಿ ಕೆಫೆ ಸಂಸ್ಕೃತಿ ಪರಿಚಯಿಸಿದ ಬರಿಸ್ತಾ ಲವಾಸ್ಸಾ, ಈಗ ತನ್ನ ಗ್ರಾಹಕರಿಗೆ ಕೆಫೆಗಳಲ್ಲಿ `ಶಬ್ದಗಳ ಹುಡುಕಾಟ'ದ ಆಟವನ್ನು (ಸಕ್ಯೆಾಬಲ್ ಗೇಮ್) ಆಯೋಜಿಸಿದೆ.

ಕೆಫೆ ಸಂಸ್ಕೃತಿಯಲ್ಲಿ ಮೊದಲ ಬಾರಿಗೆ ಸಕ್ಯೆಾಬಲ್ ಪರಿಚಯಿಸಿದ್ದ ಲವಾಸ್ಸಾ, ಈಗ `ಬರಿಸ್ತಾ ಲವಾಸ್ಸಾ ಕೆಫೆ ಸಕ್ಯೆಾಬಲ್ 2013'ನ್ನು ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ಮುಂದಾಗಿದೆ. ಈ ಆಟಕ್ಕೆ ಸಕ್ಯೆಾಬಲ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಮ್ಯೋಟೆಲ್ನ ಸಹಯೋಗ ನೀಡಿದೆ.

ಬರಿಸ್ತಾ ಲವಾಸ್ಸಾದ ಗ್ರಾಹಕರು ಶಬ್ದಗಳ ಆಟದಲ್ಲಿ ತೊಡಗಿಕೊಳ್ಳುವ ಮತ್ತು ಸವಾಲೊಡ್ಡುವ ಮೂಲಕ ಕೆಫೆಯಲ್ಲಿ ಕುಳಿತು ಹರಟಬಹುದು. ಮೋಜು ಮಾಡಬಹುದು.

ಬರಿಸ್ತಾ ಲವಾಸ್ಸಾ ಕೆಫೆ ಸಕ್ಯೆಾಬಲ್ ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದ್ದು, ಜೂನ್ 8ಕ್ಕೆ ಆರಂಭಗೊಂಡಿದೆ. ಜೂನ್ 23ಕ್ಕೆ ಇದು ಕೊನೆಗೊಳ್ಳಲಿದೆ. ಈ ಚಾಂಪಿಯನ್ಶಿಪ್ ದೆಹಲಿ, ಚಂಡೀಗಡ, ಹೈದರಾಬಾದ್, ಬೆಂಗಳೂರು, ಕೋಲ್ಕತ್ತ, ಚೆನ್ನೈ, ಪುಣೆ ಮತ್ತು ಮುಂಬೈನಲ್ಲಿ ನಡೆಯಲಿದೆ. ಈ ಸ್ಪರ್ಧೆಯು ಎಲ್ಲ ವಯೋಮಾನದವರಿಗೆ ಅನ್ವಯಿಸುತ್ತದೆ. ಆಸಕ್ತರು ಜೂನ್ 20ರವರೆಗೆ ಬರಿಸ್ತಾ ಲವಾಸ್ಸಾದ ಯಾವುದೇ ಕೆಫೆಯಲ್ಲಿ ಹೆಸರು ನೋಂದಾಯಿಸಬಹುದು.

ನೋಂದಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಕ್ಯೆಾಬಲ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಬರಿಸ್ತಾ ಲವಾಸ್ಸಾ, ಅಂಕಗಳ ಆಧಾರದ ಮೇಲೆ ಪ್ರತಿಯೊಂದು ನಗರದಿಂದ 16 ಸ್ಪರ್ಧಿಗಳನ್ನು ಆಯ್ಕೆ ಮಾಡಲಿದೆ. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಒಟ್ಟು 128 ಅಂತಿಮ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

ಬರಿಸ್ತಾ ಲವಾಸ್ಸಾ ಎಂಟು ನಗರಗಳಲ್ಲಿ ಸ್ಥಳೀಯವಾಗಿ `ವೇಗದ ಹುಟುಕಾಟ ಸುತ್ತು' (ಸ್ಪೀಡ್ ಸಕ್ಯೆಾಬಲ್ ರೌಂಡ್ಸ್) ಸ್ಪರ್ಧೆಯನ್ನು ತನ್ನ ಕೆಫೆಗಳಲ್ಲಿ ಏರ್ಪಡಿಸಲಿದೆ. ಈ ಸ್ಪರ್ಧೆಯು ಜೂನ್ 22 ಮತ್ತು 23ರಂದು ನಡೆಯಲಿದೆ.

ನಗರದ ಗರುಡ ಮಾಲ್ನಲ್ಲಿ ಜೂನ್ 23ರಂದು ಈ ಸುತ್ತು ನಡೆಯಲಿದೆ. ನಗರ ಸುತ್ತು ಸ್ಪರ್ಧೆಯಲ್ಲಿ ಆಯ್ಕೆಯಾಗುವ ಒಬ್ಬ ಅಭ್ಯರ್ಥಿಯಂತೆ ಒಟ್ಟು ಎಂಟು ಸ್ಪರ್ಧಿಗಳನ್ನು ಕೊನೆಯ ಸುತ್ತಿಗೆ ಅಂತಿಮಗೊಳಿಸಲಾಗುವುದು.

ಈ ಎಂಟು ಮಂದಿ ಪ್ರಾದೇಶಿಕ ಸ್ಪರ್ಧಿಗಳು ಪಡೆದಿರುವ ಗರಿಷ್ಠ ಅಂಕ ಆಧರಿಸಿ ಒಬ್ಬ ರಾಷ್ಟ್ರೀಯ ಸ್ಪರ್ಧಿಯನ್ನು ಆಯ್ಕೆ ಮಾಡಲಾಗುವುದು. ಗೆಲುವು ಸಾಧಿಸಿದ ಪ್ರಾದೇಶಿಕ ಸ್ಪರ್ಧಿಗಳು ಕ್ಲಬ್ ಮಹೀಂದ್ರಾ ಹಾಲಿಡೇ ಪ್ಯಾಕೇಜ್ ಜತೆಗೆ ಮ್ಯೋಟೆಲ್ ಮತ್ತು ಬರಿಸ್ತಾ ಲವಾಸ್ಸಾದ ಕೊಡುಗೆ ಪಡೆಯಲಿದ್ದಾರೆ. ರಾಷ್ಟ್ರೀಯ ಸ್ಪರ್ಧಾಳು ಈ ಎಲ್ಲ ಬಹುಮಾನಗಳ ಜತೆಗೆ ಐಪ್ಯಾಡ್ ಪಡೆಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.