‘2.0’ ನಮ್ಮ ಸಿನಿಮಾ ಬಿಡುಗಡೆಯಂದೇ ಬಿಡುಗಡೆಯಾಗುತ್ತದೆ ಎಂದು ನನಗನಿಸುತ್ತಿಲ್ಲ. ರಜನಿಕಾಂತ್ ಅವರು ದೊಡ್ಡ ಸ್ಟಾರ್ ನಟ. ನಾನು ಅವರನ್ನು ತುಂಬಾ ಗೌರವಿಸುತ್ತೇನೆ’ ಎಂದು ಅಮೀರ್ ಹೇಳಿದ್ದಾರೆ. ಬಹುಭಾಷೆಯ 2.0 ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಕೂಡ ನಟಿಸಿದ್ದು, ವಿಶೇಷವೆಂದರೆ ಅಕ್ಷಯ್ ಪಾತ್ರವನ್ನು ಮಾಡುವಂತೆ ಅಮೀರ್ ಅವರನ್ನು ಕೇಳಲಾಗಿತ್ತು. ಆದರೆ ಅವರು ನಿರಾಕರಿಸಿದ್ದರು.