ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಿಂಗ ಸಮಾನತೆ’ ವೋಲ್ವೊ ಅಭಿಯಾನ

ಕಾರು ನಿರ್ಮಾಣದಲ್ಲಿ ಮಹಿಳೆಯರ ಸುರಕ್ಷತೆಗೆ ಒತ್ತು
Last Updated 26 ಮೇ 2019, 19:45 IST
ಅಕ್ಷರ ಗಾತ್ರ

ಮಹಿಳೆಯರ ಸುರಕ್ಷತೆಗೆ ಒತ್ತು ನೀಡಲು ಮತ್ತು ಲಿಂಗ ಸಮಾನತೆ ಅರಿವು ಮೂಡಿಸುವ ಉದ್ದೇಶದಿಂದ ವೋಲ್ವೊ ಕಾರ್ ಇಂಡಿಯಾ ಜಾಗೃತಿ ಅಭಿಯಾನಕ್ಕೆ ನಗರದಲ್ಲಿ ಚಾಲನೆ ನೀಡಿದೆ.

ಮಹಿಳೆಯರು ಮತ್ತು ಪುರುಷ ಪ್ರಯಾಣಿಕರಿಗೆ ಸಮಾನ ಸುರಕ್ಷತಾ ಕ್ರಮಗಳನ್ನು ಒದಗಿಸುವ ಧ್ಯೇಯದ ‘ಎಲ್ಲರಿಗೂ ಸಮಾನ ವಾಹನ’ ಜಾಗತಿಕ ಕಾರ್ಯಕ್ರಮದ ಅಂಗವಾಗಿ ವೋಲ್ವೊ ಈ ಅಭಿಯಾನ ಹಮ್ಮಿಕೊಂಡಿದೆ.

ಅಪಘಾತದ ಸಂದರ್ಭದಲ್ಲಿ ಮಹಿಳೆ ಮತ್ತು ಪುರುಷ ಪ್ರಯಾಣಿಕರಿಬ್ಬರ ಸುರಕ್ಷತೆಯನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡುಕೃತಕ ಬುದ್ಧಿಮತ್ತೆ ಆಧರಿಸಿ ಕಾರ್ಯನಿರ್ವಹಿಸುವ ಸೀಟುಗಳನ್ನು ವೋಲ್ವೊ ಕಾರಿನಲ್ಲಿ ವಿನ್ಯಾಸಗೊಳಿಸಲಾಗಿದೆಎಂದು ವೋಲ್ವೊ ಕಾರ್ ಇಂಡಿಯಾದ ಕಾರ್ಪೊರೇಟ್ ಕಮ್ಯುನಿಕೇಷನ್‌ ನಿರ್ದೇಶಕ ಸುದೀಪ್ ನಾರಾಯಣ್ ಹೇಳಿದರು.

ವಾಹನ ತಯಾರಿಕೆ ಮತ್ತು ಸುರಕ್ಷತಾ ಸೌಲಭ್ಯಗಳ ಅಳವಡಿಕೆ ಹಂತದಲ್ಲಷ್ಟೇ ವೋಲ್ವೊ ಕಾರು ತಯಾರಿಕಾ ಕಂಪನಿಯ ಲಿಂಗ ಸಮಾನತೆ ಕಾಳಜಿಯು ಸೀಮಿತವಾಗಿಲ್ಲ. ಇದು ಸಂಸ್ಥೆಯ ಕಾರ್ಪೊರೇಟ್ ಕಾರ್ಯಕ್ರಮ ಮತ್ತು ಸಂಸ್ಕೃತಿಯ ಭಾಗವೂ ಆಗಿದೆ ಎಂದು ತಿಳಿಸಿದರು.

2025ರ ವೇಳೆಗೆ ಸಂಸ್ಥೆಯ ಎಲ್ಲ ಪ್ರಮುಖ ಹುದ್ದೆಗಳಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳೆಯರು ಕಾರ್ಯನಿರ್ವಹಿಸುತ್ತಿರಬೇಕು ಎನ್ನುವುದು ಸಂಸ್ಥೆಯ ಗುರಿಯಾಗಿದೆ. ಸಂಸ್ಥೆಯ ಒಟ್ಟಾರೆ ಸಿಬ್ಬಂದಿಯಲ್ಲಿ ಮಹಿಳೆಯರ ಪಾಲು ಶೇ 23ರಷ್ಟು ಇರಲಿದೆ ಎಂದರು. ವಿವಿಧ ಕ್ಷೇತ್ರಗಳ ಮಹಿಳೆಯರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT