ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ಮುಂಜಾನೆಗೆ ಬಗೆ ಬಗೆ ದೋಸೆ

Last Updated 27 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರು ಇಷ್ಟ ಪಡುವ ತಿಂಡಿ ದೋಸೆ. ದೋಸೆಗಳಲ್ಲಿ ಹಲವು ವೈವಿಧ್ಯವಿದೆ. ಒಂದೇ ತರಹದ ಹಿಟ್ಟಿನಲ್ಲಿ ಹಲವು ಬಗೆಯ ದೋಸೆಗಳನ್ನು ಮಾಡಿ ಸವಿಯಬಹುದು.

ಬೇಕಾಗುವ ಸಾಮಗ್ರಿಗಳು
2 ಕಪ್ ದೋಸೆ ಅಕ್ಕಿ, 1 ಕಪ್ ತೆಂಗಿನ ತುರಿ, 2 ಚಮಚ ದನಿಯಾ, 1 ಚಮಚ ಜೀರಿಗೆ, 5ರಿಂದ 6 ಒಣಮೆಣಸು, 2 ಚಮಚ ಕಡ್ಲೇಬೇಳೆ, 2 ಚಮಚ ಉದ್ದಿನಬೇಳೆ, ಸ್ವಲ್ಪ ಹಿಂಗು, ಒಂದು ಸಣ್ಣ ಲಿಂಬೆ ಗಾತ್ರದ ಹುಣಸೆ ಹಣ್ಣು, ಒಂದು ಸಣ್ಣ ತುಂಡು ಬೆಲ್ಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ
ಅಕ್ಕಿಯನ್ನು 3ರಿಂದ 4 ಗಂಟೆಗಳ ಕಾಲ ನೆನೆಸಬೇಕು. ಕಡ್ಲೇಬೇಳೆ ಹಾಗೂ ಉದ್ದಿನಬೇಳೆಯನ್ನು ಹುರಿದಿಟ್ಟುಕೊಂಡು ಮೇಲೆ ಹೇಳಿದ ಸಾಮಗ್ರಿಗಳ ಜೊತೆ ನುಣ್ಣಗೆ ರುಬ್ಬಬೇಕು. ಈಗ ದೋಸೆಹಿಟ್ಟು ತಯಾರು.

ಈ ಹಿಟ್ಟನ್ನು ಉಪಯೋಗಿಸಿಕೊಂಡು ಪತ್ರೋಡೆ ಸಹ ಮಾಡಬಹುದು, ಹಾಗೆಯೇ ಬೇರೆ ಸೊಪ್ಪುಗಳನ್ನು ಹೆಚ್ಚಿ ಈ ಹಿಟ್ಟಿಗೆ ಮಿಶ್ರಣ ಮಾಡಿ ದೋಸೆ ಮಾಡಬಹುದು. ತರಕಾರಿಗಳಾದ ಬದನೆಕಾಯಿ, ಆಲೂಗಡ್ಡೆ, ಕ್ಯಾರೆಟ್, ಬೀಟ್‍ರೂಟ್, ಹೀರೆಕಾಯಿ, ಸೀಮೆಬದನೆ ಹಾಗೂ ನವಿಲುಕೋಸುಗಳನ್ನೂ ದೋಸೆಗೆ ಬಳಸಬಹುದು.

ತರಕಾರಿಗಳನ್ನು ತೆಳ್ಳಗೆ ಹಾಗೂ ದುಂಡಗೆ ಬಿಲ್ಲೆಯಾಕಾರದಲ್ಲಿ ಕತ್ತರಿಸಿಟ್ಟುಕೊಳ್ಳಬೇಕು. ರುಬ್ಬಿದ ಹಿಟ್ಟಿನಲ್ಲಿ ಒಂದೊಂದೇ ತರಕಾರಿ ಬಿಲ್ಲೆಯನ್ನು ಅದ್ದಿ ಕಾದ ಹಂಚಿನಲ್ಲಿ ಒಂದರ ಪಕ್ಕ ಒಂದರಂತೆ ನಿಧಾನ ಬೆಂಕಿ ಯಲ್ಲಿ, ಎರಡು ಬದಿಯಲ್ಲಿ ಎಣ್ಣೆ ಹಾಕಿ ಕಾಯಿಸಿದರೆ ರುಚಿಕರ ವಾದ ತರಕಾರಿ ದೋಸೆ ಸವಿಯಲು ಸಿದ್ದ. ಅದರಲ್ಲೇ ಎಲ್ಲಾ ಮಸಾಲೆ ಪದಾರ್ಥಗಳು ಇರುವದರಿಂದ ಚಟ್ನಿ ಬೇಕೇ ಬೇಕು ಎಂದೇನೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT