ಕುಗ್ಗುತ್ತಿದ್ದಾನೆ– ಕಂಪಿಸುತ್ತಿದ್ದಾನೆ ಚಂದಿರ!

ಸೋಮವಾರ, ಮೇ 20, 2019
29 °C
ನೂರಾರು ವರ್ಷಗಳ ಅಂತರದಲ್ಲಿ 150 ಅಡಿ ‘ತೆಳ್ಳಗಾದ’ ಶಶಿ

ಕುಗ್ಗುತ್ತಿದ್ದಾನೆ– ಕಂಪಿಸುತ್ತಿದ್ದಾನೆ ಚಂದಿರ!

Published:
Updated:
Prajavani

ವಾಷಿಂಗ್ಟನ್‌: ಚಂದಿರನ ಗಾತ್ರ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ಈ ಕಾರಣದಿಂದ ಅದರ ಮೇಲ್ಮೈನಲ್ಲಿ ನೆರಿಗೆಗಳು ಕಾಣಿಸಿಕೊಳ್ಳುತ್ತಿವೆ.ಇದು ಕಂಪನಗಳ ಸೃಷ್ಟಿಗೂ ಕಾರಣವಾಗುತ್ತಿದೆ ಎಂದು ನಾಸಾ ಹೇಳಿದೆ. 

ನಾಸಾದ ಲೂನಾರ್‌ ರಿಕನೈಸನ್ಸ್‌ ಆರ್ಬಿಟರ್‌ (ಎಲ್‌ಆರ್‌ಒ) ಸೆರೆ ಹಿಡಿದಿರುವ 12 ಸಾವಿರಕ್ಕೂ ಹೆಚ್ಚು ಚಿತ್ರಗಳ ಆಧಾರದ ಮೇಲೆ ನಾಸಾ ಈ ಅಧ್ಯಯನವನ್ನು ಪ್ರಕಟಿಸಿದೆ. 

ಚಂದ್ರನ ಉತ್ತರ ಧ್ರುವ ಭಾಗದಲ್ಲಿ ಇಂತಹ ಕುಗ್ಗುವಿಕೆ ಕಂಡು ಬರುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭೂಮಿಯು ವಿವಿಧ ಪದರಗಳನ್ನು ಹೊಂದಿರುವಂತೆ ಚಂದ್ರನು ಹೊಂದಿಲ್ಲ. ಆದರೆ, ಭೂಮಿಯ ನೈಸರ್ಗಿಕ ಉಪಗ್ರಹವಾಗಿರುವ ಚಂದ್ರನ ಪದರ ರಚನಾ ಕಾರ್ಯ 450 ಕೋಟಿ ವರ್ಷಗಳ ಹಿಂದೆಯೇ ನಡೆದಿದ್ದು, ತಾಪಮಾನ ಕುಸಿತದ ಕಾರಣದಿಂದ ಕುಗ್ಗುತ್ತಿದೆ. ಚಂದ್ರನ ಮಧ್ಯದ ಪದರು ಸಡಿಲವಾಗುತ್ತಿದ್ದು, ಅದರ ಮೇಲ್ಮೈನ ಒಳರಚನೆಗಳು ಕುಗ್ಗುತ್ತಿವೆ.

ಇಂತಹ ಸಂರಚನೆಯ ಪರಿಣಾಮ, ಕಳೆದ ನೂರಾರು ವರ್ಷಗಳ ಅಂತರದಲ್ಲಿ ಚಂದ್ರ 150 ಅಡಿಗಳಷ್ಟು (50 ಮೀಟರ್‌) ಕುಗ್ಗಿ ಹೋಗಿದ್ದಾನೆ ಎಂದು ನಾಸಾ ಹೇಳಿದೆ.

ದ್ರಾಕ್ಷಿಯೊಂದು ಒಣಗುವಾಗ ಮುರುಟಿಕೊಂಡು ಸುಕ್ಕಾಗುವ ಮಾದರಿಯಲ್ಲಿ ಚಂದ್ರನ ಮೇಲೆ ನೆರಿಗೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಸಂಶೋಧಕರು ಹೇಳಿದ್ದಾರೆ. 

‘ಈ ರೀತಿಯ ಸಂರಚನೆಗಳು ಚಂದ್ರನಲ್ಲಿ ಈಗಲೂ ಕ್ರಿಯಾಶೀಲವಾಗಿದ್ದು ಇದರಿಂದ ಚಂದ್ರ ತಂಪಾಗಿ ಸಂಕುಚಿತಗೊಳ್ಳುವ ಸಂದರ್ಭದಲ್ಲೆಲ್ಲಾ ಚಂದ್ರನ ಒಡಲಲ್ಲಿ ಕಂಪನಗಳು ಉಂಟಾಗುತ್ತಿರುತ್ತವೆ’ ಎನ್ನುವ, ಅಮೆರಿಕದ ರಾಷ್ಟ್ರೀಯ ವಾಯು ಮತ್ತು ಬಾಹ್ಯಾಕಾಶ ಸಂಗ್ರಹಾಲಯದ ಹಿರಿಯ ವಿಜ್ಞಾನಿ ಥಾಮಸ್‌ ವಾಟರ್ಸ್‌  ‘ಈ ರೀತಿಯ ಕಂಪನಗಳು ಕೆಲವೊಮ್ಮೆ ತೀವ್ರವಾಗಿರುತ್ತವೆ. ರಿಕ್ಟರ್‌ ಮಾಪಕದಲ್ಲಿ 5ರಷ್ಟು ತೀವ್ರತೆಯ ಕಂಪನಗಳು ಸೃಷ್ಟಿಯಾಗಬಹುದು’ ಎಂದು ಅವರು ತಿಳಿಸಿದ್ದಾರೆ. 

ಅಪೊಲೊ ಮಿಷನ್‌ನ ಖಗೋಳ ವಿಜ್ಞಾನಿಗಳು ಚಂದ್ರನ ಮೆಲ್ಮೈನ ಮೇಲೆ ಇರಿಸಿರುವ ನಾಲ್ಕು ಕಂಪನ ಮಾಪಕಗಳ ಮೂಲಕ ‘ಚಂದ್ರ ಕಂಪನ’ದ ಬಗ್ಗೆ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದ್ದಾರೆ. ಈ ಕಂಪನಗಳನ್ನು ಅಳೆಯಲಾಗಿ ‘ಚಂದ್ರ ಕಂಪನ’ ಸಂಬಂಧಿತ ವಿಸ್ತೃತ ಅಧ್ಯಯನ ವರದಿಯನ್ನು ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ.

ಈ ಮಾಪಕಗಳು ಚಂದ್ರನೊಳಗೆ ಉಂಟಾದ ಒಟ್ಟು 28 ಕಂಪನಗಳನ್ನು ದಾಖಲಿಸಿವೆ. ಇವುಗಳ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 2ರಿಂದ 5ರವರೆಗೆ ಇತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.

***

ಭೂಮಿ ಹೊರತು ಪಡಿಸಿ ಬೇರೆ ಯಾವುದೇ ಗ್ರಹ ಅಥವಾ ಉಪಗ್ರಹದಲ್ಲಿ ಪದರಗಳು ಸಂಕುಚಿತಗೊಳ್ಳುವ ಚಟುವಟಿಕೆ ಕಾಣಸಿಗದು. ಇಂತಹ ಚಟುವಟಿಕೆ ಚಂದ್ರನಲ್ಲಿ ಕಂಪನಕ್ಕೆ ಕಾರಣವಾಗಿದೆ
- ನಿಕೊಲಸ್‌ ಸ್ಮೆರ್‌, ಮೆರಿಲ್ಯಾಂಡ್‌ ವಿಶ್ವವಿದ್ಯಾಲಯದ ಪ್ರೊಫೆಸರ್

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 7

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !