ಶುಕ್ರವಾರ, ಏಪ್ರಿಲ್ 23, 2021
22 °C
ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಶ್ವ ಅಮ್ಮಂದಿರ ದಿನಾಚರಣೆ

ಅಮ್ಮ ವರ್ಣಿಸಲಾಗದ ಅನುಭೂತಿ: ಸರೋಜಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಅಮ್ಮ ಎಂದರೇ ವರ್ಣಿಸಲಾಗದ ಅನುಭೂತಿ. ಪ್ರೀತಿ, ತ್ಯಾಗ, ಕರುಣೆ ಹಾಗೂ ವಾತ್ಸಲ್ಯದ ಪ್ರತಿರೂಪ. ಅಮ್ಮನ ಬಗೆಗಿನ ವರ್ಣನೆ ಅಕ್ಷರಕ್ಕೆ ನಿಲುಕದ್ದು’ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸರೋಜಿನಿ ಹೇಳಿದರು.

ನಗರದ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ‘ವಿಶ್ವ ಅಮ್ಮಂದಿರ ದಿನಾಚರಣೆ’ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ‘ತಾಯಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಬೇರೆ ಯಾವ ಸಂಬಂಧವು ಇಲ್ಲ. ಅದಕ್ಕೆಂದೇ ಉಪ್ಪಿಗಿಂತ ರುಚಿಯಿಲ್ಲ. ತಾಯಿಗಿಂತ ಬಂಧುವಿಲ್ಲ ಎಂದು ವರ್ಣಿಸಲಾಗಿದೆ. ಇದು ಅಕ್ಷರಶಃ ಸತ್ಯ, ತಾಯಿ ಭೂಮಿ ತೂಕದವಳು ಎಂಬುದು’ ಎಂದರು.

ವಿಜಯಪುರ ಜಿಲ್ಲಾ ಮಹಿಳಾ ಕೋ ಆಪರೇಟಿವ್‌ ಬ್ಯಾಂಕ್‌ನ ಅಧ್ಯಕ್ಷೆ ಮೀನಾಕ್ಷಿ ಕಲ್ಲೂರ ಮಾತನಾಡಿ, ‘ಸುಂದರ ಸಮಾಜ ನಿರ್ಮಾಣದಲ್ಲಿ ತಾಯಿಯ ಪಾತ್ರ ಬಹಳ ಮುಖ್ಯವಾದದ್ದು. ಇಂದು ತಂದೆ–ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ತರವಲ್ಲ’ ಎಂದರು.

ಉಪನ್ಯಾಸಕಿ ಚಂದ್ರಪ್ರಭಾ ಬಾಗಲಕೋಟ ಉಪನ್ಯಾಸ ನೀಡಿ, ‘ನಮ್ಮೆಲ್ಲರ ಜೀವನದಲ್ಲಿ ಅಮ್ಮನ ಪಾತ್ರ ಹಿರಿದಾಗಿದೆ. ಅಮ್ಮನೆಂದರೇ ನಮ್ಮ ಬದುಕಿನ ಬುನಾದಿ. ದೇವರು ಎಲ್ಲ ಕಡೆ ಇರಲಿಕ್ಕಾಗುವುದಿಲ್ಲ ಎನ್ನುವ ಕಾರಣದಿಂದ ತಾಯಿಯನ್ನು ಸೃಷ್ಟಿಸಿದ್ದಾನೆ. ಮೋಹನದಾಸ ಗಾಂಧಿ ಮಹಾತ್ಮರಾದದ್ದು, ನರೇಂದ್ರರನ್ನು ವಿವೇಕಾನಂದನನ್ನಾಗಿ ರೂಪಿಸಿದ್ದು, ಶಿವಾಜಿಯನ್ನು ಛತ್ರಪತಿಯನ್ನಾಗಿಸುವಲ್ಲಿ ಅವರವರ ತಾಯಿಯ ಪಾತ್ರ ಹಿರಿದಾಗಿದೆ’ ಎಂದರು.

ವಕೀಲೆ ಲಕ್ಷ್ಮೀ ದೇಸಾಯಿ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಎಸ್.ಎಸ್.ಖಾದ್ರಿ ಇನಾಮದಾರ, ಪ್ರೊ.ಬಸವರಾಜ ಕುಂಬಾರ, ಡಾ.ಕಾಂತು ಇಂಡಿ, ಎಸ್.ಎ.ಕಿಣಗಿ, ಯು.ಎನ್.ಕುಂಟೋಜಿ, ರವಿ ಕಿತ್ತೂರ, ಭರತೇಶ ಕಲಗೊಂಡ, ಉಮೇಶ ಕಲಗೊಂಡ, ಭಾರತಿ ಟಂಕಸಾಲಿ, ಸುನಂದಾ ಕೋರಿ, ಶಾಂತಾ ಜೋಗೆಣ್ಣವರ, ವಿಜಯಾ ಬಿರಾದಾರ, ಎಸ್.ವೈ.ನಡುವಿನಕೇರಿ, ದಾಕ್ಷಾಯಣಿ ಹುಡೇದ.

ಎಸ್.ಡಿ.ಮಾದನಶೆಟ್ಟಿ, ಪ್ರಭಾವತಿ ದೇಸಾಯಿ, ಜಿ.ಡಿ.ಕೊಟ್ನಾಳ, ವಿದ್ಯಾ ಕೋಟೆಣ್ಣವರ, ಸಿದ್ದು ಕೊಟ್ರೆ, ರಾಜಶೇಖರ ಉಮ್ರಾಣಿ, ಬಿ.ಆರ್.ಯಂಬತ್ನಾಳ, ಎಸ್.ಆರ್.ಪಾಟೀಲ, ಸುಭಾಸ ಯಾದವಾಡ, ಯುವರಾಜ ಚೊಳಕೆ, ಬಿ.ಎಸ್.ಸಜ್ಜನ, ಸಂಗಮೇಶ ಬದಾಮಿ, ಕೆ.ಎಫ್.ಅಂಕಲಗಿ, ವಿದ್ಯಾವತಿ ಅಂಕಲಗಿ, ಎಂ.ಎಂ.ತೆಲಗಿ, ಉಷಾದೇವಿ ಹಿರೇಮಠ, ಎಂ.ಆರ್.ಕಬಾಡೆ, ಎ.ಎಸ್.ಪೂಜಾರಿ, ಉದಯ ಹಿರೇಮಠ, ಪಾರ್ವತಿ ಜೋರಾಪುರ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು