ದಿನ ಭವಿಷ್ಯ: ಈ ರಾಶಿಯವರಿಗೆ ಪ್ರಭಾವಿತ ವ್ಯಕ್ತಿಗಳಿಂದ ಸಹಕಾರ ಸಿಗಲಿದೆ..
Published 23 ಫೆಬ್ರುವರಿ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸವಾಲನ್ನು ಎದುರಿಸುವ ಶಕ್ತಿ ಹಾಗೂ ಪರಿಸ್ಥಿತಿಗೆ ಹೊಂದಿಕೊಳ್ಳುವ ಸ್ವಭಾವವು ನಿಮ್ಮಲ್ಲಿದೆ. ಪ್ರಭಾವಿತ ವ್ಯಕ್ತಿಗಳಿಂದ ಸಹಕಾರ ಸಿಗಲಿದೆ. ಹೊಸ ಗೆಳೆತನ ಬೆಳೆಸಿಕೊಳ್ಳುವಿರಿ.
23 ಫೆಬ್ರುವರಿ 2026, 23:30 IST
ವೃಷಭ
ಜೀವವಿಜ್ಞಾನದ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಯಶೋದಾಯಕವಾಗಿರುತ್ತದೆ. ನಿರುದ್ಯೋಗಿಗಳು ಒಂದು ಸ್ಥಿರವಾದ ಉದ್ಯೋಗವನ್ನು ಪಡೆಯುವ ಸಾಧ್ಯತೆ ಇದೆ.
23 ಫೆಬ್ರುವರಿ 2026, 23:30 IST
ಮಿಥುನ
ಮನೆಯವರ ಸಹಾಯದಿಂದ ಹಣಕಾಸಿನ ತೊಂದರೆಗಳು ದೂರಾಗಿ ಹೊಸ ಯೋಜನೆಗೆ ಚಾಲನೆ ದೊರೆಯಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಚಟುವಟಿಕೆಯಿಂದ ಭಾಗವಹಿಸುವಿರಿ.
23 ಫೆಬ್ರುವರಿ 2026, 23:30 IST
ಕರ್ಕಾಟಕ
ಉದಾರ ಮನೋಭಾವ ವ್ಯವಹಾರದಲ್ಲಿ ನಷ್ಟ ಅಥವಾ ಸೋಲೆನಿಸಿದರೂ, ಮುಂದಿನ ದಿನಗಳಲ್ಲಿ ಅನುಕೂಲವನ್ನು ಒದಗಿಸಲಿದೆ. ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಬೇಕಾದ ಅಗತ್ಯವಿದೆ.
23 ಫೆಬ್ರುವರಿ 2026, 23:30 IST
ಸಿಂಹ
ಮೂತ್ರಕೋಶಕ್ಕೆ ಸಂಬಂಧಿಸಿದಂತೆ ಅನಾರೋಗ್ಯ ಕಂಡುಬಂದಲ್ಲಿ ನಿರ್ಲಕ್ಷಿಸುವುದು ಅಥವಾ ಮನೆಮದ್ದು ಮಾಡುವುದು ಸರಿಯಲ್ಲ. ನೂತನ ಯೋಜನೆ ಬಗ್ಗೆ ಚರ್ಚೆಗೆ ಸೂಕ್ತವಾಗಿರುತ್ತದೆ.
23 ಫೆಬ್ರುವರಿ 2026, 23:30 IST
ಕನ್ಯಾ
ಅಧಿಕಾರಿಗಳ ಮನಸ್ಸಿನ ಪರಿಸ್ಥಿತಿ ಅವಲೋಕಿಸಿಕೊಂಡು ಚರ್ಚಿಸುವ ಮುಂದಿನ ಹೆಜ್ಜೆ ಇರಿಸಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮನಸ್ಸಾಗುವುದು. ಬಡಗಿ ಕೆಲಸ ಮಾಡುವವರಿಗೆ ಸುಯೋಗದ ದಿನ.
23 ಫೆಬ್ರುವರಿ 2026, 23:30 IST
ತುಲಾ
ತಪ್ಪುಗಳನ್ನು ಸಮರ್ಥಿಸಿಕೊಳ್ಳುವಂಥ ಕೆಲಸದ ಬದಲು ತಪ್ಪನ್ನು ಸರಿಪಡಿಸಿಕೊಳ್ಳುವ ಬಗ್ಗೆ ಆಲೋಚನೆಗಳು, ದೈಹಿಕ ಶ್ರಮವಿರಲಿ. ಕಾರ್ಯ ಪ್ರವೃತ್ತರಾದಲ್ಲಿ ಅಭಿವೃದ್ಧಿ ಅನುಭವಕ್ಕೆ ಬರಲಿದೆ.
23 ಫೆಬ್ರುವರಿ 2026, 23:30 IST
ವೃಶ್ಚಿಕ
ಸಂಘ ಸಂಸ್ಥೆಗಳ ಸಭೆಗಳಲ್ಲಿ ಮಾತಿಗೆ ಬೆಲೆ ಇಲ್ಲದಂತೆ ಅಥವಾ ಮಾತನ್ನು ಅಪಾರ್ಥವಾಗಿ ಕಲ್ಪಿಸಿಕೊಂಡು ದೂಷಿಸುವಂತಹ ಘಟನೆಗಳು ಸಂಭವಿಸಬಹುದು. ಧಾರ್ಮಿಕ ನಾಯಕರಿಗೆ ಶುಭವಾಗುವುದು.
23 ಫೆಬ್ರುವರಿ 2026, 23:30 IST
ಧನು
ಲೇವಾದೇವಿ ವ್ಯವಹಾರದವರಿಗೆ ನಂಬಿಕೆದ್ರೋಹದಂಥ ಘಟನೆಗಳು ನಡೆಯಬಹುದು. ಗೃಹ ತಾಪತ್ರಯಗಳಿಂದಲೂ ಮುಕ್ತರಾಗಿ ನಿಶ್ಚಿಂತತೆ ತೋರಿ ಬರುತ್ತದೆ. ಆಫೀಸಿನ ಕೆಲಸಕ್ಕಾಗಿ ವಿದೇಶಯಾನ ಮಾಡಬೇಕಾಗಬಹುದು.
23 ಫೆಬ್ರುವರಿ 2026, 23:30 IST
ಮಕರ
ಲೋಪ ದೋಷಗಳನ್ನು ತಿದ್ದಿ ಕೊಳ್ಳುವಂತೆ ಹಿರಿಯರಿಂದ ಸೂಚನೆ, ಅವರ ಅನುಭವದ ಮಾತು ಒದಗಿಬರುವುದು. ಹರಾಜಿನಲ್ಲಿ ಆಸ್ತಿ ಖರೀದಿ ಎನ್ನುವ ರೀತಿಯಲ್ಲಿ ಸಂಪತ್ತು ಅಭಿವೃದ್ಧಿಯಾಗಲಿದೆ.
23 ಫೆಬ್ರುವರಿ 2026, 23:30 IST
ಕುಂಭ
ಪ್ರಗತಿಯನ್ನು ಎಲ್ಲೆಡೆಯೂ ಪ್ರಶಂಸಿಸುತ್ತಿರುವುದರಿಂದ ಕಾರ್ಯ ಕ್ಷೇತ್ರದಲ್ಲಿ ಹೊಸದೊಂದು ಹುಮ್ಮಸ್ಸು ಬರುವುದರ ಜೊತೆಗೆ ವೃತ್ತಿಪರ ಶತ್ರುಗಳ ಸಂಖ್ಯೆ ಹೆಚ್ಚಲಿದೆ. ಧನಾದಾಯದ ಮಾರ್ಗವು ಗೋಚರಿಸಲಿದೆ.
23 ಫೆಬ್ರುವರಿ 2026, 23:30 IST
ಮೀನ
ಹುಟ್ಟೂರಿನಲ್ಲಿ ಕೃಷಿ ಮಾಡುವ ಅಥವಾ ಕೃಷಿ ಭೂಮಿ ಖರೀದಿಸುವ ಆಲೋಚನೆ ನೆರವೇರುವುದು. ಮನೆಯಲ್ಲಿ ನಡೆದ ಅಹಿತಕರ ಘಟನೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯಕ್ಕೆ ಹಾನಿಯುಂಟಾಗಲಿದೆ.
23 ಫೆಬ್ರುವರಿ 2026, 23:30 IST