ಜಮ್ಮು ಮತ್ತು ಕಾಶ್ಮೀರದ ಕ್ರಿಕೆಟ್ ತಂಡ ಈ ಬಾರಿಯ ರಣಜಿ ಟ್ರೋಫಿ ಫೈನಲ್‌ಗೆ ಲಗ್ಗೆ ಇಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. 67 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಪ್ರಶಸ್ತಿ ಹಂತಕ್ಕೆ ತಲುಪಿದೆ. ಮಂಗಳವಾರದಿಂದ ಆರಂಭವಾಗಲಿರುವ ಫೈನಲ್‌ನಲ್ಲಿ ಅದು ಕರ್ನಾಟಕ ತಂಡವನ್ನು ಎದುರಿಸಲಿದೆ. ಭಯೋತ್ಪಾದನೆ, ನಿರಂತರವಾಗಿ ನಡೆಯುತ್ತಿದ್ದ ಹಿಂಸಾಚಾರಗಳು ಜಮ್ಮು ಕಾಶ್ಮೀರದಲ್ಲಿ ಕ್ರಿಕೆಟ್ ಸೇರಿದಂತೆ ಎಲ್ಲ ಕ್ರೀಡೆಗಳೂ ಹಿನ್ನಡೆ ಅನುಭವಿಸುವಂತೆ ಮಾಡಿದ್ದವು. ಒಂದೂವರೆ ದಶಕದಿಂದ ಅಲ್ಲಿನ ಕ್ರಿಕೆಟ್ ಚಿತ್ರಣ ಬದಲಾಗುತ್ತಾ ಬಂದಿದ್ದು, ಈ ವರ್ಷದ ರಣಜಿ ಟೂರ್ನಿಯಲ್ಲಿ ಅಲ್ಲಿನ ಕ್ರಿಕೆಟಿಗರ ಪ್ರದರ್ಶನ ಈ ಆಟಕ್ಕೆ ಹೊಸ ದಿಕ್ಕು ತೋರಿದೆ
ಅಬ್ದುಲ್ ಸಮದ್
ಬೇಡಿ ಪರ್ವ:
2011ರಲ್ಲಿ ಸ್ಪಿನ್ ದಿಗ್ಗಜ ಮತ್ತು ಭಾರತ ತಂಡದ ಮಾಜಿ ನಾಯಕ ಬಿಷನ್ ಸಿಂಗ್ ಬೇಡಿ ಅವರು ಜಮ್ಮು–ಕಾಶ್ಮೀರ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕವಾದರು. ಅವರ ಕಟ್ಟುನಿಟ್ಟಾದ ಕೋಚಿಂಗ್‌ನಲ್ಲಿ ಕಣಿವೆ ರಾಜ್ಯದ ಪ್ರತಿಭೆಗಳ ಆತ್ಮವಿಶ್ವಾಸ ಇಮ್ಮಡಿಯಾಯಿತು. ದೇಶಿ ಕ್ರಿಕೆಟ್‌ನ ದೊಡ್ಡ ತಂಡಗಳಿಗೂ ಸವಾಲೊಡ್ಡುವ ಸಾಮರ್ಥ್ಯ ಬೆಳೆಯಿತು.
ಬಿಷನ್ ಸಿಂಗ್ ಬೇಡಿ
ಇಯಾನ್ ದೇವ್ ಸಿಂಗ್
ಅಕೀಬ್ ಆಟದ ಬಲ:
ಈ ಸಲ ತಂಡವು ಫೈನಲ್ ತಲುಪಲು ಅಕೀಬ್ ನಬಿ ದಾರ್ ಅವರ ಪಾತ್ರ ದೊಡ್ಡದು. 29 ವರ್ಷದ ಈ ಬಲಗೈ ಮಧ್ಯಮವೇಗಿ ಈ ಋತುವಿನಲ್ಲಿ 59 ವಿಕೆಟ್‌ಗಳನ್ನು ಗಳಿಸಿದ್ದಾರೆ.