ಸ್ವಿಡ್ಜರ್ಲೆಂಡ್ ಪ್ರವಾಸಕ್ಕೆ ಹೋದವರು ಟೈಟ್ಲಿಸ್ ಹಿಮಪರ್ವತ ಮತ್ತು ‘ಟಾಪ್ ಆಫ್ ದ ಯೂರೋಪ್’ ಎಂದು ಕರೆಯುವ ಯೂಂಗ್ ಪ್ರೂಜೊಗೆ ಕಡ್ಡಾಯವಾಗಿ ಭೇಟಿ ನೀಡಿರುತ್ತಾರೆ. ಅಲ್ಲಿನ ಎತ್ತರದಲ್ಲಿರುವ ರೈಲು ಮಾರ್ಗದಲ್ಲಿ ಪ್ರಯಾಣಿಸಿ ರೋಚಕ ಅನುಭವ ಪಡೆಯುತ್ತಾರೆ. ಇತ್ತೀಚೆಗೆ ಬೇಸಿಗೆಯಲ್ಲಿ ಐರೋಪ್ಯ ರಾಷ್ಟ್ರಗಳ ಪ್ರವಾಸಕ್ಕೆ ಹೋಗಿದ್ದಾಗ, ಸ್ವಿಡ್ಜರ್ಲೆಂಡ್ನ ಈ ಎರಡು ತಾಣಗಳಿಗೆ ಭೇಟಿ ನೀಡಿದ್ದೆವು.

ಮೌಂಟ್ ಟೈಟ್ಲಿಸ್, ಹಿಮಚ್ಛಾದಿತ ಪರ್ವತ. ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿದೆ. ಈ ಪರ್ವತದ ಮೇಲೆ ನಿಂತು ಕೆಳಗೆ ನೋಡಿದರೆ ಸ್ವಿಸ್ ಪಟ್ಟಣ ಏಂಜಲ್ ಬರ್ಗ್ ಕಾಣುತ್ತದೆ. ಇಲ್ಲಿ ವರ್ಷ ಪೂರ್ತಿ ಪ್ರವಾಸಿಗರಿಗೆ ಚಾರಣ, ಸ್ಕೀಯಿಂಗ್, ಬಂಗಿ ಜಂಪ್ನಂತಹ ವೈವಿಧ್ಯಮಯ ಸಾಹಸ ಕ್ರೀಡೆಗಳು ನಡೆಯುತ್ತವೆ. ಅದಕ್ಕಾಗಿ ಬೇಸ್ ಕ್ಯಾಂಪ್ ಕೂಡ ಇರುತ್ತದೆ. ಹೀಗಾಗಿ ಇದು ಚಾರಣಿಗರಿಗೆ ಸ್ವರ್ಗಸದೃಶ ಜಾಗ.

ಕೇಬಲ್ ಕಾರ್ ಮೂಲಕ ಟೈಟ್ಲಿಸ್ ಪರ್ವತವನ್ನು ಪ್ರವೇಶಿಸಬಹುದು. ಕೇಬಲ್ ಕಾರ್ನಲ್ಲಿ ಕುಳಿತು ಇಳಿಜಾರಿನ ಹಸಿರು ಬೆಟ್ಟಗಳು, ಜತೆಗೆ ಹರಿಯುವ ಹಿಮನದಿಯನ್ನು ನೋಡುತ್ತಾ ಪರ್ವತದ ಮೇಲ್ಭಾಗಕ್ಕೆ ಸಾಗುವ ಪಯಣವೇ ರೋಮಾಂಚಕಾರಿ.

ಇಲ್ಲಿನ ರೊಟೈರ್ ಕೇಬಲ್ ಕಾರ್ (Rotair revolving cable car) ಜಗತ್ತಿನ ಮೊದಲ ವೃತ್ತಾಕಾರದ ಪಥದಲ್ಲಿ ಚಲಿಸುವ ಕೇಬಲ್ ಕಾರ್. ಈ ಕಾರ್ನಲ್ಲಿ ಕುಳಿತು ಆಳವಾದ ಕಂದರಗಳಿಂದ ಸುತ್ತುವರಿದ ಮೌಂಟ್ ಟೈಟ್ಲಿಸ್ ಪರ್ವತವನ್ನು ಸುತ್ತಿಬರಬಹುದು. ಈ ಕಾರ್ 360 ಡಿಗ್ರಿಯಲ್ಲಿ ತಿರುಗುತ್ತಾ, ಸುತ್ತಲಿನ ಅರಣ್ಯ ಪ್ರದೇಶ, ಮಂಜಿನ ದಿಬ್ಬಗಳನ್ನು ಸುತ್ತುತ್ತಾ ಪರ್ವತದ ಮೇಲಕ್ಕೆ ಕರೆದೊಯ್ಯತ್ತದೆ.

ಈ ಪರ್ವತದ ಮೇಲೆ ಮೊದಲು ನೋಡಬೇಕಾದದ್ದು ಐಸ್ಗ್ರೊಟ್ಟೊ (Ice Grotto) ಅಥವಾ ಮಂಜಿನಿಂದ ಸಿಂಗರಿಸಿದ ಕೃತಕ ಗುಹೆ. ಅದರೊಳಗೆ 5 ಡಿಗ್ರಿ ಸೆಲ್ಷಿಯಸ್ ತಾಪಮಾನವಿರುತ್ತದೆ. ಈ ಗುಹೆಯಲ್ಲಿ ಒಂದು ಸುತ್ತು ಹಾಕಿದರೆ ಉತ್ತರ ಧೃವದಲ್ಲಿರುವಂತೆ (ನಾರ್ತ್ ಪೋಲ್) ಭಾಸವಾಗುತ್ತದೆ. ಕೈಗೆ ಗ್ಲೌಸ್ ಧರಿಸಿ, ಅಡಿಯಿಂದ ಮುಡಿಯವರೆಗೆ, ಬೆಚ್ಚಗಿನ ಪೋಷಾಕಿನಲ್ಲಿ ಮಂಜುಗಡ್ಡೆಯನ್ನು ತುಳಿಯುತ್ತಾ ವಿಹರಿಸುವುದೇ ಒಂದು ಅಪೂರ್ವ ಅನುಭವ. ಮಂಜುಗಡ್ಡೆಗಳ ಬೆಳಕು ಕಣ್ಣಿಗೆ ರಾಚುವುದರಿಂದ, ಮುಂಜಾಗ್ರತಾ ಕ್ರಮವಾಗಿ ಮಾರ್ಗದರ್ಶಕರು ತಂಪುಗಾಜಿನ ಕನ್ನಡಕ ಕೊಡುತ್ತಾರೆ. ನಾನು ಗುಹೆಯಲ್ಲಿ ಸುತ್ತಾಡುತ್ತಲೇ, ದಪ್ಪ ಮಂಜುಗಡ್ಡೆಯನ್ನು ಕೈಯಲ್ಲಿ ಮುಟ್ಟಿ ನೋಡಿದೆ. ಆ ಗೆಡ್ಡೆಯ ಸ್ವರ್ಶವೇ ರೋಮಾಂಚನ ಅನುಭವ ನೀಡಿತು. ಜತೆಗೆ, ಮಂಜಿನ ಇಳಿಜಾರಿನಲ್ಲಿ ಜಾರುವುದಂತೂ ಒಂದು ರೋಮಾಂಚಕ ಅನುಭವ.

ಪರ್ವತದ ಮೇಲ್ಭಾಗದಲ್ಲಿ ಗ್ಲೇಸಿಯರ್ ಸ್ಟೇಷನ್ (ಹಿಮ ನದಿಯ ನಿಲ್ದಾಣ)ಇದೆ. ಒಂದು ಭಾಗದಲ್ಲಿ ಹಸಿರು ತಾಣವಿದೆ(ಹುಲ್ಲು ಬೆಳೆದಿರುವ ಜಾಗ). ಅಲ್ಲಿ ದನಕರುಗಳು ಮೇಯುತ್ತಿರುತ್ತವೆ. ಅವುಗಳ ಕೊರಳಲ್ಲಿ ಕಟ್ಟಿದ ಗಂಟೆ ವಿಶಿಷ್ಟ ನಾದ ಹೊರಡಿಸುತ್ತದೆ. ಈ ಗಂಟೆ ಆ ದೇಶದ ಲಾಂಛನ. ವಿವಿಧ ಆಕಾರಗಳಲ್ಲಿರುವ ಆ ಗಂಟೆಗಳನ್ನು ಪ್ರವಾಸಿಗರು ನೆನಪಿಗಾಗಿ ಕೊಂಡೊಯ್ಯುತ್ತಾರೆ.

ಸ್ವಿಡ್ಜರ್ಲೆಂಡ್ ಪ್ರವಾಸದ ಬಹುಮುಖ್ಯವಾದ ತಾಣ ಎಂದರೆ, ಯೂರೋಪಿನ ಅತ್ಯಂತ ಎತ್ತರದ ಪ್ರದೇಶ (Top of Europe) ಜುಂಗ್ ಪ್ರುಜೊ. ಇಲ್ಲಿನ ರೈಲ್ವೆ ನಿಲ್ದಾಣ ಕೂಡ, ಜಗತ್ತಿನ ಅತಿ ಎತ್ತರದ (3454 ಮೀಟರ್) ರೈಲು ನಿಲ್ದಾಣವಾಗಿದೆ. ಈ ತಾಣಕ್ಕೆ ಭೇಟಿ ನೀಡಿ, ರೈಲಿನಲ್ಲಿ ಸುತ್ತಾಡುತ್ತಾ ಹಿಮನದಿಯ ಜಲಪಾತವೊಂದನ್ನು ನೋಡಿ ದೆವು. ಇದೇ ಸ್ಥಳದಲ್ಲಿರುವ ಹಿಮದ ಅರಮನೆಯಲ್ಲಿ ಮಂಜಿನಲ್ಲಿ ಕೆತ್ತಿರುವ ವಿಗ್ರಹಗಳನ್ನು ನೋಡಿದೆವು.

ಈ ಮಂಜಿನ ತಾಣಗಳಲ್ಲಿ ಸುತ್ತಾಡುವಾಗ ಕೆಲವರಿಗೆ ಒಮ್ಮೊಮ್ಮೆ ಉಸಿರು ಕಟ್ಟುವಂತಾಗಬಹುದು. ಅಂಥವರಿಗೆ ಆಘ್ರಾಣಿಸಲು (ವಾಸನೆ ನೋಡಲು) ಕರ್ಪೂರವನ್ನು ಕೊಡುತ್ತಾರೆ. ಸಮೀಪದಲ್ಲೇ ಒಂದು ಭಾರತೀಯ ಹೋಟೆಲ್ ಇದೆ. ಅಲ್ಲಿ ಬಿಸಿ ಬಿಸಿ ಮಸಾಲೆ ಚಹಾ ಸಿಗುತ್ತದೆ. ಆ ಚಳಿಗೆ ಚಹಾ ಹಿತಕರವಾಗಿರುತ್ತದೆ.

ಜಿನೀವಾ – ಲುಸರ್ನ್ಗೆ ಭೇಟಿ

ಪರ್ವತಗಳ ಸಾಲನ್ನು ವೀಕ್ಷಿಸಿದ ನಂತರ ಸ್ವಿಡ್ಜರ್ಲೆಂಡ್ ರಾಜಧಾನಿ ಜಿನೀವಾ ಮತ್ತು ಲುಸರ್ನ್ ನಗರಗಳತ್ತ ಹೊರಟೆವು. ಜಿನೀವಾದ ಹೃದಯ ಭಾಗದಲ್ಲಿ ಸುಮಾರು 32 ಚದರ ಕಿ.ಮೀನಷ್ಟು ವಿಸ್ತಾರವಾದ ಸರೋವರವಿದೆ. ಜಿನೀವಾ ಮತ್ತು ಲುಸರ್ನ್ ಎರಡೂ ನಗರಗಳಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ನೀರೋ ನೀರು !

ಈ ನಗರದಲ್ಲಿ ಐಷಾರಾಮಿ ಹೋಟೆಲ್ಗಳಿವೆ. ಇಪ್ಪತ್ತು ಅಂತರರಾಷ್ಟ್ರೀಯ ರಾಯಭಾರ ಚಟುವಟಿಕೆವುಳ್ಳ ಸಂಸ್ಥೆಗಳಿವೆ. ಇಲ್ಲಿ ವಿಶ್ವಸಂಸ್ಥೆಯ ಮುಖ್ಯ ಕಚೇರಿಯೇ ಇದೆ. ಆ ಕಟ್ಟಡವೇ ಕಾಣದಷ್ಟು ದಟ್ಟವಾದ ಮರಗಳಿಂದ ಆವೃತವಾಗಿದೆ. ಅದರ ಒಂದು ಮೂಲೆಯಲ್ಲಿ ಮಹಾತ್ಮಾ ಗಾಂಧೀಜಿಯವರ ವಿಗ್ರಹ ಸ್ಥಾಪಿಸಲಾಗಿದೆ. ಇಲ್ಲಿ ಜಗತ್ತಿನ ಅತ್ಯಂತ ಎತ್ತರವಾದ ಕಾರಂಜಿ ಇದೆ. ಹೂವುಗಳ ವಿನ್ಯಾಸದ ಗಡಿಯಾರ ಮತ್ತೊಂದು ಆಕರ್ಷಣೆ.

ಲುಸರ್ನ್ ಮತ್ತೊಂದು ಸುಂದರ ನಗರ. ಇಲ್ಲಿನ ರಾಯಸ್ ನದಿಯ ಮೇಲೆ ಕಪ್ಪಲ್ ಬ್ರೂಕ್ ಎಂಬ ಮರದ ಸೇತುವೆ ಇದೆ. 1333ರಲ್ಲಿ ನಿರ್ಮಿಸಲಾದ ಈ ಸೇತುವೆ, ಜಗತ್ತಿನ ಅತ್ಯಂತ ಹಳೆಯದಾದ ಸೇತುವೆಗಳಲ್ಲಿ ಒಂದು. ಇದರ ಚಾವಣಿಯ ಕೆಳಗೆ ಕಲಾತ್ಮಕ ಚಿತ್ರಗಳನ್ನು ತೂಗುಹಾಕಲಾಗಿದೆ. ಇದು ವಾಯುವಿಹಾರಕ್ಕೆ ಯೋಗ್ಯವಾಗಿದೆ.

ಈ ನಗರದ ಮತ್ತೊಂದು ಪ್ರಮುಖ ಆಕರ್ಷಣೆ ಸಿಂಹ ಸ್ಮಾರಕ. ಇದು 1792ರಲ್ಲಿ ಫ್ರೆಂಚ್ ಕ್ರಾಂತಿಯ ಸಂದರ್ಭ ದಲ್ಲಿ ಹುತಾತ್ಮರಾದ ಸ್ವಿಡ್ಜರ್ಲೆಂಡ್ನ ಕಾವಲು ಗಾರರ ನೆನಪಿನಲ್ಲಿ ನಿರ್ಮಿಸಲಾದ ಸ್ಮಾರಕ. ಇದರಲ್ಲಿರುವ ಸಿಂಹದ ಕೆತ್ತನೆ ‘ಇಡೀ ಜಗತ್ತಿನಲ್ಲೇ ಅತ್ಯಂತ ಶೋಕಮಯ ಹಾಗೂ ಪರಿಣಾಮಕಾರಿಯಾದ ಕೆತ್ತನೆ’ ಎಂದು ಖ್ಯಾತ ಲೇಖಕ ಮಾರ್ಕ್ಟೈನ್ ಪ್ರಶಂಸಿಸಿದ್ದಾನೆ.

ಇಲ್ಲಿರುವ ಸರೋವರದಲ್ಲಿ ದೋಣಿ ವಿಹಾರ ವಿಹಾರ ಮಾಡುತ್ತಾ ಸ್ವಿಸ್ ಜನಪದ ಗಾಯಕರ ಗಾಯನ ಆಲಿಸುತ್ತಾ ನೃತ್ಯವನ್ನೂ ನೋಡಬಹುದು.

ಲುಸರ್ನ್, ಚಾಕೋಲೆಟ್ಗಳ ತವರೂರು. ಇಲ್ಲಿನ ಚಾಕೋಲೆಟ್ ಫ್ಯಾಕ್ಟರಿಗೆ ಭೇಟಿ ನೀಡಿ, ಅದರ ತಯಾರಿಕೆಯ ಪ್ರಾತ್ಯಕ್ಷಿಕೆ ನೋಡಬಹುದು. ಅಲ್ಲಿ ಬಗೆ ಬಗೆಯ ಚಾಕೋಲೆಟ್ಗಳನ್ನು ರುಚಿ ನೋಡಲು ಕೊಡುತ್ತಾರೆ. ಅಲ್ಲಿಯ ತಂಪು ಹವಾಮಾನ ಚಾಕೋಲೆಟ್ ಉದ್ಯಮಕ್ಕೆ ಸಹಕಾರಿಯಾಗಿದೆ. ಇದನ್ನು ಕೇಳಿದಾಗ ನಮ್ಮ ದೇಶದ ಕೊಡೈಕೆನಾಲ್ನಲ್ಲಿಯೂ ಚಾಕೋಲೆಟ್ ಗೃಹ ಕೈಗಾರಿಕೆ ನೆನಪಿಗೆ ಬಂತು. ಇಂತಹ ಅನಂತ ತಂಪು ಹವೆಯ ಸ್ವಿಟ್ಜರ್ಲೆಂಡ್ಗೆ ವಿದಾಯ ಹೇಳುವಾಗ ಮೈ ಮನ ಭಾರವಾದ ಅನುಭವ ಉಂಟಾಗುತ್ತದೆ.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.