ಮಂಗಳವಾರ, ಮೇ 18, 2021
22 °C

ಮಂಗಳನಲ್ಲಿ ಸಾಗರ: ಮತ್ತಷ್ಟು ಸಾಕ್ಷ್ಯ ಲಭ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಮಂಗಳ ಗ್ರಹದ ಅಧ್ಯಯನಕ್ಕೆ ನಾಸಾ ಉಡಾಯಿಸಿದ್ದ ಮೊದಲ ರೋವರ್‌ ದಶಕಗಳ ಹಿಂದೆಯೇ ಕೆಂಪುಗ್ರಹದಲ್ಲಿನ ಸಾಗರ ತೀರದ ಚಿತ್ರಗಳನ್ನು ಸೆರೆ ಹಿಡಿದಿದ್ದು, ಅದನ್ನು ಭೂಮಿಗೆ ರವಾನಿಸಿದೆ. ಮಂಗಳ ಗ್ರಹವೂ ಜೀವಿಗಳಿಗೆ ವಾಸಯೋಗ್ಯವಾಗಿದೆ ಎಂಬುದಕ್ಕೆ ಈ ಚಿತ್ರಗಳು ಮತ್ತಷ್ಟು ಪುರಾವೆ ಒದಗಿಸಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಮಂಗಳ ಗ್ರಹದಲ್ಲಿನ ಈ ಮಾರ್ಟಿಯನ್‌ ಸಾಗರ ಪ್ರಾಚೀನ ಸಮುದ್ರವಾಗಿತ್ತು ಮತ್ತು ಸುಮಾರು ಐವತ್ತು ವರ್ಷಗಳ ಹಿಂದೆ ಈ ಸಾಗರ ಹೇಗಿತ್ತು ಎಂಬುದನ್ನು ಈ ಚಿತ್ರಗಳಿಂದ ಅಂದಾಜಿಸಬಹುದು.  1997ರಲ್ಲಿ ನಾಸಾ ಉಡಾಯಿಸಿದ ಮೊದಲ ರೋವರ್‌ ‘ದಿ ಸೋಜರ್ನರ್‌’ ಈ ಚಿತ್ರಗಳನ್ನು ಸೆರೆಹಿಡಿದಿದೆ. ಅಂದಾಜು 300 ವರ್ಷಗಳ ಹಿಂದೆ, ದೊಡ್ಡ ಪ್ರವಾಹದ ನಂತರ ಈ ಸಾಗರ ಸೃಷ್ಟಿಯಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. 

‘ಸಾಗರ ತೀರ ಪ್ರದೇಶದಲ್ಲಿ ಕಾಣಿಸಿರುವ ಕೆಸರು ಅಥವಾ ಕಲ್ಲಿನ ತುಣಕುಗಳಿಂದ ಈ ಪ್ರದೇಶ ದೊಡ್ಡ ಪ್ರಕೃತಿ ವಿಕೋಪಕ್ಕೆ ತುತ್ತಾಗಿತ್ತು, ನಂತರ ಇಲ್ಲಿ ಸಾಗರ ರಚನೆಯಾಗಿದೆ ಎಂಬುದು ತಿಳಿದುಬರುತ್ತದೆ’ ಎಂದು ವಿಜ್ಞಾನಿ ಅಲೆಕ್ಸಿಸ್‌ ರೋಡ್ರಿಗಸ್‌ ಹೇಳುತ್ತಾರೆ. 

‘ನಾಸಾದ ಬಾಹ್ಯಾಕಾಶ ನೌಕೆಯಿಂದ ಸುಮಾರು 250 ಕಿ.ಮೀ. ದೂರದಲ್ಲಿ ಈ ಸಾಗರ ತೀರಪ್ರದೇಶವಿದೆ. ನೌಕೆ ನೆಲೆ ನಿಂತಿರುವ ಭೂಪ್ರದೇಶದವು ಒಳನಾಡು ಸಾಗರ ಮತ್ತು ಉತ್ತರ ಮಹಾಸಾಗರವನ್ನು ಬೇರ್ಪಡಿಸಿದೆ’ ಎಂದು ತಿಳಿಸಿದ್ದಾರೆ. 

ಮಂಗಳ ಗ್ರಹದ ಅಧ್ಯಯನಕ್ಕಾಗಿಯೇ ನಾಸಾ ಈವರೆಗೆ 280 ಮಿಲಿಯನ್‌ ಡಾಲರ್‌ (₹1960 ಕೋಟಿ) ವೆಚ್ಚ ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು