ಭಾನುವಾರ, ಮಾರ್ಚ್ 26, 2023
31 °C

‘ಬದುಕಿ ಬದುಕಲು ಬಿಡಿ: ತಮಿಳುನಾಡಿಗೆ ಸ್ವಲ್ಪವಾದರೂ ಕಾವೇರಿ ನೀರು ಬಿಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬದುಕಿ ಬದುಕಲು ಬಿಡಿ: ತಮಿಳುನಾಡಿಗೆ ಸ್ವಲ್ಪವಾದರೂ ಕಾವೇರಿ ನೀರು ಬಿಡಿ’

ನವದೆಹಲಿ (ಏಜೆನ್ಸೀಸ್‌): ತಮಿಳುನಾಡಿಗೆ ಸ್ವಲ್ಪ ಪ್ರಮಾಣದಲ್ಲಾದರೂ ಕಾವೇರಿ ನೀರು ಬಿಡಲು ಪ್ರಯತ್ನಿಸುವಂತೆ ಕರ್ನಾಟಕಕ್ಕೆ ಸೂಚಿಸಿರುವ ಸುಪ್ರೀಂಕೋರ್ಟ್‌ ‘ಬದುಕಿ ಬದುಕಲು ಬಿಡಿ’ ಎಂದು ಹೇಳಿದೆ.

ತಮಿಳುನಾಡಿಗೆ ಎಷ್ಟು ಪ್ರಮಾಣದಲ್ಲಿ ನೀರುವ ಬಿಡಲು ಸಾಧ್ಯ ಎಂಬುದನ್ನು ಸೋಮವಾರ ತಿಳಿಸುವಂತೆ ಸುಪ್ರೀಂಕೋರ್ಟ್‌ ಕರ್ನಾಟಕಕ್ಕೆ ಸೂಚಿಸಿದೆ.

‘ನೀರಿನ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳು ಸಾಮರಸ್ಯ ಕಾಪಾಡಿಕೊಳ್ಳಬೇಕು’ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

‘ಕರ್ನಾಟಕ ನೀರು ಬಿಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಲ್ಲಿರಬಹುದು. ಆದರೆ, ತಮಿಳುನಾಡಿನ ಜನರೂ ಬದುಕಬೇಕು. ಹೀಗಾಗಿ ಸ್ವಲ್ಪ ಪ್ರಮಾಣದ ನೀರು ಹಂಚಿಕೊಳ್ಳಲು ಕರ್ನಾಟಕ ಮುಂದಾಗಬೇಕು’ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.