ಸೊಂಟ ಬಳಕುವ ಬಳ್ಳಿಯಂತಿರಬೇಕು ಎಂಬುದು ಮಹಿಳೆಯರ ಆಸೆ. ಆದರೆ ಅದಕ್ಕಾಗಿ ಕಸರತ್ತು ನಡೆಸುವವರು ಕಡಿಮೆ. ಕೇವಲ ಹದಿನೈದು ಇಂಚಿನ ಸೊಂಟ ಹೊಂದಿರುವ ಅಮೆರಿಕದ ಈ ಮಹಿಳೆಯ ಹೆಸರು ಕಾಥಿ. ಮೂರು ಮಕ್ಕಳ ತಾಯಿಯಾದ ಇವರ ಸೊಂಟ ಕಂಡರೆ ಎಂಥವರು ಆಶ್ಚರ್ಯಗೊಳ್ಳುತ್ತಾರೆ.
ಈ ರೀತಿಯ ಸೊಂಟ ಪಡೆಯಲು ಕಳೆದ ಇಪ್ಪತ್ತೈದು ವರ್ಷಗಳ ಶ್ರಮವಿದೆ. ದಿನಪೂರ್ತಿ ಕಾಥಿ ಬಿಗಿಯಾದ ‘ಕೊರ್ಸೆಟ್’ ಉಡುಪನ್ನು ಧರಿಸುತ್ತಾರೆ. ಸ್ನಾನ ಮಾಡುವಾಗ ಮತ್ತು ಅಸಹನೀಯವಾದ ಬಿಸಿಲು ಇದ್ದಾಗ ಮಾತ್ರವೇ ಈ ‘ಕೊರ್ಸೆಟ್’ ಉಡುಪಿಗೆ ಬಿಡುಗಡೆ. ಇವರ ಬಳಿ ನೂರು ‘ಕೊರ್ಸೆಟ್’ ಬಟ್ಟೆಯಿದೆ.
ಇವರು ಮೊದಲ ಬಾರಿಗೆ ಈ ಬಟ್ಟೆಯನ್ನು ತೊಟ್ಟಿದ್ದು ಇವರ ಮದುವೆಯಲ್ಲಿ. ಅಂದಿನಿಂದ ಈ ಬಟ್ಟೆಯ ಮೇಲೆ ಇವರಿಗೆ ಮೋಹ ಉಂಟಾಗಿದೆ. ಒಮ್ಮೆ ಸಿನಿಮಾ ನೋಡುವಾಗ ಅದರ ನಟಿಯ ಸೊಂಟಕ್ಕೆ ಮಾರುಹೋದ ಇವರಿಗೆ ಅಂಥದ್ದೇ ಸೊಂಟ ಪಡೆಯುವ ಆಸೆಯಾಗಿದೆ. ಈ ಆಸೆಯನ್ನು ಪತಿಯ ಬಳಿ ಹೇಳಿಕೊಂಡಿದ್ದಾರೆ. ವೃತ್ತಿಯಲ್ಲಿ ವೈದ್ಯರಾದ ಇವರ ಪತಿ ಪತ್ನಿಯ ಆಸೆಗೆ ನೆರವಾಗಿದ್ದಾರೆ.