ಗುರುವಾರ , ಮೇ 6, 2021
25 °C
ಕುಂದು ಕೊರತೆ

ಶೌಚಾಲಯ ಸೋರುತಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರಕಾರದ ವಿವಿಧ ಇಲಾಖೆಗಳು ಲೋಕಾಯುಕ್ತ ನ್ಯಾಯಾಲಯ, ಮೇಲ್ಮನವಿಯ ಪ್ರಾಧಿಕಾರಗಳು ಇರುವ  ಏಳು ಮಹಡಿಗಳನ್ನು ಹೊಂದಿರುವ ಬಹುಮಹಡಿ ಕಟ್ಟಡದಲ್ಲಿರುವ  ಶೌಚಾಲಯಗಳು ಸೋರುತ್ತಿವೆ.ಕಟ್ಟಡದ ಎರಡನೆಯ ದ್ವಾರದ ನೆಲಮಹಡಿಯಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಶೌಚಾಲಯಗಳ ಚಾವಣಿಯಿಂದ ನೀರು ತೊಟ್ಟಿಕ್ಕುವುದು ಸಾಮಾನ್ಯ ಎನಿಸಿದೆ. ಕಟ್ಟಡದಲ್ಲಿ ಒಟ್ಟು ಆರು ಅಂತಸ್ತುಗಳ ಶೌಚಾಲಯಗಳಿವೆ. ಸಾರ್ವಜನಿಕರಿಗೆ ಆಗುತ್ತಿರುವ ಕೊಳಕು ನೀರಿನ ಸಿಂಚನವನ್ನು ತಪ್ಪಿಸಬೇಕು. ಲೋಕೋಪಯೋಗಿ ಇಲಾಖೆಯ ಕಟ್ಟಡ ವಿಭಾಗದ ಎಂಜಿನಿಯರ್‌ಗಳ ತಂಡ ಶೀಘ್ರ ಇತ್ತ ಗಮನ ಹರಿಸಬೇಕು ಎಂದು ಕೋರುತ್ತೇನೆ.

  -ಎಚ್.ಪಿ.ಬಸವರಾಜ್  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.