ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸೆಯೊಂದೇ ಪರಿಹಾರವಲ್ಲ: ಮೋದಿ

ಪರಸ್ಪರ ಮಾತುಕತೆ ಮೂಲಕ ಪರಿಹಾರಕ್ಕೆ ಸಲಹೆ
Last Updated 13 ಸೆಪ್ಟೆಂಬರ್ 2016, 8:12 IST
ಅಕ್ಷರ ಗಾತ್ರ

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಷಯ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹಿಂಸಾ ರೂಪಕ್ಕೆ ತಿರುಗಿರುವುದು ದುಃಖದ ಸಂಗತಿ. ಈ ಬೆಳವಣಿಗೆ ನನಗೆ ವೈಯಕ್ತಿಕವಾಗಿ ನೋವನ್ನು ಉಂಟು ಮಾಡಿವೆ ಎನ್ನುವ ಮೂಲಕ ಕಾವೇರಿ ವಿಚಾರವಾಗಿ ಮೌನ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಹಿಂಸಾಚಾರ ಸಮಸ್ಯೆಗೆ ಪರಿಹಾರ ಆಗಲಾರದು. ಪ್ರಜಾಪ್ರಭುತ್ವದಲ್ಲಿ ಸಂಯಮ ಮತ್ತು ಪರಸ್ಪರ ಮಾತುಕತೆ ಮೂಲಕ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದಿದ್ದಾರೆ.

ಈ ವಿವಾದವನ್ನು ಕಾನೂನು ವ್ಯಾಪ್ತಿಯೊಳಗೆ ಪರಿಹರಿಸಬಹುದು. ಕಾನೂನು ಉಲ್ಲಂಘನೆಯೊಂದೇ ಅನುಕೂಲಕರ ಪರ್ಯಾಯ ಮಾರ್ಗ ಅಲ್ಲ ಎಂದು ಮೋದಿ ಹೇಳಿದ್ದಾರೆ.

ಎರಡು ರಾಜ್ಯಗಳ ಜನರು ಸಂಯಮ ಪ್ರದರ್ಶಿಸಬೇಕು ಎಂದು ನಾನು ಹೇಳ ಬಯಸುತ್ತೇನೆ ಮತ್ತು ನಾಗರಿಕರು ಜವಾಬ್ದಾರಿಗಳನ್ನು ಅರಿತು ನಡೆಯಬೇಕು. ಶಾಂತಿ ಕಾಪಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಸಂಯಮ, ಸಾಮರಸ್ಯವನ್ನು ಬಿಟ್ಟು ಪರಿಹಾರ ಹುಡುಕುವ ಅನ್ಯ ಮಾರ್ಗ ಹಿಡಿದರೆ ಅವು, ಹಿಂಸೆ, ವಿನಾಶ ಮತ್ತು ಅಗ್ನಿ ಸ್ಪರ್ಶದಂತಹ ಕೃತ್ಯಕ್ಕೆ ಎಡೆ ಮಾಡುತ್ತವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT