ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್ ಖರೀದಿಗೆ ಭಾರತ ಸಹಿ

ಫ್ರಾನ್ಸ್‌ ಜತೆ ₹59 ಸಾವಿರ ಕೋಟಿ ಒಪ್ಪಂದ
Last Updated 23 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಫೇಲ್ ಯುದ್ಧ ವಿಮಾನಗಳ ಖರೀದಿಗೆ ₹ 59 ಸಾವಿರ ಕೋಟಿ ಮೊತ್ತದ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್‌ ಶುಕ್ರವಾರ ಸಹಿ ಮಾಡಿದವು.

ಅತ್ಯಾಧುನಿಕ ಕ್ಷಿಪಣಿ ಹಾಗೂ ಶಸ್ತ್ರಾಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಇರುವ ಈ ಯುದ್ಧ ವಿಮಾನ, ಭಾರತೀಯ ವಾಯುಪಡೆಗೆ ಪಾಕಿಸ್ತಾನಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ನೀಡಲಿದೆ ಎನ್ನಲಾಗಿದೆ. ಭಾರತದ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ಫ್ರಾನ್ಸ್‌ನ ರಕ್ಷಣಾ ಸಚಿವ ಜೀನ್ ಯವೆಸ್‌ ಲೆ ಡ್ರಿಯಾನ್ ಅವರ ಸಮ್ಮುಖದಲ್ಲಿ ಈ ಒಪ್ಪಂದ ನಡೆದಿದೆ.

16 ತಿಂಗಳ ಹಿಂದೆ ಫ್ರಾನ್ಸ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಾಗುವುದು ಎಂದು ಘೋಷಿಸಿದ್ದರು.

ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲೇ ಈ ಯುದ್ಧ ವಿಮಾನ ಖರೀದಿಗೆ ಮಾತುಕತೆ ನಡೆದಿತ್ತು. ಆದರೆ ಮೋದಿ ಸರ್ಕಾರ ಅದನ್ನು ರದ್ದು ಮಾಡಿತ್ತು. ಈಗ ಮಾಡಿಕೊಂಡಿರುವ ಒಪ್ಪಂದದಿಂದಾಗಿ ಭಾರತಕ್ಕೆ ಹಿಂದಿನ ಒಪ್ಪಂದಕ್ಕಿಂತ ಅಂದಾಜು ₹ 5,600 ಕೋಟಿ ಉಳಿತಾಯ ಆಗಲಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಭಾರತೀಯ ವಾಯುಸೇನೆ ಬಳಿ ಇಲ್ಲದ ಅತ್ಯಾಧುನಿಕ ಸ್ಕಾಪ್‌, 150 ಕಿ.ಮೀ.ಗಿಂತ ಹೆಚ್ಚಿನ ವ್ಯಾಪ್ತಿ ಹೊಂದಿರುವ ಮಿಟಿಯೋರ್ ಕ್ಷಿಪಣಿಗಳು ಈ ಯುದ್ಧ ವಿಮಾನದಲ್ಲಿ ಇರಲಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT