ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಸ್ವರೂಪ್‌ ಭಟ್ನಾಗರ್‌ ಪ್ರಶಸ್ತಿ ಪ್ರಕಟ

Last Updated 26 ಸೆಪ್ಟೆಂಬರ್ 2016, 18:37 IST
ಅಕ್ಷರ ಗಾತ್ರ

ನವದೆಹಲಿ: ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಗಣನೀಯ ಸಾಧನೆಗೆ ನೀಡಲಾಗುವ ಪ್ರತಿಷ್ಠಿತ ಶಾಂತಿಸ್ವರೂಪ್‌ ಭಟ್ನಾಗರ್‌ ಪ್ರಶಸ್ತಿಯನ್ನು ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವಾಲಯ ಸೋಮವಾರ ಪ್ರಕಟಿಸಿದೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ರಿಷಿಕೇಶ್‌ ನಾರಾಯಣನ್‌ ಹಾಗೂ ಕೋಲ್ಕತ್ತದ ಸಿಎಸ್‌ಐಆರ್‌ ಭಾರತೀಯ ರಾಸಾಯನಿಕ ಜೀವವಿಜ್ಞಾನ ಸಂಸ್ಥೆಯ (ಐಐಸಿಬಿ) ಸುರೇಂದ್ರನಾಥ್‌ ಭಟ್ಟಾ ಚಾರ್ಯ ಅವರಿಗೆ ಜೈವಿಕ ವಿಜ್ಞಾನ ವಿಭಾಗದ ಪ್ರಶಸ್ತಿ ಪ್ರಕಟಿಸಲಾಗಿದೆ.

ರಾಸಾಯನಿಕ ವಿಜ್ಞಾನಗಳ ಕ್ಷೇತ್ರದಲ್ಲಿ ಪಾರ್ಥಸಾರಥಿ ಮುಖರ್ಜಿ ಪ್ರಶಸ್ತಿ ಪಡೆದಿದ್ದರೆ, ಭೂಮಿ, ವಾಯುಮಂಡಲ, ಸಾಗರ ಹಾಗೂ ಗ್ರಹ ವಿಜ್ಞಾನ ಕ್ಷೇತ್ರದಲ್ಲಿ ಸುನಿಲ್‌ ಕುಮಾರ್‌ ಸಿಂಗ್‌ ಅವರು ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.

ಎಂಜಿನಿಯರಿಂಗ್‌ ವಿಜ್ಞಾನ ವಿಭಾಗದಲ್ಲಿ ಐಐಟಿ ಕಾನ್ಪುರದ ಅವಿನಾಶ್‌ ಕುಮಾರ್‌ ಅಗರ್‌ವಾಲ್‌, ಮೈಕ್ರೋಸಾಫ್ಟ್‌ ರೀಸರ್ಚ್‌ ಇಂಡಿಯಾ ವಿಭಾಗದ ವೆಂಕಟ ನಾರಾಯಣ ಪದ್ಮನಾಭನ್‌ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಮುಂಬೈ ಮೂಲದ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರೀಸರ್ಚ್‌ನ (ಟಿಐಎಫ್‌ಆರ್‌) ಅಮ ಲೇಂದು ಕೃಷ್ಣ ಹಾಗೂ ಐಐಟಿ ದೆಹಲಿಯ ನವೀನ್‌ ಗರ್ಗ್‌ ಅವರನ್ನು ಗಣಿತ ವಿಜ್ಞಾನ ವಿಭಾಗದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವೈದ್ಯಕೀಯ ವಿಭಾಗದಲ್ಲಿ ನಿಯಾಸ್‌ ಅಹಮ್ಮದ್‌ ಎ.ಎಸ್‌. ಪ್ರಶಸ್ತಿ ಪಡೆದಿದ್ದರೆ,  ಭೌತ ವಿಜ್ಞಾನ ವಿಭಾಗದಲ್ಲಿ ಐಐಟಿ ಕಾನ್ಪುರದ ಸುಬ್ರಮಣಿಯನ್‌ ಅನಂತ ರಾಮಕೃಷ್ಣ ಹಾಗೂ ಐಐಎಸ್ಸಿಯ ಸುಧೀರ್‌ ಕುಮಾರ್‌ ವೆಂಪತಿ ಜಂಟಿ ಯಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ ಐಆರ್‌) 2016ರ ಜೀವ ವಿಜ್ಞಾನ ವಿಭಾಗದ ಪ್ರಶಸ್ತಿಗೆ ರಾಷ್ಟ್ರೀಯ ಸಸ್ಯಶಾಸ್ತ್ರ ಸಂಶೋಧನಾ ಸಂಸ್ಥೆ (ಎನ್‌ಬಿಆರ್‌ಐ) ಹಾಗೂ ಮಧುಮೇಹಕ್ಕೆ ಮೂಲಿಕೆ ಸಂಯೋಜನೆಯನ್ನು ಅಭಿವೃದ್ಧಿಪಡಿಸಿದ ಲಖನೌದ ಕೇಂದ್ರ ಔಷಧೀಯ ಸಸ್ಯಗಳ ಸಂಸ್ಥೆಗಳು (ಸಿಮ್ಯಾಪ್‌) ಪಾತ್ರವಾಗಿವೆ.

ಭೌತ ವಿಜ್ಞಾನಗಳು ಮತ್ತು ಎಂಜಿನಿಯರಿಂಗ್‌ ವಿಭಾಗದಲ್ಲಿ ಡೆಹ್ರಾ ಡೂನ್‌ನ ಭಾರತೀಯ ಪೆಟ್ರೋಲಿಯಂ ಸಂಸ್ಥೆಗೆ ಸಿಎಸ್‌ಐರ್‌ನ ತಾಂತ್ರಿಕ ಪ್ರಶಸ್ತಿ ನೀಡಲಾಗಿದೆ.

‘ದೃಷ್ಟಿ’ಗೆ ರಾಷ್ಟ್ರೀಯ ಗೌರವ: ಸಿಎಸ್‌ಆರ್‌ಐನ ತಂತ್ರಜ್ಞಾನ ‘ಅನ್ವೇಷಣೆ’ ವಿಭಾಗದಲ್ಲಿ  ಎಲ್‌ಇಡಿ ಆಧರಿತ ದೃಷ್ಟಿ ದೃಗ್ಗೋಚರ ವ್ಯವಸ್ಥೆಯನ್ನು ಸಂಶೋಧಿ ಸಿದ ಬೆಂಗಳೂರಿನ ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೋ ರೇಟರಿಗೆ ಪ್ರಶಸ್ತಿ ಲಭಿಸಿದೆ. ದೃಷ್ಟಿಯು ದೃಗ್ಗೋಚರ ಉಪಕರಣಗಳನ್ನು ಭಾರತದ ವಿಮಾನ ನಿಲ್ದಾಣಗಳಲ್ಲಿ ಅಳವಡಿಸಲಾಗಿದ್ದು, ಏರ್‌ಪೋರ್ಟ್‌ನಲ್ಲಿ ಸುರಕ್ಷಿತ ಲ್ಯಾಂಡಿಂಗ್‌ ಹಾಗೂ ಟೇಕಾಫ್‌ ಮಾಡಲು ಪೈಲಟ್‌ಗಳಿಗೆ ಅಗತ್ಯ ಮಾಹಿತಿ ಒದಗಿಸುತ್ತದೆ. ಆದರೆ ಪ್ರಶಸ್ತಿಗೆ ಆಯ್ಕೆಯಾದ ವಿಜ್ಞಾನಿಗಳ ಪಟ್ಟಿಯಲ್ಲಿ ಮಹಿಳಾ ವಿಜ್ಞಾನಿಯ ಹೆಸರೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT