ಭಾನುವಾರ, ಮೇ 29, 2022
31 °C
ಪಾಕ್‌ ಪೊಲೀಸ್‌ ತರಬೇತಿ ಕೇಂದ್ರ ಗುರಿ

ಉಗ್ರರ ದಾಳಿ: 61 ಕೆಡೆಟ್‌ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಗ್ರರ ದಾಳಿ: 61 ಕೆಡೆಟ್‌ ಸಾವು

ಕ್ವೆಟ್ಟಾ (ಪಿಟಿಐ): ಇಲ್ಲಿನ ಪೊಲೀಸ್‌ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿದ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರರು,  61 ಜನರ ಹತ್ಯೆ ಮಾಡಿದ್ದಾರೆ.ಸೋಮವಾರ ತಡರಾತ್ರಿ ನಡೆದ ದಾಳಿಯಲ್ಲಿ 125ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ 20ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರವಾಗಿದೆ.ಮೃತರಲ್ಲಿ 60 ಮಂದಿ ಪೊಲೀಸ್‌ ತರಬೇತಿ ಅಭ್ಯರ್ಥಿಗಳು ಮತ್ತು ಒಬ್ಬ ಸೇನಾಪಡೆ ಸಿಬ್ಬಂದಿ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಈಚೆಗೆ  ಪಾಕಿಸ್ತಾನದಲ್ಲಿ ಸಂಭವಿಸಿದ ಅತ್ಯಂತ ಭೀಕರ ಭಯೋತ್ಪಾದಕ ಕೃತ್ಯ ಇದಾಗಿದೆ.15ರಿಂದ 25 ವಯೋಮಾನದ ಸುಮಾರು 700 ಅಭ್ಯರ್ಥಿಗಳು ಪೊಲೀಸ್‌ ತರಬೇತಿ ಕೇಂದ್ರದಲ್ಲಿ  ವಾಸವಿದ್ದರು.  ಸೋಮವಾರ ತಡರಾತ್ರಿ ದಾಳಿ ನಡೆಸಿದ ಮೂವರು ಶಸ್ತ್ರಸಜ್ಜಿತ ಉಗ್ರರು ಮೊದಲಿಗೆ ಕಾವಲು ಪೊಲೀಸ್‌ ಹತ್ಯೆ ಮಾಡಿ ಬಳಿಕ ಕೇಂದ್ರದೊಳಗೆ ನುಗ್ಗಿದ್ದಾರೆ. ದಾಳಿಯಿಂದ ಭೀತಿಗೊಂಡ ಹಲವರು ಮೇಲ್ಚಾವಣಿಯಿಂದ ಹಾರಿ ಪಾರಾಗಲು ಯತ್ನಿಸಿದ್ದಾರೆ. ಉಗ್ರರು ರಷ್ಯಾ ನಿರ್ಮಿತ ಕಲಾಶ್ನಿಕೋವ್‌ ಬಂದೂಕುಗಳನ್ನು ಹೊಂದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಉಗ್ರರು ಐದು ಪ್ರತ್ಯೇಕ ಸ್ಥಳಗಳಿಂದ ಕೇಂದ್ರದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದು ವ್ಯವಸ್ಥಿತವಾಗಿ ನಡೆಸಿದ ದಾಳಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.