ಸೋಮವಾರ, ಮಾರ್ಚ್ 27, 2023
24 °C
ಕೋಸ್ಟಲ್‌ವುಡ್‌

ಕೊಂಕಣಿ ಸಿನಿಮಾದಲ್ಲಿ ಉಡುಪಿ ಬೆಡಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಂಕಣಿ ಸಿನಿಮಾದಲ್ಲಿ ಉಡುಪಿ ಬೆಡಗಿ

ಚಿತ್ರರಂಗದಲ್ಲಿ ಮಿಂಚಬೇಕೆಂದು ಅನೇಕರು ಕನಸು ಕಾಣುತ್ತಾರೆ. ಅದೃಷ್ಟ ಇದ್ದವರು ಬೇಗನೆ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಆಕಸ್ಮಿಕವಾಗಿ ದೊರೆತ ಅವಕಾಶ ಬದುಕಿನ ದಿಕ್ಕನ್ನೇ ಬದಲಿಸಿ ಬಿಡುತ್ತದೆ. ಅದಕ್ಕೆ ಉಡುಪಿಯ ಸಾಸ್ತಾನದ ರಂಜಿತಾ ಲುವಿಸ್ ಸಾಕ್ಷಿ.ರೊನಾಲ್ಡ್ ಲುವಿಸ್ ಮತ್ತು ಫ್ಲೇವಿಯಾ ಲುವಿಸ್ ದಂಪತಿಯ ಪುತ್ರಿ ರಂಜಿತಾಗೆ ತಾನು ಸಿನಿಮಾ ನಟಿಯಾಗಬೇಕು ಎಂಬ ಮಹದಾಸೆ ಇದ್ದುದ್ದೇನೋ ನಿಜ. ಆದರೆ ಆ ಆಸೆ ಇಷ್ಟು ಬೇಗ ಫಲಿಸುತ್ತದೆ ಎಂದು ಆಕೆ ಕೂಡ ಅಂದುಕೊಂಡಿರಲಿಲ್ಲವಂತೆ.ಕಳೆದ ಆಗಸ್ಟ್‌ನಲ್ಲಿ ಬಿಡುಗಡೆಯಾದ ಕೊಂಕಣಿ ಚಿತ್ರ ‘ನಶಿಬಾಚೊ ಖೆಳ್’ ಆಕೆಗೆ ಅವಕಾಶದ ಬಾಗಿಲು ತೆರೆಯಿತು. ‘ನಶಿಬಾಚೊ ಖೆಳ್’ ಚಿತ್ರದ ಮೂಲಕ ಹಿರಿತೆರೆಗೆ ರಂಜಿತಾ ಎಂಬ ಬೆಡಗಿ ಪರಿಚಯವಾದರೂ, ಆಕೆಯ ಬಣ್ಣದ ಬದುಕಿಗೆ ಮುನ್ನುಡಿ ಬರೆದದ್ದು ಕೊಂಕಣಿ ಆಲ್ಬಂ ‘ಮೋಗ್ ಆಶೆತಾ’.ರಂಜಿತಾಗೆ ಈಗಾಗಲೇ ಹಿಂದಿ, ತುಳು ಮತ್ತು ಕನ್ನಡ ಚಿತ್ರಗಳಿಂದ ಆಫರ್‌ಗಳು ಬರುತ್ತಿವೆಯಂತೆ. ಸದ್ಯಕ್ಕೆ ಕೊಂಕಣಿ ಮತ್ತು ತುಳು ಸಿನಿಮಾ ‘ಅಶೆಂ ಜಾಲೆಂ ಕಶೆಂ?’ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ರಂಜಿತಾಗೆ ಕೊಂಕಣಿ ಧಾರಾವಾಹಿ ‘ಹೈ ವಾಟ್ ಸರ್ಗಾಚಿ ನ್ಹಯ್’ನಲ್ಲಿ ನಟಿಸುವ ಅವಕಾಶ ಸಿಕ್ಕಿದೆ.ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ. ಮಾಡುತ್ತಿರುವ ರಂಜಿತಾ ಅಭಿನಯದ ಜತೆಗೆ ಗಾಯನ, ನೃತ್ಯ, ನಾಟಕದ ಹಾಗೂ ಬಾಲ್ ಬಾಡ್ಮಿಂಟನ್, ಶಟಲ್, ಕೋಕೋ, ಕಬಡ್ಡಿ, ರಿಲೇ, ಥ್ರೋ ಬಾಲ್‌ನಲ್ಲಿಯೂ ಮಿಂಚಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.