ಸುರೇಶ್ ತಲ್ವಾಲಕರ್‌ಗೆ ಚೌಡಯ್ಯ ಪ್ರಶಸ್ತಿ

7

ಸುರೇಶ್ ತಲ್ವಾಲಕರ್‌ಗೆ ಚೌಡಯ್ಯ ಪ್ರಶಸ್ತಿ

Published:
Updated:
ಸುರೇಶ್ ತಲ್ವಾಲಕರ್‌ಗೆ ಚೌಡಯ್ಯ ಪ್ರಶಸ್ತಿ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2015ನೇ ಸಾಲಿನ ಟಿ. ಚೌಡಯ್ಯ ಪ್ರಶಸ್ತಿಗೆ ಮುಂಬೈನ ಹಿರಿಯ ತಬಲಾ ಕಲಾವಿದ ಸುರೇಶ್ ತಲ್ವಾಲಕರ್‌ ಮತ್ತು ಸಂತ ಶಿಶುನಾಳ ಷರೀಫ ಪ್ರಶಸ್ತಿಗೆ ಸುಗಮ ಸಂಗೀತ ಗಾಯಕಿ ರತ್ನಮಾಲಾ ಪ್ರಕಾಶ್‌ ಅವರು ಭಾಜನರಾಗಿದ್ದಾರೆ.

ಚೌಡಯ್ಯ ಪ್ರಶಸ್ತಿ ₹ 5 ಲಕ್ಷ ನಗದು ಮತ್ತು ಸ್ಮರಣಿಕೆ, ಶಿಶುನಾಳ ಷರೀಫ ಪ್ರಶಸ್ತಿ ₹ 3 ಲಕ್ಷ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವೆ  ಉಮಾಶ್ರೀ ಅವರು ಬುಧವಾರ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಪ್ರಕಟಿಸಿದ್ದಾರೆ.

ಇತರ ವಿವಿಧ ಪ್ರಶಸ್ತಿ ಪುರಸ್ಕೃತರ ಹೆಸರನ್ನೂ ಪ್ರಕಟಿಸಲಾಗಿದೆ. ಈ ಪ್ರಶಸ್ತಿಗಳೂ ತಲಾ ₹ 3 ಲಕ್ಷ ನಗದು ಮತ್ತು ಸ್ಮರಣಿಕೆಗಳನ್ನು ಒಳಗೊಂಡಿವೆ.

ಇದೇ 15ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry