ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 2000, ₹500 ಹೊಸ ನೋಟು ಹೆಚ್ಚು ಸುರಕ್ಷಿತ ಹೇಗೆ?

Last Updated 11 ನವೆಂಬರ್ 2016, 11:53 IST
ಅಕ್ಷರ ಗಾತ್ರ

ನವದೆಹಲಿ: ₹500, ₹1000 ಮುಖಬೆಲೆಯ ನೋಟುಗಳನ್ನು ರದ್ದು ಪಡಿಸಿರುವುದರಿಂದ ಕೈಯಲ್ಲಿರುವ ಹಳೆಯ ₹ 500, ₹1000 ನೋಟುಗಳನ್ನು ಬದಲಿಸಲು ಜನರು ಬ್ಯಾಂಕ್‍ಗಳಿಗೆ ಧಾವಿಸುತ್ತಿದ್ದಾರೆ.

ಹಳೆ ನೋಟು ರದ್ದು ಮಾಡಿದ ನಂತರ ಹೊಸ ₹ 2000 ಮತ್ತು ₹ 500 ನೋಟುಗಳು ಚಲಾವಣೆಗೆ ಬರತೊಡಗಿವೆ. ಈಗಾಗಲೇ ಹೊಸ ₹2000 ನೋಟು ಹಲವರ ಕೈ ಸೇರಿದೆ. ಅಂದ ಹಾಗೆ ಈಗ ಚಲಾವಣೆಗೆ ಬಂದಿರುವ ಹೊಸ ನೋಟುಗಳು ಹೆಚ್ಚು ಸುರಕ್ಷಿತವಾಗಿವೆ.

ಈ ಹೊಸ ನೋಟುಗಳ ವಿಶೇಷತೆ ಏನು?  ಇಲ್ಲಿದೆ ಹೊಸ ನೋಟಿನ ಹೊಸ ರೂಪದ ವಿವರಣೆ

1. ₹ 2000 ಎಂದು ಬರೆದಿರುವ ಸಂಖ್ಯೆ ಪಾರದರ್ಶಕ
2. ಕಡುಗೆಂಪು ಬಣ್ಣದ ನೋಟು
3. ದೇವನಾಗರಿ ಲಿಪಿಯಲ್ಲಿಯೂ 2000 ಎಂದು ಬರೆಯಲಾಗಿದೆ
4. ನೋಟಿನ ಮಧ್ಯಭಾಗದಲ್ಲಿ ಮಹಾತ್ಮ ಗಾಂಧಿಯ ಚಿತ್ರ
5. ಎಡಭಾಗದಲ್ಲಿ ಆರ್ ಬಿ ಐ ಮತ್ತು ರು. 2000 ಎಂದು ಮೈಕ್ರೋ ಅಕ್ಷರದಲ್ಲಿ ಬರೆಯಲಾಗಿದೆ
6.ಸೆಕ್ಯುರಿಟಿ ಥ್ರೆಡ್ ನಲ್ಲಿ ದೇವನಾಗರಿ ಲಿಪಿಯಲ್ಲಿ ಭಾರತ್ ಎಂದು ಬರೆಯಲಾಗಿದೆ. ನೋಟನ್ನು ತಿರುಗಿಸಿದಾಗ ಸೆಕ್ಯುರಿಟಿ ಥ್ರೆಡ್ ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗಲಿದೆ.


7. ಆರ್‌ಬಿಐ ಗವರ್ನರ್‌ ಸಹಿ, ವಾಗ್ದಾನ ಮತ್ತು ಆರ್ ಬಿಐ ಚಿಹ್ನೆಯನ್ನು ಬಲ ಬದಿಗೆ ಸರಿಸಲಾಗಿದೆ
8. ಮಹಾತ್ಮ ಗಾಂಧಿಯ ಚಿತ್ರ ಮತ್ತು ಇಲೆಕ್ಟ್ರೋಟೈಪ್ ವಾಟರ್ ಮಾರ್ಕ್
9. ಎಡಭಾಗದಲ್ಲಿರುವ ಸಂಖ್ಯಾ ಪಟ್ಟಿ ಮತ್ತು ಬಲಭಾಗದಲ್ಲಿ ಕೆಳಗಿರುವ ಸಂಖ್ಯೆಯ ಗಾತ್ರಗಳು ಹಿರಿದಾಗುತ್ತಾ ಹೋಗಿವೆ.
10. ₹ ಚಿಹ್ನೆಯೊಂದಿಗೆ ನೋಟಿನ ಮೌಲ್ಯವನ್ನು ಬರೆಯಲಾಗಿದೆ.
11. ಬಲಭಾಗದಲ್ಲಿ ಅಶೋಕ ಸ್ತಂಬದ ಚಿತ್ರವಿದೆ
12. ಆಯತಾಕಾರದ ಪಟ್ಟಿಯಲ್ಲಿ ಅಡ್ಡವಾಗಿ 2000 ಎಂದು ಬರೆಯಲಾಗಿದೆ
13. ಬಲಭಾಗದಲ್ಲಿ 7  ಚಿಕ್ಕ ಗೆರೆಗಳಿವೆ
14.ಎಡಭಾಗದಲ್ಲಿ ನೋಟು ಮುದ್ರಣವಾದ ಇಸವಿ ನಮೂದಿಸಲಾಗಿದೆ
15. ಸ್ವಚ್ಛ ಭಾರತ ಲೋಗೊ ಮತ್ತು ಸ್ಲೋಗನ್
16, ಮಧ್ಯಭಾಗದಲ್ಲಿ ವಿವಿಧ ಭಾಷೆಗಳಲ್ಲಿ 2 ಸಾವಿರ ಎಂದು ಬರೆಯಲಾಗಿದೆ
17. ‘ಮಂಗಳಯಾನ’ದ (ಮಾರ್ಸ್‌ ಆರ್ಬಿಟರ್‌ ಮಿಷನ್‌– ಮಾಮ್‌) ಚಿತ್ರ (ನೋಟಿನ ಹಿಂಬದಿಯಲ್ಲಿ)

500 ನೋಟಿನಲ್ಲಿರುವ ವಿಶೇಷತೆ

18.ಬಲಭಾಗದಲ್ಲಿ ದೇವನಾಗರಿ ಲಿಪಿ ಸಂಖ್ಯೆಯಲ್ಲಿ ನೋಟಿನ ಮೌಲ್ಯ 500 ಎಂದುಬರೆಯಲಾಗಿದೆ
19.ಎಡಭಾಗದಲ್ಲಿ ವೃತ್ತಾಕಾರದೊಳಗೆ 500 ಎಂದು ಬರೆಯಲಾಗಿದೆ
20. ನೋಟಿನ ಅಂಚಿನಲ್ಲಿ ಎಡಭಾಗದಲ್ಲಿ 5 ಗೆರೆಗಳು
21. ಭಾರತದ ರಾಷ್ಟ್ರಧ್ವಜ ಹಾರುತ್ತಿರುವ ಕೆಂಪು ಕೋಟೆಯ ಚಿತ್ರ (ನೋಟಿನ ಹಿಂಬದಿಯಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT