ಬುಧವಾರ, ಫೆಬ್ರವರಿ 19, 2020
20 °C

ಅರ್ಥವ್ಯವಸ್ಥೆಗೆ ಬಿದ್ದ ಏಟು: ಅಮರ್ತ್ಯ ಸೇನ್‌ ಟೀಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಅರ್ಥವ್ಯವಸ್ಥೆಗೆ ಬಿದ್ದ ಏಟು: ಅಮರ್ತ್ಯ ಸೇನ್‌  ಟೀಕೆ

ನವದೆಹಲಿ: ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದತಿಯು ‘ವಿಶ್ವಾಸದ ಆಧಾರದಲ್ಲಿ ನಿಂತಿರುವ ಅರ್ಥವ್ಯವಸ್ಥೆಯ ಮೂಲಕ್ಕೆ ನೀಡಿದ ನಿರಂಕುಶ ಏಟು’ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ಟೀಕಿಸಿದ್ದಾರೆ.

‘ಈ ಆದೇಶವು ನೋಟುಗಳನ್ನು, ಬ್ಯಾಂಕ್‌ ಖಾತೆಗಳನ್ನು ಹಾಗೂ ನಂಬಿಕೆಯ ನೆಲೆಯಲ್ಲಿ ನಿಂತಿರುವ ಅರ್ಥವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ’ ಎಂದು ಸೇನ್ ಅವರು ಎನ್‌ಡಿಟಿವಿ ವಾಹಿನಿಗೆ ಹೇಳಿದ್ದಾರೆ.

‘ವಿಶ್ವಾಸ ಆಧರಿಸಿ ಬೆಳೆದಿರುವ ಅರ್ಥ ವ್ಯವಸ್ಥೆಯ ಪಾಲಿಗೆ ಈ ತೀರ್ಮಾನ ಅನರ್ಥ ತರಲಿದೆ. ಕಳೆದ 20 ವರ್ಷಗಳಿಂದ ಅರ್ಥ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿತ್ತು. ಇದು ಒಬ್ಬರು ಇನ್ನೊಬ್ಬರ ಮಾತನ್ನು ಒಪ್ಪಿಕೊಳ್ಳುವ ಮೂಲಕ ನಡೆದಿತ್ತು. ನಾವೊಂದು ಭರವಸೆ ನೀಡಿದ್ದೆವು, ಆದರೆ ಆ ಭರವಸೆಯಂತೆ ನಡೆದುಕೊಳ್ಳುವುದಿಲ್ಲ ಎನ್ನುವ ಮೂಲಕ ವ್ಯವಸ್ಥೆಯ ಬುಡಕ್ಕೇ ಏಟು ನೀಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಾನು ಬಂಡವಾಳಶಾಹಿ ವ್ಯವಸ್ಥೆಯನ್ನು ಅಷ್ಟೇನೂ ಮೆಚ್ಚುವ ವ್ಯಕ್ತಿ ಅಲ್ಲ. ಈ ವ್ಯವಸ್ಥೆ ಹಲವು ಯಶಸ್ಸುಗಳನ್ನು ಕಂಡಿದೆ ಎಂಬುದು ನಿಜ. ಆದರೆ, ನೋಟಿಗೆ ಇಂತಿಷ್ಟು ಬೆಲೆ ಇದೆ ಎಂಬ ಭರವಸೆ ನೀಡಿ, ನಂತರ ಭರವಸೆ ಹಿಂಪಡೆಯುವುದು ನಿರಂಕುಶ ತೀರ್ಮಾನ’ ಎಂದು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)