ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2015ರಲ್ಲಿ ಮಾಲಿನ್ಯದಿಂದಾಗಿ ಭಾರತ ಮತ್ತು ಚೀನಾದಲ್ಲಿ ಸಾವಿಗೀಡಾದವರ ಸಂಖ್ಯೆ 16 ಲಕ್ಷ!

Last Updated 3 ಡಿಸೆಂಬರ್ 2016, 6:44 IST
ಅಕ್ಷರ ಗಾತ್ರ

ನವದೆಹಲಿ: ಕಲ್ಲಿದ್ದಲು ಮತ್ತು ಇನ್ನಿತರ ಪಳೆಯುಳಿಕೆ ಇಂಧನಗಳಿಂದುಂಟಾದ ಮಾಲಿನ್ಯದಿಂದಾಗಿ ಚಿನಾ ಮತ್ತು ಭಾರತದಲ್ಲಿ ಕಳೆದ ವರ್ಷ ಸರಿ ಸುಮಾರು 16 ಲಕ್ಷ ಜನರು ಸಾವಿಗೀಡಾಗಿದ್ದಾರೆ ಎಂದು ಗ್ರೀನ್‍ಪೀಸ್ ಸಂಸ್ಥೆ ವರದಿಯಲ್ಲಿ ಹೇಳಿದೆ.

ಪಳೆಯುಳಿಕೆ ಇಂಧನ (ಕಲ್ಲಿದ್ದಲು) ದಿಂದ ಉಂಟಾಗಿರುವ ಮಾಲಿನ್ಯದಿಂದಲೇ ಭಾರತ ಮತ್ತು ಚೀನಾದಲ್ಲಿ ಜನರನ್ನು ಬಲಿತೆಗೆದುಕೊಂಡಿದೆ ಎಂದು ಸಂಸ್ಥೆ ಹೇಳಿದೆ.

ಭಾರತ ಸೇರಿದಂತೆ 10 ದೇಶಗಳಲ್ಲಿ ವಾಯು ಮಾಲಿನ್ಯದಿಂದ ಸಂಭವಿಸಿರುವ ಸಾವಿನ ಸಂಖ್ಯೆ ಜಾಸ್ತಿಯಾಗಿದೆ. ವಾಯು ಮಾಲಿನ್ಯದಿಂದಾಗಿ ಸಂಭವಿಸುವ ಸಾವುಗಳು ದೇಶದ ಜಿಡಿಪಿ ಮೇಲೆ ಪರಿಣಾಮ ಬೀರುತ್ತದೆ. ಚೀನಾ ಮತ್ತು  ಭಾರತದಲ್ಲಿ ಇತ್ತೀಚೆಗೆ ಆರ್ಥಿಕ ಅಭಿವೃದ್ಧಿ ಹೆಚ್ಚಾಗಿದ್ದರೂ, ವಾಯು ಮಾಲಿನ್ಯ ಸಮಸ್ಯೆ ಇಲ್ಲಿ  ಜಾಸ್ತಿಯಾಗುತ್ತಲೇ ಇದೆ.

1990ರ ನಂತರ ವಾಯು ಮಾಲಿನ್ಯದಿಂದಾಗಿ ಸಂಭವಿಸುವ ಸಾವಿನ ಸಂಖ್ಯೆ ಚೀನಾ ಮತ್ತು ಭಾರತದಲ್ಲಿ ಕಡಿಮೆಯಾಗಿದೆ. 2010ರ ನಂತರ ಭಾರತದಲ್ಲಿ ಸಾವಿನ ಸಂಖ್ಯೆಗಳಲ್ಲಿ ಹೆಚ್ಚಳವಾಗಿಲ್ಲ. ಆದರೆ ಕಲ್ಲಿದ್ದಲಿನಿಂದ ಉಂಟಾಗುವ ವಾಯು ಮಾಲಿನ್ಯ ಜೀವಕ್ಕೆ ಮಾರಕವಾಗಿದೆ ಎಂದು ಗ್ರೀನ್‍ಪೀಸ್ ವರದಿಯಲ್ಲಿ ಹೇಳಲಾಗಿದೆ.

2015ರಲ್ಲಿ 1,00,000 ಜನರ ಪೈಕಿ ಭಾರತದಲ್ಲಿ 138 ಮತ್ತು ಚೀನಾದಲ್ಲಿ 115 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT