ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಧಾ ಶ್ರೀಧರ್‌ಗೆ ‘ನೃತ್ಯ ಕಲಾ ಚೇತನ’ ಬಿರುದು ಪ್ರದಾನ

Last Updated 16 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಅಮೆರಿಕದ ಡೆಟ್ರಾಯ್ಟ್‌ನಲ್ಲಿರುವ ‘ನೃತ್ಯೋಲ್ಲಾಸ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್’ ನೃತ್ಯಸಂಸ್ಥೆಯು ಕಳೆದ 25ವರ್ಷಗಳಿಂದ ಸತತವಾಗಿ, ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ, ಶುದ್ಧ ಶಾಸ್ತ್ರೀಯ ಭರತನಾಟ್ಯವನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ಮಾಡಿಕೊಂಡು ಬರುತ್ತಿದೆ. ಈಗಾಗಲೇ ಈ ದಿಸೆಯಲ್ಲಿ ಸುಮಾರು 1ಸಾವಿರ ಮಕ್ಕಳಿಗೆ ತರಬೇತಿ ನೀಡಲಾಗಿದ್ದು, ಅನೇಕ ನಾಟ್ಯೋತ್ಸವಗಳನ್ನು ಏರ್ಪಡಿಸಿದೆ.

ಡಿ.17ನೇ ಶನಿವಾರ ಸಂಜೆ ಎ.ಡಿ.ಎ. ರಂಗಮಂದಿರದಲ್ಲಿ ನಡೆಯಲಿರುವ ವೆಂಕಟೇಶ ನಾಟ್ಯಮಂದಿರದ ರಸಸಂಜೆಯ ಕಾರ್ಯಕ್ರಮದಲ್ಲಿ, ನಾಟ್ಯಗುರು ರಾಧಾ ಶ್ರೀಧರ್ ಅವರಿಗೆ ಗೌರವಾರ್ಪಣೆ ನಡೆಯಲಿದೆ. ನೃತ್ಯಕ್ಷೇತ್ರಕ್ಕೆ ಅವರು ಸಲ್ಲಿಸಿರುವ ಸೇವೆಗಾಗಿ ಅಮೆರಿಕದ ನೃತ್ಯೋಲ್ಲಾಸ ಸಂಸ್ಥೆಯು, ಅವರ ಜೀವಮಾನ ಸಾಧನೆಗಾಗಿ  ‘ನೃತ್ಯ ಕಲಾ ಚೇತನ’ ಎಂಬ ಬಿರುದು ಪ್ರದಾನ ಮಾಡಲಿದೆ. ಇದೇ ಸಂದರ್ಭದಲ್ಲಿ ಸಂಸ್ಥೆಯ ಕಲಾನಿರ್ದೇಶಕಿ ರೂಪಾ ಶ್ಯಾಮಸುಂದರ್ ಭರತನಾಟ್ಯವನ್ನು ಪ್ರಸ್ತುತಪಡಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT