ಸೋಮವಾರ, ಡಿಸೆಂಬರ್ 9, 2019
17 °C

ಹಿಂಸಾರೂಪ ಪಡೆದ ಟ್ರಂಪ್‌ ವಿರುದ್ಧದ ಪ್ರತಿಭಟನೆ: 217 ಮಂದಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಹಿಂಸಾರೂಪ ಪಡೆದ ಟ್ರಂಪ್‌ ವಿರುದ್ಧದ ಪ್ರತಿಭಟನೆ: 217 ಮಂದಿ ಬಂಧನ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಪ್ರಮಾಣ ಸ್ವೀಕರಿಸುತ್ತಿರುವುದನ್ನು ವಿರೋಧಿಸಿ ಜನ ಬೀದಿಗಿಳಿದು ನಡೆಸಿದ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದ್ದು, ಈ ಸಂಬಂಧ 217 ಮಂದಿಯನ್ನು ಬಂಧಿಸಲಾಗಿದೆ.

ಟ್ರಂಪ್‌ ಅವರು ಶುಕ್ರವಾರ ಅಧಿಕಾರಿ ಸ್ವೀಕರಿಸುತ್ತಿರುವುದನ್ನು ಖಂಡಿಸಿ ರಾಜಧಾನಿಯಲ್ಲಿ ರಸ್ತೆಗಿಳಿದ ಜನರು ಪ್ರತಿಭಟನೆ ನಡೆಸಿ, ಟ್ರಂಪ್‌ ವಿರುದ್ಧ ಘೋಷಣೆ ಕೂಗಿ, ಫಲಕಗಳನ್ನು ಪ್ರದರ್ಶಿಸಿದ್ದಾರೆ.

ಇಷ್ಟಕ್ಕೆ ಸಮಾಧಾನಗೊಳ್ಳದ ಜನ, ಟ್ರಂಪ್ ಅವರ ಪ್ರತಿಕೃತಿ ಹದಿಸಿದ್ದಾರೆ. ಕಾರು ಇತರ ವಾಹನಗಳಿಗೆ ಬೆಂಕಿಹಚ್ಚಿದ್ದಾರೆ. ಆರಕ್ಕೂ ಹೆಚ್ಚು ಮಳಿಗೆಗಳಿಗೆ ಹಾನಿ ಮಾಡಿದ್ದಾರೆ.

ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಜಲಫಿರಂಗಿ ಬಳಿಸಿದ್ದಾರೆ. ಘಟನೆ ಸಂಬಂದ 200ಕ್ಕೂ ಹೆಚ್ಚು ಜನರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಆರು ಪೋಲೀಸರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಪ್ರತಿಕ್ರಿಯಿಸಿ (+)