ಬಾಲಕನನ್ನು ಹತ್ಯೆ ಮಾಡಿ, ಶವವನ್ನು ತುಂಡರಿಸಿ ಮಾಂಸ ತಿಂದು, ರಕ್ತ ಕುಡಿದ 16ರ ಹರೆಯದ ಬಾಲಕ

7

ಬಾಲಕನನ್ನು ಹತ್ಯೆ ಮಾಡಿ, ಶವವನ್ನು ತುಂಡರಿಸಿ ಮಾಂಸ ತಿಂದು, ರಕ್ತ ಕುಡಿದ 16ರ ಹರೆಯದ ಬಾಲಕ

Published:
Updated:
ಬಾಲಕನನ್ನು ಹತ್ಯೆ ಮಾಡಿ, ಶವವನ್ನು ತುಂಡರಿಸಿ ಮಾಂಸ ತಿಂದು, ರಕ್ತ ಕುಡಿದ 16ರ ಹರೆಯದ ಬಾಲಕ

ಲುಧಿಯಾನ: 16ರ ಹರೆಯದ ಬಾಲಕನೊಬ್ಬ 9 ಹರೆಯದ ಬಾಲಕನನ್ನು ಕೊಂದು ಆತನ ಮೃತದೇಹವನ್ನು 6 ತುಂಡುಗಳನ್ನು ಮಾಡಿ, ಮಾಂಸ ತಿಂದು ರಕ್ತ ಕುಡಿದ ಘಟನೆ ನಡೆದಿದೆ.

ದೀಪು ಕುಮಾರ್ ಎಂಬ ಬಾಲಕ ಸೋಮವಾರ ನಾಪತ್ತೆಯಾಗಿದ್ದನು. ಆತನಿಗಾಗಿ ಹುಡುಕಾಟ ನಡೆಸಿದಾಗ ದುರ್ಗೀ ಎಂಬ ನಿರ್ಜನ ಪ್ರದೇಶದಲ್ಲಿ ಛಿದ್ರವಾದ ಮೃತದೇಹ ಪತ್ತೆಯಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದಾಗ ಅದೇ ಪ್ರದೇಶದಲ್ಲಿ ವಾಸಿಸುವ  16ರ ಹರೆಯದ ಬಾಲಕ ಈ ಕೃತ್ಯವೆಸಗಿದ್ದಾನೆ ಎಂಬುದು ಬೆಳಕಿಗೆ ಬಂದಿತ್ತು. ಹತ್ಯೆಗೀಡಾದ ಬಾಲಕ ಮತ್ತು ಹತ್ಯೆ ಮಾಡಿದ ಆರೋಪಿ ಬಾಲಕ ಇಬ್ಬರೂ ವಲಸೆ ಕಾರ್ಮಿಕರ ಮಕ್ಕಳಾಗಿದ್ದಾರೆ.

ಹತ್ಯೆ ಮಾಡಿದ ಬಾಲಕ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದು, ಬಾಲಕನನ್ನು ಹತ್ಯೆ ಮಾಡಿದ ದಿನ ಮನೆಗೆ ಬಂದು ಸಹಜವಾಗಿಯೇ ವರ್ತಿಸಿದ್ದನು.

ದೀಪು ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದಾಗ, ಅದರಲ್ಲಿ ದೀಪು ಜತೆ ಇನ್ನೋರ್ವ ಬಾಲಕ ಇರುವುದು ಪತ್ತೆಯಾಗಿತ್ತು. ಆನಂತರ ಸಿಸಿಟಿವಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ಬಾಲಕನ ಜಾಡು ಹಿಡಿದು, ಆತನನ್ನು ತನಿಖೆಗೆ ಒಳಪಡಿಸಿದಾಗ ಸತ್ಯ ಹೊರಬಂದಿತ್ತು.

ಪೊಲೀಸರಲ್ಲಿ ತಪ್ಪೊಪ್ಪಿಕೊಂಡ ಆರೋಪಿ, ತಾನು ದೀಪುವನ್ನು ಕೊಂದು ಆತನ ಮಾಂಸವನ್ನು ತಿಂದು ರಕ್ತ ಕುಡಿದಿದ್ದೇನೆ ಎಂದಿದ್ದಾನೆ.

ಆರೋಪಿ ಬಾಲಕ ಸಾಮಾನ್ಯವಾಗಿ ಕೋಳಿಯ ಹಸಿ ಮಾಂಸವನ್ನೇ ತಿನ್ನುತ್ತಿದ್ದನಂತೆ. ಕೆಲವೊಮ್ಮ  ಆತ ಅವನ ಕೈಯ ಮಾಂಸವನ್ನೇ ಕಚ್ಚುತ್ತಿದ್ದ ಎಂದು ಪೊಲೀಸ್ ಡೆಪ್ಯೂಟಿ ಕಮಿಷನರ್ ಭುಪಿಂದರ್ ಸಿಂಗ್ ಹೇಳಿದ್ದಾರೆ.

ಆರೋಪಿಯನ್ನೀಗ ವೈದ್ಯಕೀಯ  ಪರೀಕ್ಷೆಗೆ ಒಳಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry