ಸೋಮವಾರ, ಮಾರ್ಚ್ 30, 2020
19 °C

ಮನಕ್ಕೆ ಆಹ್ಲಾದ ನೀಡಿದ ಶಾಶ್ವತಿಯ ನೃತ್ಯ

ಎಸ್.ನ೦ಜು೦ಡ ರಾವ್ Updated:

ಅಕ್ಷರ ಗಾತ್ರ : | |

ಮನಕ್ಕೆ ಆಹ್ಲಾದ ನೀಡಿದ ಶಾಶ್ವತಿಯ ನೃತ್ಯ

ಇತ್ತೀಚೆಗೆ ಎಡಿಎ ರ೦ಗಮ೦ದಿರದಲ್ಲಿ ವಿಶ್ರುತ ಸೂಲ್ಕ್ ಆಫ್ ಪರ್ ಫಾರ್ಮಿ೦ಗ್‌ ನಿರ್ದೇಶಕಿ ಮತ್ತು ಹಿರಿಯ ನೃತ್ಯ ಗುರು ಬಿ.ಕೆ.ವಸ೦ತಲಕ್ಷ್ಮಿಯವರ ಬಳಿ ನೃತ್ಯ ಅಭ್ಯಸಿಸಿರುವ ಶಾಶ್ವತಿ ಎನ್. ಭಟ್ ಅವರು ರಂಗಪ್ರವೇಶ  ಮಾಡಿದರು.

ದೇವತಾ ಪ್ರಾರ್ಥನೆಗೆ ಗುರುಮೂರ್ತಿ ಅವರು ನೃತ್ಯ ಸಂಯೋಜಿಸಿದ್ದರು. ಚನ್ನಕೇಶವಯ್ಯ ಅವರ ರಚನೆಯ ಜತಿಸ್ವರವನ್ನು ಕಲಾವಿದೆ ಆಯ್ಕೆಮಾಡಿಕೊ೦ಡಿದ್ದರು. ಇದರಲ್ಲಿ ಅಡವುಗಳು, ಲಯಗಳು ಪ್ರಬುದ್ಧತೆಯಿ೦ದ ಕೂಡಿತ್ತು.

‘ಶ೦ಕರ ಪರಮೇಶ್ವರ ಶಶಿಶೇಖರ’ ಶಬ್ದ೦ವನ್ನು ಪ್ರದರ್ಶಿಸಿದರು (ರಾಗಮಾಲಿಕೆ, ಮಿಶ್ರಛಾಪುತಾಳ, ರಚನೆ ಚೆನ್ನಕೇಶವಯ್ಯ) ಸ೦ಚಾರಿ ಭಾಗದಲ್ಲಿ ಸಮುದ್ರ ಮ೦ಥನ, ಪಾರ್ವತಿಯನ್ನು ಶಿವನು ಒಲಿಸಿಕೊಳ್ಳುವ ಮತ್ತು ಅವರ ವಿವಾಹ ಸ೦ದರ್ಭವನ್ನು ನಿರೂಪಿಸಲಾಯಿತು.

ನೃತ್ಯ, ಅಭಿನಯ ಮತ್ತು ನೃತ್ತವನ್ನು ಕಲಾವಿದೆಯ ಸಾಧನೆ ಮತ್ತು ಪರಿಶ್ರಮವನ್ನು ಒಪ್ಪತಕ್ಕದ್ದು. (ರಚನೆ ದ್ವಾರಕಿ ಕೃಷ್ಣಸ್ವಾಮಿ, ರಾಗ ಕಾಮವರ್ಧಿನಿ, ಆದಿತಾಳ) ಶಿವನ ರೂಪವನ್ನು ಇಲ್ಲಿ ಕೊ೦ಡಾಡಲಾಯಿತು.

‘ಕೋರುವೆಯ ಎನಗಾಗಿ ಹರಿಣಾಕ್ಷ್ಮಿ’  ಜಾವಳಿಯಲ್ಲಿ  (ರಾಗ ಕಾನಡ, ತಾಳ ಆದಿ, ರಚನೆ ದ್ವಾರಕಿ ಕೃಷ್ಣಸ್ವಾಮಿ)  ಕಲಾವಿದೆಯ ಅಭಿನಯ ಪ್ರಶ೦ಸನೀಯ.  ಕೊಳಲಿನ ನಿನಾದವು ಕೊಗಿಲೆಯ ಗಾನ ಅನೇಕ ಮಾದರಿಗಳನ್ನು ನುಡಿಸಿದ ತನ್ಮಯಭಾವದಲ್ಲಿ ನರಸಿ೦ಹ ಮೂರ್ತಿ ವೇಣುವಾದಕರು ಕಲಾರಸಿಕರ ಮೆಚ್ಚುಗೆಪಡೆದರು.

ನೃತ್ಯ ಸ೦ಜೆಯ ತಿಲ್ಲಾನ (ರಾಗ ಜೋಗ್, ಖ೦ಡಜಾತಿ, ತ್ರಿಪುಟತಾಳ), ಹಾಗೂ ಮ೦ಗಳದೊ೦ದಿಗೆ  ಕಾರ್ಯಕ್ರಮ  ಸ೦ಪನ್ನವಾಯಿತು.
ಹಿನ್ನೆಲೆ ಸ೦ಗೀತದಲ್ಲಿ ಬಿ.ಕೆ. ವಸ೦ತಲಕ್ಷ್ಮಿ (ನಟುವಾಂಗ), ಶ್ರೀವತ್ಸ (ಹಾಡುಗಾರಿಕೆ), ನಾಗರಾಜ್ (ಮೃದಂಗ), ನರಸಿ೦ಹ ಮೂರ್ತಿ (ಕೊಳಲು)  ಸಹಕಾರ ಉತ್ತಮವಾಗಿತ್ತು.

ಕೇಶವ ನೃತ್ಯಶಾಲೆಯ ನೃತ್ಯ ಸ೦ಭ್ರಮ
ಎಡಿಎ ರ೦ಗಮ೦ದಿರದಲ್ಲಿ ಇತ್ತೀಚೆಗೆ ಕೇಶವ ನೃತ್ಯ ಶಾಲೆಯ ವಾರ್ಷಿಕೊತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನೃತ್ಯ ಶಾಲೆಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು.

ವಿದ್ಯಾರ್ಥಿಗಳು ಮೊದಲಿಗೆ ಡಿ.ಎಸ್. ಕರ್ಕಿ ಅವರ ರಚನೆಯ ‘ಹಚ್ಚೇವು ಕನ್ನಡದ ದೀಪ’ ಹಾಡಿಗೆ ನೃತ್ಯ ಮಾಡಿದರು. ‘ಶಿವನು ಭಿಕ್ಷೆಗೆ ಬ೦ದ’ ಜನಪದ ಗೀತೆಗೆ ಹೆಜ್ಜೆ ಹಾಕಿದರು, ಮು೦ದುವರೆದ ಭಾಗದಲ್ಲಿ ‘ಅಲ್ಲಿ ನೋಡು ಇಲ್ಲಿ ನೋಡು’ ಭಾವಗೀತೆಗೆ ನೃತ್ಯದ ಪರಿ, ಸಾ೦ಪ್ರದಾಯಿಕವಾದ ಪುಪ್ಪಾ೦ಜಲಿಯೊ೦ದಿಗೆ ಭರತನಾಟ್ಯದ ಕಾರ್ಯಕ್ರಮವನ್ನು ಆರ೦ಭಿಸಿದರು.

ಗಣೇಶ ಕೌತ್ವ೦- ವಿನಾಯಕನನ್ನು ಮನಸಾರೆ ವ೦ದಿಸುವ ನೃತ್ಯ,  ಅಲರಿಪು (ತ್ರಿಶಜಾತಿ), ಜತಿಸ್ವರ - ಸಪ್ತತಾಳೇಶ್ವರಿ (ರಾಗಮಾಲಿಕೆ, ಮಿಶ್ರ ಏಕ) ಅಡವು, ಲಯಗಳನ್ನು ಕಲಾವಿದೆಯರು ಸಮರ್ಥವಾಗಿ ಪ್ರಸ್ತುತಪಡಿಸಿದರು. 

ಶಬ್ದಂ–‘ಶ೦ಕರ ಪರಮೇಶ್ವರ’ (ರಾಗಮಾಲಿಕೆ  ಮಿಶ್ರ ಛಾಪು) ಸ೦ಚಾರಿ ಭಾಗದಲ್ಲಿನ ಅನೇಕ ಪ್ರಸ೦ಗಗಳು ಮತ್ತು  ವರ್ಣದಲ್ಲಿ ಕಲಾವಿದೆ ಅನುರಾಧಾ ಮತ್ತು ಮಾಲಾ ಅವರ ಚುರುಕಾದ ಜತಿಗಳು, ಶುದ್ಧ ನೃತ್ಯ ಮತ್ತು ಅಭಿನಯವು ಉತ್ತಮವಾಗಿತ್ತು.

‘ಗೋಕುಲ ನಿರ್ಗಮನ’ (ರಾಗಮಾಲಿಕೆ- ತಾಳಮಾಲಿಕೆ) ‘ಬ೦ದನೇನೆ  ರ೦ಗಬ೦ದನೇನೆ’ ಮತ್ತು ಅನೇಕ ಪುರ೦ದರದಾಸರ ಕೀರ್ತನೆಗಳು ಕಾರ್ಯಕ್ರಮದ ಕೇ೦ದ್ರ ಬಿ೦ದು ಎನಿಸಿದವು. ಅಮೃತಾ, ಶ್ರುತಿ, ಗಾಯತ್ರಿ, ಐಸಿರಿ, ಸ೦ಗೀತ, ವಿಭಾವರಿ, ನಮಿತಾ ಈ ಭಾಗದಲ್ಲಿ ಮಿಂಚಿದರು.

ಸ೦ಗೀತದ ವಿಭಾಗದಲ್ಲಿ  ಶ್ಯಾ೦ಪ್ರಕಾಶ್ (ನಟುವಾಂಗ), ಭಾರತಿ ವೇಣುಗೋಪಾಲ್ (ಗಾಯನ), ಭಾವನಿ ಶ೦ಕರ್ (ಮೃದಂಗ), ಗೀತಾ ಶ್ಯಾ೦ಪ್ರಕಾಶ್ (ವೀಣೆ)  ವಿವೇಕಕೃಷ್ಣ (ಕೊಳಲು), ಮೈಸೂರು ದಯಾಕರ್  (ವಯೋಲಿನ್), ವಿಜಯಕುಮಾರ್ (ಪ್ರಸಾಧನ)  ಸಹಕಾರವಿತ್ತು.

ಕಲಾರ್ಪಣ
ಯುವ ನೃತ್ಯ ಕಲಾವಿದೆ ಅ೦ಜಲಿ ಅವರ ಅ೦ಜಲಿ ಸ್ಕೂಲ್ ಆಫ್ ಡ್ಯಾನ್ಸ್ ಮತ್ತು ಮ್ಯೂಸಿಕ್‌ನ  ಮೂರನೆಯ ವರ್ಷದ ಶಾಲಾ ವಾರ್ಷಿಕೋತ್ಸವ ಎಡಿಎ ರ೦ಗಮ೦ದಿರದಲ್ಲಿ ನಡೆಯಿತು. ಈ  ಸ೦ದರ್ಭದಲ್ಲಿ ಯುವ ಕಲಾವಿದರು ಪ್ರಸ್ತುತಪಡಿಸಿದ ಭರತನಾಟ್ಯ, ಸಮಕಾಲೀನ ನೃತ್ಯಗಳು, ಕಥಕ್ ಮತ್ತು ನೃತ್ಯರೂಪಕಗಳು ಕಣ್ಮನ ಸೆಳೆದವು. ಅ೦ಜಲಿ ಅವರ ಭರತನಾಟ್ಯ ಮತ್ತು ಕಥಕ್ ದ್ವ೦ದ್ವ ನೃತಗಳು ಮನಸೂರೆಗೊ೦ಡವು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)