7

ಈ ಯುಗಾದಿಗೆ ಗುಲಾಬ್ ಜಾಮೂನಿನ ಸಿಹಿ!

Published:
Updated:
ಈ ಯುಗಾದಿಗೆ ಗುಲಾಬ್ ಜಾಮೂನಿನ ಸಿಹಿ!

ಬಾಯಲ್ಲಿ ಬೆಣ್ಣೆಯಂತೆ ಕರಗುವ ಗುಲಾಬ್ ಜಾಮೂನ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ! ಈ ಬಾರಿಯ ಯುಗಾದಿ ಹಬ್ಬಕ್ಕೆ ಪ್ರಜಾವಾಣಿಯು ಗುಲಾಬ್ ಜಾಮೂನ್ ಮಾಡುವ ರೆಸಿಪಿಯನ್ನು ತಂದಿದೆ. ಜಾಮೂನ್ ಮಾಡುವ ವಿಧಾನಕ್ಕೆ ಪ್ರಜಾವಾಣಿ ರೆಸಿಪಿ ವಿಡಿಯೊ ನೋಡಿ.

ಸಾಮಗ್ರಿಗಳು

1. ಸಪ್ಪೆ ಕೋವ -             100 ಗ್ರಾಂ

2. ಪನೀರ್ -                  1 ಸ್ಪೂನ್

3. ಮೈದಾ -                   2 1/2  ಸ್ಪೂನ್

4. ಏಲಕ್ಕಿ ಪುಡಿ -              ಸ್ವಲ್ಪ

5. ಎಣ್ಣೆ -                       ಕರಿಯಲು

6. ಸಕ್ಕರೆ -                    2 ಕಪ್

7. ನೀರು -                    1 ಕಪ್

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಸಕ್ಕರೆ ಹಾಗೂ ನೀರನ್ನು ಹಾಕಿ ಕುದಿಸಿ ಅಂಟು ಪಾಕ (ನೂಲು ಪಾಕ) ಪಾಕ ಮಾಡಿಟ್ಟುಕೊಳ್ಳಿ. ಈ ಪಾಕಕ್ಕೆ ಏಲಕ್ಕಿ ಪುಡಿಯನ್ನೂ ಹಾಕಿ. ಒಂದು ಬೌಲ್ ನಲ್ಲಿ ಮೈದಾ, ಖೋವಾರ್ಹಾಗೂ ಪನೀರ್ ನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಕಲಸಿ. ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಎಣ್ಣೆಯಲ್ಲಿ ಕರಿಯಿರಿ. ಆಮೇಲೆ ಇವುಗಳನ್ನು ತಣ್ಣಗಾದ ಸಕ್ಕರೆ ಪಾಕಕ್ಕೆ ಹಾಕಿ.  2ಗಂಟೆಯ ನಂತರ ಸರ್ವ್ ಮಾಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry