ಅಲ್ವಾರ್ (ರಾಜಸ್ತಾನ): ರಾಜಸ್ತಾನದ ಅಲ್ವಾರ್ ಎಂಬಲ್ಲಿ ಗೋವುಗಳನ್ನು ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಗೋ ರಕ್ಷಕರು ಹೊಡೆದು ಸಾಯಿಸಿರುವ ಘಟನೆ ನಡೆದಿದೆ.

ರಾಜಸ್ತಾನದಲ್ಲಿ ಗೋ ಸಾಗಣೆ ಮಾಡುತ್ತಿದ್ದ ವೇಳೆ ವಾಹನವನ್ನು ಅಡ್ಡಗಟ್ಟಿದ ಗೋ ರಕ್ಷಕರು ಪೆಹ್ಲೂ ಖಾನ್ (55) ಮತ್ತು ಇತರ ನಾಲ್ಕು ಮಂದಿ ಮೇಲೆ ಹಲ್ಲೆ ನಡೆಸಿದ್ದರು. ಇದರಲ್ಲಿ ತೀವ್ರ ಗಾಯಗೊಳಗಾದ ಪೆಹ್ಲೂ ಖಾನ್ ಸೋಮವಾರ ಮೃತಪಟ್ಟಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.

ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದಾರೆ ಎಂದು ಶಂಕಿಸಿ ಹಲ್ಲೆ ಮಾಡಲು ಮುಂದಾದ ಜನರಿಗೆ ಖಾನ್ ಮತ್ತು ಅವರ ಜತೆಗಿದ್ದವರು ತಾವು ಗೋವುಗಳನ್ನು ಖರೀದಿಸಿದ್ದೇವೆ ಎಂಬುದಕ್ಕೆ ದಾಖಲೆಗಳನ್ನು ತೋರಿಸಿದ್ದರೂ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳಕ್ಕೆ ಸೇರಿದ ಗೋ ರಕ್ಷಕರು ಇವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಜೈಪುರದಿಂದ ಹರಿಯಾಣಕ್ಕೆ ಗೋವುಗಳನ್ನು ಕರೆತರುತ್ತಿದ್ದ ನಾಲ್ಕು ವಾಹನಗಳನ್ನು ಗೋ ರಕ್ಷಕರು ತಡೆಗಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.