7

ಯಾರ ಕೈಗೂ ಸಿಗದಷ್ಟು ಚಿಕ್ಕದಾಗಿ ಕತ್ತರಿಸು

Published:
Updated:

ಮದುವೆ ಸಂಭ್ರಮದಲ್ಲಿ ಅಲಂಕೃತಗೊಂಡು ಬ್ಯೂಟಿ ಪಾರ್ಲರ್‌ನಿಂದ ಹೊರಬರುವ ಮದುಮಗಳು. ಬದುಕಿನ ಘಟನೆಗಳಿಗೆ ಬೇಸತ್ತು ತನ್ನ ಉದ್ದವಾದ ಸುಂದರ ಕೂದಲನ್ನು ಇಂಚಿಂಚಾಗಿ ಕಡಿಮೆ ಮಾಡಿಕೊಳ್ಳುವ ಮತ್ತೊಬ್ಬ ಹೆಣ್ಣುಮಗಳು...

‘ಮಾರ್ಕ್‌ಅಪ್‌’ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್‌ ಆಗಿರುವ ವಿಡಿಯೊ ಮಹಿಳೆಯರ ಬದುಕಿನ ಎರಡೂ ಮುಖಗಳನ್ನು ಅನಾವರಣಗೊಳಿಸಿದೆ.

ಸ್ತ್ರೀ ಸೌಂದರ್ಯದ ಪ್ರತೀಕ ಎನಿಸಿಕೊಂಡಿರುವ ಕೂದಲನ್ನು ದೌರ್ಜನ್ಯದ ಕಾರಣದಿಂದಾಗಿ ಕಿರಿದಾಗಿಸಿಕೊಳ್ಳುವ ಹೆಣ್ಣಿನ ಸಂಕಷ್ಟದ ಬದುಕಿನ ಎಳೆಯನ್ನು ಇಲ್ಲಿ ಬಿಂಬಿಸಲಾಗಿದೆ.

‘ಕೂದಲನ್ನು ಹಿಡಿದು ನೋವಿಗೆ ದೂಡದಿರುವಷ್ಟು ಕಿರಿದಾಗಿ ಕೂದಲನ್ನು ಕತ್ತರಿಸಿ ಹಾಕು’ ಎಂದು ಆಕೆ ಕಣ್ಣೀರಿಡುವುದನ್ನು ಕಂಡಾಗ ಎಂಥವರ ಮನಸ್ಸೂ ಕದಡುತ್ತದೆ.

ಮಹಿಳೆಯ ಅಂತರಂಗದ ದನಿಯಂತಿರುವ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯವಾಗಿದೆ. ಈವರೆಗೆ 34 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 777 ಮಂದಿ ಕಾಮೆಂಟ್ ಮಾಡಿದ್ದಾರೆ.

ಈ ವಿಡಿಯೊ ಕುರಿತಾಗಿ ಪರವಿರೋಧದ ಚರ್ಚೆಯಾಗಿದೆ. ತಾನು ಅನುಭವಿಸುವ ದೌರ್ಜನ್ಯದಿಂದ ನೊಂದು ತನಗೇ ಶಿಕ್ಷೆ ಕೊಟ್ಟುಕೊಳ್ಳುವ ಬದಲು ನೋವುಂಟು ಮಾಡಿದವರ ವಿರುದ್ಧ ದನಿ ಎತ್ತಬೇಕಿತ್ತು ಎನ್ನುವ ಅಭಿಪ್ರಾಯವನ್ನು ಅನೇಕರು ಹಂಚಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry