ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣಾ ಮುಚ್ಚೇ ಕಾಡೇ ಗೂಡೇ ಆಟವಾಡಿ 'ರ‌್ಯಾಂಬೊ' ಬಾಳಿಗೆ ಬಂತು 'ಖೇಲ್ ಮಾಂಡಾಲಾ'

Last Updated 28 ಏಪ್ರಿಲ್ 2017, 2:47 IST
ಅಕ್ಷರ ಗಾತ್ರ

ಜಯಾ ಜಯಾ ಜಾಕೆಟ್ಟು... ಜಯನ ಗಂಡ ರಾಕೆಟ್ಟು ಎಂದು ಹಾಡುತ್ತಾ ಜಾಕೆಟ್‌ನ ಮೋಹಕತೆ ಮತ್ತು ರಾಕೆಟ್‌ನ ವೇಗದೊಂದಿಗೆ ಜನ ಮನಸ್ಸನ್ನು ಗೆದ್ದ ಚಿತ್ರ ಶರಣ್ ಅಭಿನಯದ ರ‌್ಯಾಂಬೊ. ಶರಣ್ ಅಭಿನಯದ ನೂರನೇ ಚಿತ್ರ ಇದಾಗಿತ್ತು. ರಂಜನೆಯನ್ನೇ ಧ್ಯೇಯವಾಗಿಸಿಕೊಂಡ ಈ ಚಿತ್ರದಲ್ಲಿ ಕಣ್ಣಲ್ಲಿ ನೀರು ಜಿನುಗುವಂತೆ ಮಾಡಿದ ಹಾಡೊಂದಿದೆ. 'ಕಣ್ಣಾ ಮುಚ್ಚೇ ಕಾಡೇ ಗೂಡೇ ಆಟ ನಮ್ಮ ಬಾಳು' ಎಂದು ಆರಂಭವಾಗುವ ಈ ಹಾಡನ್ನು ವಿಜಯ್ ಪ್ರಕಾಶ್ ದನಿಯಲ್ಲಿ ಕೇಳುತ್ತಿದ್ದರೆ ನಮಗರಿವಿಲ್ಲದಂತೆ ಕಣ್ಣ ಹನಿ ಜಾರುತ್ತದೆ. 

ಎಲ್ಲರ ಹೃದಯಕ್ಕೆ ಹತ್ತಿರವಾಗುವ ಈ ಹಾಡಿಗೆ ಸ್ಫೂರ್ತಿ ಸಿಕ್ಕಿದ್ದು ಮರಾಠಿ ಚಿತ್ರದಿಂದ. ಅತುಲ್ ಕುಲಕರ್ಣಿ ಅಭಿನಯದ 'ನಟರಂಗ್' ಮರಾಠಿ ಚಿತ್ರದಲ್ಲಿ 'ಖೇಲ್ ಮಾಂಡಲಾ' ಎಂಬ ಹಾಡು ರ‌್ಯಾಂಬೊ ಚಿತ್ರದಲ್ಲಿ ಕಣ್ಣಾ ಮುಚ್ಚೇ ಕಾಡೇ ಗೂಡೇ ಹಾಡಾಗಿದ್ದು ಹೇಗೆ ಎಂಬುದಕ್ಕೆ ಎರಡೂ ಹಾಡುಗಳ ರಾಗ, ಸಂಗೀತವನ್ನೊಮ್ಮೆ ಗಮನಿಸಿ.

ಚಿತ್ರ : ರ‌್ಯಾಂಬೊ
ಹಾಡು:  ಕಣ್ಣಾ ಮುಚ್ಚೇ ಕಾಡೇ ಗೂಡೇ
ಗಾಯಕರು: ವಿಜಯ ಪ್ರಕಾಶ್
ಸಂಗೀತ: ಅರ್ಜುನ್ ಜನ್ಯ


ಸಾಮ್ಯತೆ
ಚಿತ್ರ: ನಟರಂಗ್  (ಮರಾಠಿ)
ಹಾಡು: ಖೇಲ್ ಮಾಂಡಲಾ
ಗಾಯಕರು: ಅಜಯ್ ಗೋಗಾವಲೆ
ಸಂಗೀತ ನಿರ್ದೇಶಕರು: ಅಜಯ್ - ಅತುಲ್

[related]
ಇತರ ಭಾಷೆಗಳ ಹಾಡು, ಸಂಗೀತದಿಂದ ಸ್ಫೂರ್ತಿ ಪಡೆದ ಕನ್ನಡ ಹಾಡುಗಳವನ್ನು ಪರಿಚಯಿಸುವ ಲೇಖನ ಸರಣಿ ಇದು. ಇಂಥಾ ಹಾಡುಗಳ ಬಗ್ಗೆ ನಿಮಗೆ ಮಾಹಿತಿ ಇದ್ದರೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT