ಸುಬ್ರಹ್ಮಣ್ಯಪುರ ಕೆರೆ ಕೋಡಿ ಒಡೆದ ದುಷ್ಕರ್ಮಿಗಳು

7

ಸುಬ್ರಹ್ಮಣ್ಯಪುರ ಕೆರೆ ಕೋಡಿ ಒಡೆದ ದುಷ್ಕರ್ಮಿಗಳು

Published:
Updated:
ಸುಬ್ರಹ್ಮಣ್ಯಪುರ ಕೆರೆ ಕೋಡಿ ಒಡೆದ ದುಷ್ಕರ್ಮಿಗಳು

ಬೆಂಗಳೂರು: ದುಷ್ಕರ್ಮಿಗಳು ಗುರುವಾರ ರಾತ್ರಿ ಸುಬ್ರಹ್ಮಣ್ಯಪುರ ಕೆರೆ ಕೋಡಿಯನ್ನು ಒಡೆದಿದ್ದಾರೆ.

ಕೆರೆಯ ಸುತ್ತಮುತ್ತ ವಾಸಿಸುತ್ತಿರುವ ನಿವಾಸಿಗಳು ರಾತ್ರಿ 9ರಿಂದ 10 ಗಂಟೆಯಲ್ಲಿ ಈ ಕೃತ್ಯ ಎಸಗಿದ್ದಾರೆ. ಇದರಿಂದ ಕೆರೆಯಲ್ಲಿದ್ದ ಅಪಾರ ಪ್ರಮಾಣದ ನೀರು ಹರಿದು ಹೋಗಿದೆ.

ಮೂರನೇ ಬಾರಿ ಇಂತಹ ಘಟನೆ ನಡೆದಿದೆ. ವರ್ಷದ ಹಿಂದೆ ಬಿಬಿಎಂಪಿ ಅಧಿಕಾರಿಗಳು ಕೋಡಿಯನ್ನು ದುರಸ್ತಿಗೊಳಿಸಿದ್ದರು.  ‘ದುಷ್ಕರ್ಮಿಗಳ ವಿರುದ್ಧ ಠಾಣೆಗೆ ದೂರು ನೀಡುತ್ತೇವೆ’ ಎಂದು ಬಿಬಿಎಂಪಿ ಕೆರೆ ವಿಭಾಗದ ಅಧಿಕಾರಿಗಳು ತಿಳಿಸಿದರು.

ಕೆರೆಯನ್ನು ಒತ್ತುವರಿ ಮಾಡಿಕೊಂಡು 350ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ಕೆಲವರು ಕೆರೆಯ ಒಳಗೆ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೆರೆಗೆ ನೀರು ಬಂದಿದೆ. ಇದರಿಂದ ಗುಡಿಸಲುಗಳಿಗೆ ನೀರು ನುಗ್ಗಿದೆ. ಈ ನೀರು ಹೊರಗೆ ಹೋಗಲೆಂದು ಕೋಡಿಯನ್ನು ಒಡೆಯಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೆರೆಯ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಂದ ಸಂಸ್ಕರಿಸದ ಕೊಳಚೆ ನೀರನ್ನು ಕೆರೆಗೆ ಬಿಡಲಾಗುತ್ತಿದೆ. ಇತ್ತೀಚೆಗೆ ಕೆರೆಯಲ್ಲಿ ಮೊದಲ ಬಾರಿಗೆ ನೊರೆ ಸಮಸ್ಯೆ ಕಾಣಿಸಿಕೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry