ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಾಲಯ: ಶ್ರೀಮಠದಿಂದ 100 ಜೋಡಿ ಎತ್ತುಗಳು ದಾನ

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಗೋಶಾಲೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಠದ ಪೀಠಾಧಿಪತಿ ಶ್ರೀಸುಭುದೇಂದ್ರ ತೀರ್ಥ ಶ್ರೀಪಾದಂಗಳವರು ಬಡ ರೈತರಿಗೆ ₹ 50 ಲಕ್ಷ ಮೌಲ್ಯದ 100 ಜೋಡಿ ಎತ್ತುಗಳನ್ನು ದಾನವಾಗಿ ನೀಡಿದರು.

ಲಾಟರಿ ಎತ್ತುವ ಮೂಲಕ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ರೈತರನ್ನು ಆಯ್ಕೆ ಮಾಡಲಾಯಿತು.  ಶ್ರೀಮಠವು ಕೆಲ ದಿನಗಳ ಹಿಂದೆ ರೈತರಿಗೆ ಮೇವು ಹಾಗೂ ಗ್ರಾಮೀಣ ಭಾಗಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಿತ್ತು.

ಬಳಿಕ ಮಾತನಾಡಿದ ಶ್ರೀಗಳು, ‘ಶ್ರೀಮಠವು ಬರದ ಸಮಸ್ಯೆಗಳಿಗೆ ಒಂದಿಲ್ಲೊಂದು ರೀತಿಯಲ್ಲಿ ಸ್ಪಂದಿಸುತ್ತಿದೆ. ಬಡ ರೈತರ ಪ್ರಗತಿಗಾಗಿ ಎತ್ತುಗಳನ್ನು ನೀಡಲಾಗಿದೆ. ಎಲ್ಲ ಎತ್ತುಗಳು ಶ್ರೀಮಠದ ಗೋಶಾಲಾಯಲ್ಲಿಯೇ ಬೆಳೆದಿವೆ. ಹೀಗಾಗಿ ಇವುಗಳನ್ನು ರಾಯರ ಪ್ರಸಾದ ಎಂದೇ ತಿಳಿಯಬೇಕು’ ಎಂದರು.

‘ಕೆಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿಯ ವರೆಗೆ 500 ಎತ್ತುಗಳನ್ನು ದಾನವಾಗಿ ನೀಡಲಾಗಿದೆ. ಎತ್ತುಗಳನ್ನು ಸಾಕಲು ರೈತರಿಗೆ ಸಾಧ್ಯವಾಗದಿದ್ದಲ್ಲಿ ಶ್ರೀಮಠಕ್ಕೆ ಹಿಂದಿರುಗಿಸಬಹುದು. ಯಾವುದೇ ಕಾರಣಕ್ಕೂ ಕಸಾಯಿಖಾನೆಗಳಿಗೆ ದೂಡಬಾರದು’ ಎಂದು ಮನವಿ ಮಾಡಿದರು.

ಪಂಡಿತ್ ಗಿರಿರಾಜಾಚಾರ್, ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್, ಅಧಿಕಾರಿ ಶ್ರೀಪತಿ ಹಾಗೂ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT