ಬಡ ಕುಟುಂಬಕ್ಕೆ ಉದ್ಯಮಿ ಆಸರೆ

7
ರೈ ಎಸ್ಟೇಟ್ ಚಾರಿಟಬಲ್ ಟ್ರಸ್ಟ್‌ನಿಂದ ಮನೆ ದುರಸ್ತಿ

ಬಡ ಕುಟುಂಬಕ್ಕೆ ಉದ್ಯಮಿ ಆಸರೆ

Published:
Updated:
ಬಡ ಕುಟುಂಬಕ್ಕೆ ಉದ್ಯಮಿ ಆಸರೆ

ಪುತ್ತೂರು: ಜೋಪಡಿಯಲ್ಲಿ ಬದುಕು ಸಾಗಿಸುತ್ತಿದ್ದ ಬಡ ಕುಟುಂಬಕ್ಕೆ ರೈ ಎಸ್ಟೇಟ್ ಎಜುಕೇಷನಲ್‌ ಚಾರಿಟಬಲ್ ಟ್ರಸ್ಟ್ ಪುತ್ತೂರು ಜನಸೇವಾ ಕೇಂದ್ರದ ಸಹಯೋಗದಲ್ಲಿ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರು ಮನೆ ನಿರ್ಮಾಣ ಮಾಡಿ ಕೊಟ್ಟಿದ್ದಾರೆ.

ಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೈತಾಡಿಯ ಅಚ್ಚುತ ಪೂಜಾ ರಿ ಮತ್ತು ಪುತ್ರ ಸತೀಶ್ ಪೂಜಾರಿ  ಪಾಶ್ವವಾಯು ಪೀಡಿತರಾಗಿದ್ದು, 6 ಮಂದಿ ಇರುವ ಈ ಕುಟುಂಬ ಸಿಮೆಂಟ್ ಶೀಟ್‌ ಜೋಪಡಿಯಲ್ಲಿ ವಾಸವಾಗಿತ್ತು. ಶೋಚನೀಯ ಸ್ಥಿತಿಯಲ್ಲಿದ್ದ ಈ ಕುಟುಂಬದ ಸಮಸ್ಯೆಯನ್ನು ಅರ್ಥೈಸಿ ಕೊಂಡ ಅಶೋಕ್ ಕುಮಾರ್ ರೈ ಇದೀಗ ತಮ್ಮ ಟ್ರಸ್ಟ್‌ ಮೂಲಕ ಅವರ ಮನೆ ಯನ್ನು ದುರಸ್ತಿ ಮಾಡಿ ಹೊಸಮನೆ ಕಟ್ಟಿಸುವ ಮೂಲಕ ಅವರ ಕಷ್ಟಗಳಿಗೆ ಸ್ಪಂದಿಸಿದ್ದಾರೆ.

ಅಚ್ಚುತ ಪೂಜಾರಿ ಅವರು 4 ವರ್ಷ ಗಳ ಹಿಂದೆ ಕುಸಿದು ಬಿದ್ದು ನರ ದೌರ್ಬ ಲ್ಯಕ್ಕೊಳಗಾಗಿದ್ದರು. ಈ ನಡುವೆ ಲಾರಿ ಚಾಲಕನಾಗಿ ದುಡಿಯುತ್ತಿದ್ದ ಹಿರಿಯ ಪುತ್ರ ಸತೀಶ್ ಪೂಜಾರಿ ಇದ್ದಕ್ಕಿದ್ದಂತೆ ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆಗೆ ದೇಹದ ಸ್ಥಿಮಿತ ಕಳೆದುಕೊಂ ಡಿದ್ದರು.  ಈ ಕುಟುಂಬ ಮೊಟ್ಟೆತ್ತಡ್ಕದ ಲ್ಲಿದ್ದ 5ಸೆಂಟ್ಸ್ ಜಾಗ ಮತ್ತು ಮನೆಯನ್ನು ಮಾರಾಟ ಮಾಡಿ ನೈತಾಡಿಗೆ ಬಂದು  ಸಿಮೆಂಟ್ ಶೀಟ್‌ನ ಜೋಪಡಿಯಲ್ಲಿ ನೆಲೆ ಸಿತ್ತು. ಅಚ್ಚುತ ಪೂಜಾರಿ ಅವರ ಕಿರಿಯ ಪುತ್ರ ದಿನೇಶ್ ಅವರು ರಿಕ್ಷಾ ಚಾಲಕ ನಾಗಿ ಮತ್ತು ಸತೀಶ್ ಪೂಜಾರಿ ಅವರ ಪತ್ನಿ ಕವಿತಾ  ಮುಂಡೂರು ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಪಾಲಕಿಯಾಗಿ ದುಡಿದು ಸಂಪಾದಿಸುತ್ತಿದ್ದ ಆದಾಯ ಹಾಗೂ  ಅಚ್ಚುತ ಪೂಜಾರಿ ಹಾಗೂ ಅವರ ಪುತ್ರ ಸತೀಶ್ ಪೂಜಾರಿ ಅವರಿಗೆ ಅಂಗವಿಕಲ ವೇತನ ಬಿಟ್ಟರೆ ಬೇರಾ ವುದೇ ಆರ್ಥಿಕ ಮೂಲಗಳಿಲ್ಲ.

ಪುತ್ತೂರು ನಗರಸಭೆಯ ಸದಸ್ಯ ರಮೇಶ್ ರೈ ಅವರು ಅಚ್ಚುತ ಪೂಜಾರಿ ಅವರ ಕುಟುಂಬದ ಸ್ಥಿತಿಯನ್ನು ಅಶೋಕ್ ಕುಮಾರ್ ರೈ ಅವರ ಗಮನಕ್ಕೆ ತಂದಿದ್ದರು. ಅದಕ್ಕೆ ಸ್ಪಂದಿಸಿದ ಅಶೋ ಕ್‌ಕುಮಾರ್ ಮನೆಯನ್ನು ದುರಸ್ತಿಗೊ ಳಿಸಿ ಶುಕ್ರವಾರ ಸಾಂಕೇತಿಕವಾಗಿ ಉದ್ಘಾಟಿಸಿದರು.

ವಿದ್ಯಾಭ್ಯಾಸಕ್ಕೆ ಸಹಾಯ, ವಿದ್ಯುತ್ ಸೌಲಭ್ಯ- ಭರವಸೆ:  ಮನೆ ಉದ್ಘಾಟ ನೆಯ ವೇಳೆ ಮಾತನಾಡಿದ ಅಶೋಕ್‌ ಕುಮಾರ್‌ ರೈ ‘ಎಷ್ಟೋ ಮಂದಿ ಬಡವರ ಸ್ಥಿತಿ ಶೋಚನಿಯವಾಗಿದ್ದು, ಸರ್ಕಾರಿ ಸೌಲಭ್ಯಗಳು ಸರಿಯಾಗಿ ಬಡವರ ಬಳಿಗೆ ತಲುಪುತ್ತಿಲ್ಲ. ಅಚ್ಚುತ ಪೂಜಾರಿ ಅವರ ಮನೆಗೆ ಮೊದಲ ಬಾರಿಗೆ ನಾನು ಬಂದು ನೋಡಿದಾಗ ಸಿಮೆಂಟ್ ಶೀಟ್‌ನ ಜೋಪಡಿಯನ್ನು ಕಂಡಾಗ ಮನ ಕರ ಗಿತು. ಈ ಕುಟುಂಬದ ಕಷ್ಟವನ್ನು ಅರಿತು ಕೊಂಡು ಸುಮಾರು ₹2 ಲಕ್ಷ ವೆಚ್ಚದಲ್ಲಿ ಆ ಜೋಪಡಿಯನ್ನು ಪ್ರಾಥಮಿಕ ಸೌಲ ಭ್ಯಗಳಿರುವ ಮನೆಯಾಗಿ ನವೀಕರಿಸಿ ನೀಡಲಾಗಿದೆ. ಮುಂದೆ ಟ್ರಸ್ಟ್ ವತಿ ಯಿಂದ ಮನೆಗೆ ವಿದ್ಯುತ್ ಸೌಲಭ್ಯ ಮಾಡಿ ಕೊಡಲಾಗುವುದು. ಸತೀಶ್ ಪೂಜಾರಿ ಅವರ ಪುತ್ರನ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸಲಾಗುವುದು’ ಎಂದು ತಿಳಿಸಿದರು.   

ಆರ್ಯಾಪು ಪಂಚಾಯಿತಿ ಸದಸ್ಯ ರಾದ ರಮೇಶ್ ರೈ ಡಿಂಬ್ರಿ, ರೇಖನಾಥ ರೈ,  ಆದರ್ಶ ರೈ ಉಪ್ಪಿನಂಗಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry