ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಬಂಧಿಯೇ ಸಾಕ್ಷಿ ಎಂಬ ಕಾರಣಕ್ಕೆ ಹೇಳಿಕೆ ತಿರಸ್ಕರಿಸಬಾರದು– ‘ಸುಪ್ರೀಂ’

Last Updated 4 ಜೂನ್ 2017, 8:14 IST
ಅಕ್ಷರ ಗಾತ್ರ

ನವದೆಹಲಿ: ಸಾಕ್ಷಿ ಹೇಳಿದವರು ಹತ್ಯೆಗೆ ಒಳಗಾದ ವ್ಯಕ್ತಿಯ ಸಂಬಂಧಿ ಎಂಬ ಒಂದೇ ಕಾರಣಕ್ಕೆ ಅವರ ಹೇಳಿಕೆಯನ್ನು ತಿರಸ್ಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಇಂತಹ ಸಾಕ್ಷಿಗಳ ಹೇಳಿಕೆಯನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು ಎಂದು ನ್ಯಾಯ ಮೂರ್ತಿ ಎಲ್. ನಾಗೇಶ್ವರ ರಾವ್ ಮತ್ತು ನವೀನ್ ಸಿನ್ಹಾ ಅವರಿದ್ದ ನ್ಯಾಯಪೀಠ ಸಲಹೆ ಮಾಡಿದೆ.

ಜ್ಞಾನಶೇಖರನ್ ಎಂಬುವವರ ಹತ್ಯೆಗೆ ಸಂಬಂಧಿಸಿದಂತೆ ತಮಿಳುನಾಡಿನ ಬಾಲ ಸುಬ್ರಮಣಿಯನ್, ಗೋವಿಂದರಾಜು ಮತ್ತು ಗೋವಿಂದರಾಜು ಪುತ್ರ ಚಂದ್ರಶೇಖರನ್ ಅವರಿಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯನ್ನು ನ್ಯಾಯಪೀಠ ಎತ್ತಿ ಹಿಡಿದ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಹತ್ಯೆಗೀಡಾಗಿರುವ ಜ್ಞಾನಶೇಖರನ್ ಅವರು ಬಾಲಸುಬ್ರಮಣಿಯನ್ ಮತ್ತು ಗೋವಿಂದರಾಜು ಅವರ ಸಹೋದರ. ಇವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಪ್ರಾಸಿಕ್ಯೂಷನ್ ಪರ ಸಾಕ್ಷಿ ಹೇಳಿದ ಲಕ್ಷ್ಮಿ ಅವರು ಹತ್ಯೆಯಾದ ಜ್ಞಾನಶೇಖರನ್ ಪತ್ನಿ. ಇನ್ನಿಬ್ಬರು ಸಾಕ್ಷಿಗಳು ಸಹ ಲಕ್ಷ್ಮಿ  ಅವರ ಹತ್ತಿರದ ಸಂಬಂಧಿಗಳು. ಆದ್ದರಿಂದ ಸಾಕ್ಷಿ ಹೇಳಿದವರು ಹಿತಾಸಕ್ತಿ ಉಳ್ಳವರಾಗಿದ್ದು, ಇವರ ಹೇಳಿಕೆಯ ಆಧಾರದ ಮೇಲೆ ವಿಧಿಸಿರುವ ಶಿಕ್ಷೆಯು ಸಮಂಜಸವಲ್ಲ ಎಂಬುದು ಮೇಲ್ಮನವಿದಾರರ ವಾದವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT