ಮಾಜಿ ಸಚಿವರ ಮಗನಿಂದ ಲೈಂಗಿಕ ಕಿರುಕುಳ

7

ಮಾಜಿ ಸಚಿವರ ಮಗನಿಂದ ಲೈಂಗಿಕ ಕಿರುಕುಳ

Published:
Updated:
ಮಾಜಿ ಸಚಿವರ ಮಗನಿಂದ ಲೈಂಗಿಕ ಕಿರುಕುಳ

ಬೆಂಗಳೂರು: ಮಾನವ ಸಂಪನ್ಮೂಲ ಅಧಿಕಾರಿ ಎಂದು ಹೇಳಿಕೊಂಡು ಯುವತಿಯನ್ನು ಸಂದರ್ಶನಕ್ಕೆ ಕರೆದು ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ ಬಂಧಿತನಾಗಿರುವ ಹಬೀಬ್ ಗನಿ (26),  ಜಮ್ಮು ಕಾಶ್ಮೀರದ ಮಾಜಿ ಸಚಿವರೊಬ್ಬರ ಪುತ್ರ.

ಉಡುಪಿಯ ಯುವತಿಯನ್ನು ಮೇ 15ರಂದು ಸಂದರ್ಶನಕ್ಕೆ ಕರೆಸಿದ್ದ ಆತ, ಕೈ ಹಿಡಿದು ಎಳೆದಾಡಿ ಕಾರಿನಲ್ಲಿ ಮನೆಗೆ ಕರೆದೊಯ್ಯಲು ಯತ್ನಿಸಿದ್ದ. ಆರೋಪಿಯನ್ನು ಬಂಧಿಸಿರುವ ಪೊಲೀಸರು, ಆತನಿಂದ ಹೇಳಿಕೆ ಪಡೆದಿದ್ದಾರೆ. ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.

‘ಉದ್ಯೋಗ ಹುಡುಕುತ್ತಿದ್ದ 68 ಯುವತಿಯರಿಗೆ ಆತ ಕಳೆದ ತಿಂಗಳಲ್ಲಿ ಕರೆ ಮಾಡಿದ್ದ. ಉಡುಪಿಯ ಯುವತಿ ಹೊರತುಪಡಿಸಿ ಉಳಿದವರ್‌್ಯಾರೂ ದೂರು ಕೊಟ್ಟಿಲ್ಲ’ ಎಂದು ಪೊಲೀಸರು ತಿಳಿಸಿದರು.

‘ಒಂದು ವರ್ಷ ಉತ್ತರ ಪ್ರದೇಶದಲ್ಲಿದ್ದ ಆತ ಅಲ್ಲಿಯ ವಿಳಾಸ ನೀಡಿ ಸಿಮ್‌ ಖರೀದಿಸಿದ್ದ. ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆತ, ಇಲ್ಲಿ ಮತ್ತೊಂದು ಸಿಮ್‌ ಖರೀದಿಸಿದ್ದ. ಯುವತಿಯರನ್ನು ಸಂಪರ್ಕಿಸಲು ಉತ್ತರ ಪ್ರದೇಶದ ಸಿಮ್ ಬಳಸುತ್ತಿದ್ದ.’

ವೆಬ್‌ಸೈಟ್‌ನಿಂದ ಮಾಹಿತಿ ಸಂಗ್ರಹ: ‘ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕಿದ್ದ  ಆರೋಪಿಯು ಉದ್ಯೋಗದ ಮಾಹಿತಿ ನೀಡುವ ವೆಬ್‌ಸೈಟ್‌ಗಳಿಂದ ಯುವತಿಯರ ವೈಯಕ್ತಿಕ ಮಾಹಿತಿ ಸಂಗ್ರಹಿಸುತ್ತಿದ್ದ. ಬಳಿಕವೇ ಸಂದರ್ಶನಕ್ಕೆ ಕರೆದು ಲೈಂಗಿಕ ಕಿರುಕುಳ ನೀಡುತ್ತಿದ್ದ’ ಎಂದು ತನಿಖಾಧಿಕಾರಿ ತಿಳಿಸಿದರು.  

‘ಬಂಧಿಸಿ ಜೀಪಿನಲ್ಲಿ ಕರೆತರುವಾಗ  ಆರೋಪಿಯು ಮೊಬೈಲನ್ನು ಚಲಿಸುತ್ತಿದ್ದ ಆಟೊವೊಂದರೊಳಗೆ ಎಸೆದು ಸಾಕ್ಷ್ಯ  ನಾಶಕ್ಕೆ ಯತ್ನಿಸಿದ್ದ. ಬಳಿಕ ಆಟೊ ಪತ್ತೆ ಮಾಡಿ ಮೊಬೈಲ್‌ ಪಡೆದೆವು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry