ನಿರ್ಮಾಪಕ ಕೆ.ಎ. ಸುರೇಶ್‌ ಅವರಿಂದ ಕಿರುಕುಳ: ಆವಂತಿಕಾ ಶೆಟ್ಟಿ ಆರೋಪ

7
ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಪೋಸ್ಟ್‌

ನಿರ್ಮಾಪಕ ಕೆ.ಎ. ಸುರೇಶ್‌ ಅವರಿಂದ ಕಿರುಕುಳ: ಆವಂತಿಕಾ ಶೆಟ್ಟಿ ಆರೋಪ

Published:
Updated:
ನಿರ್ಮಾಪಕ ಕೆ.ಎ. ಸುರೇಶ್‌ ಅವರಿಂದ ಕಿರುಕುಳ: ಆವಂತಿಕಾ ಶೆಟ್ಟಿ ಆರೋಪ

ಬೆಂಗಳೂರು: ನಿರ್ಮಾಪಕ ಕೆ.ಎ. ಸುರೇಶ್‌ ಅವರಿಂದ ತಮಗೆ ಕಿರುಕುಳ ಹೆಚ್ಚಾಗಿದೆ ಎಂದು ನಟಿ ಆವಂತಿಕಾ ಶೆಟ್ಟಿ ಆರೋಪಿಸಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಆವಂತಿಕಾ ಶನಿವಾರ ಪೋಸ್ಟ್‌ ಒಂದನ್ನು ಹಾಕಿದ್ದಾರೆ.

‘ಆವಂತಿಕಾ ಶೆಟ್ಟಿ ಚಿತ್ರೀಕರಣಕ್ಕೆ ಸರಿಯಾಗಿ ಬರುತ್ತಿಲ್ಲ’ ಎಂದು ‘ಕನ್ನಡ ಮೀಡಿಯಂ ರಾಜು’ ಚಿತ್ರದ ನಿರ್ಮಾಪಕ ಕೆ.ಎ. ಸುರೇಶ್ ಇತ್ತೀಚೆಗೆ ಆರೋಪಿಸಿದ್ದರು. ಆದರೆ, ಆವಂತಿಕಾ ಈಗ ಸುರೇಶ್‌ ಅವರ ವಿರುದ್ಧ ಪ್ರತ್ಯಾರೋಪ ಮಾಡಿದ್ದಾರೆ.

‘ನಿರ್ಮಾಪಕ ಸುರೇಶ್‌ ಅವರಿಂದ ಕಿರುಕುಳ ಹೆಚ್ಚಾಗಿದೆ. ಚಿತ್ರದ ಸಂಭಾವನೆಯ ಚೆಕ್ ಬೌನ್ಸ್‌ ಆಗಿದೆ. ಈ ಬಗ್ಗೆ ಅವರಿಗೆ ತಿಳಿಸಿದರೆ ಅವರಿಂದ ಪ್ರತಿಕ್ರಿಯೆಯೇ ಇಲ್ಲ. ನಾನು ‘ಕನ್ನಡ ಮೀಡಿಯಂ ರಾಜು’ ಚಿತ್ರದಲ್ಲಿ ನನ್ನ ಪಾತ್ರದ ಬಹುತೇಕ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ಆದರೆ, ನನ್ನ ನಟನೆ ಸರಿಯಿಲ್ಲ ಎಂದು ದೂರಿ ನಿರ್ಮಾಪಕರು ನನ್ನನ್ನು ಚಿತ್ರದಿಂದ ಹೊರಹೋಗುವಂತೆ ತಿಳಿಸಿದ್ದಾರೆ. ಈ ರೀತಿಯ ಅನ್ಯಾಯ ಚಿತ್ರರಂಗದಲ್ಲಿರುವ ಬೇರೆ ಯಾವ ಹೆಣ್ಣುಮಕ್ಕಳಿಗೂ ಆಗದಿರಲಿ ಎಂದು ಈ ವಿಚಾರವನ್ನು ಬಹಿರಂಗವಾಗಿ ಹೇಳುತ್ತಿದ್ದೇನೆ’ ಎಂದು ಪೋಸ್ಟ್‌ನಲ್ಲಿ ಆವಂತಿಕಾ ತಿಳಿಸಿದ್ದಾರೆ.

‘ಆವಂತಿಕಾ ಚಿತ್ರೀಕರಣಕ್ಕೆ ಸರಿಯಾಗಿ ಬರುತ್ತಿರಲಿಲ್ಲ. ಇದರಿಂದ ಅವರನ್ನು ಸಿನಿಮಾದಿಂದ ಕೈಬಿಡಲಾಗಿದೆ. ಹೀಗಾಗಿ ಅವರು ಈ ರೀತಿ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ’ ಎಂದು ಕೆ.ಎ. ಸುರೇಶ್‌ ಹೇಳಿದ್ದಾರೆ.

ನಟಿ ಆವಂತಿಕಾ ಶೆಟ್ಟಿ ಈ ಹಿಂದೆ ‘ರಂಗಿತರಂಗ’, ‘ರಾಜರಥ’ ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry