‘ಟ್ರಿಣ್‌ ಟ್ರಿಣ್‌’ ಸೈಕಲ್‌ ಯೋಜನೆಗೆ ಚಾಲನೆ

7

‘ಟ್ರಿಣ್‌ ಟ್ರಿಣ್‌’ ಸೈಕಲ್‌ ಯೋಜನೆಗೆ ಚಾಲನೆ

Published:
Updated:
‘ಟ್ರಿಣ್‌ ಟ್ರಿಣ್‌’ ಸೈಕಲ್‌ ಯೋಜನೆಗೆ ಚಾಲನೆ

ಮೈಸೂರು: ವಾಹನ ದಟ್ಟಣೆ ಕಡಿಮೆ ಮಾಡಿ ಪರಿಸರ ಕಾಪಾಡುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಸಾರ್ವಜನಿಕ ಸೈಕಲ್‌ ಬಳಕೆ ಯೋಜನೆ ‘ಟ್ರಿಣ್‌ ಟ್ರಿಣ್‌’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಭಾನುವಾರ ಚಾಲನೆ ನೀಡಿದರು. 

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ನಿರ್ಮಿಸಿರುವ ಸೈಕಲ್‌ ನಿಲುಗಡೆ ಕೇಂದ್ರದ ಬಳಿ ಐದು ನಿಮಿಷ ಸೈಕಲ್‌ ಸವಾರಿ ಮಾಡಿದರು.

ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ನಗರಾಭಿವೃದ್ಧಿ ಸಚಿವ ಆರ್‌.ರೋಷನ್‌ ಬೇಗ್‌ ಅವರನ್ನು ಹಿಂದಿಕ್ಕಿ ಸಾರ್ವಜನಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

ಸಾರ್ವಜನಿಕರು ಚಾಮುಂಡಿಬೆಟ್ಟ ಸೇರಿದಂತೆ ನಗರದ ವಿವಿಧ ಸ್ಥಳಗಳಿಗೆ ತೆರಳಬೇಕಾದ ಸಂದರ್ಭದಲ್ಲಿ ಈ ಸೌಲಭ್ಯ ಬಳಸಿಕೊಳ್ಳಬಹುದು. 52 ಡಾಕಿಂಗ್‌ (ಸೈಕಲ್‌ ನಿಲುಗಡೆ ಕೇಂದ್ರ) ನಿರ್ಮಿಸಲಾಗಿದ್ದು, 450 ಸೈಕಲ್‌ಗಳು ಬಾಡಿಗೆಗೆ ಲಭ್ಯ ಇವೆ. ₹ 350 ಶುಲ್ಕ ನೀಡಿ ನೋಂದಾಯಿಸಿಕೊಳ್ಳಬೇಕು. ₹ 20 ಕೋಟಿ ವೆಚ್ಚದಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry